ಬಿಎಂಸಿಆರ್‌ಐನಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ, ಶಸ್ತ್ರಚಿಕಿತ್ಸೆ ಮುಂದಕ್ಕೆ!

| Updated By: ವಿವೇಕ ಬಿರಾದಾರ

Updated on: Nov 27, 2024 | 2:37 PM

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವಿದ್ಯುತ್ ವೋಲ್ಟೇಜ್ ಏರಿಳಿತದಿಂದಾಗಿ ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆ ಹಾನಿಗೊಳಗಾಗಿದೆ. ಇದರಿಂದಾಗಿ ಆಯ್ದ ಶಸ್ತ್ರಚಿಕಿತ್ಸೆಗಳನ್ನು ಐದು ದಿನಗಳ ಕಾಲ ಮುಂದೂಡಲಾಗಿದೆ. ತುರ್ತು ಶಸ್ತ್ರಚಿಕಿತ್ಸೆಗಳನ್ನು ಫ್ಯಾನ್ ಮತ್ತು ಕೂಲರ್‌ಗಳ ಸಹಾಯದಿಂದ ನಡೆಸಲಾಗುತ್ತಿದೆ. ಸೋಂಕು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಸಿಆರ್‌ಐನಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ, ಶಸ್ತ್ರಚಿಕಿತ್ಸೆ ಮುಂದಕ್ಕೆ!
ಬಿಎಂಆರ್​ಸಿಐ
Follow us on

ಬೆಂಗಳೂರು, ನವೆಂಬರ್​ 27: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI)ಯಲ್ಲಿ ಆಯ್ದ ಶಸ್ತ್ರ ಚಿಕಿತ್ಸೆಗಳನ್ನು ಮುಂದಿನ ಐದು ದಿನಗಳ ಕಾಲ ಮುಂದೂಡಿದೆ. 200ಕ್ಕೂ ಹೆಚ್ಚು ಹಾಸಿಗೆಯುಳ್ಳ ಬಿಎಂಸಿಆರ್‌ಐನಲ್ಲಿ ಒಂದೇ ಬಾರಿಗೆ ಆರು ಕಡೆ ಶಸ್ತ್ರಚಿಕಿತ್ಸೆ (Surgery) ಮಾಡಬಹುದು. ಪ್ರತಿದಿನ ಇಲ್ಲಿ 20 ರಿಂದ 30 ಶಸ್ತ್ರಚಿಕಿತ್ಸೆ ನಡೆಯುತ್ತವೆ. ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಾರೆ.

ಆದರೆ, ಕಳೆದ ಕಳೆದ ನಾಲ್ಕು ದಿನಗಳ ಹಿಂದೆ ವಿದ್ಯುತ್ ವೋಲೈಜ್‌ನ ಏರಿಳಿತದಿಂದಾಗಿ ಆಸ್ಪತ್ರೆಯ ಕೇಂದ್ರಿಕೃತ ಹವಾ ನಿಯಂತ್ರಣಗಳ (AC) ಉಪಕರಣಗಳಿಗೆ ಹಾನಿಯುಂಟಾಗಿದೆ. ಇದರಿಂದ ಆಸ್ಪತ್ರೆಯಲ್ಲಿನ ಎಸಿ ಬಂದ್​ ಆಗಿದೆ. ಹೀಗಾಗಿ, ಎಸಿ ದುರಸ್ತಿ ಆಗುವವರೆಗೆ ತುರ್ತು ಶಸ್ತ್ರಚಿಕಿತ್ಸೆ ಮಾತ್ರ ಮಾಡಿ, ಆಯ್ದ ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಲಾಗಿದೆ.

ಎಸಿ ಸಮಸ್ಯೆಯಿಂದ ತುರ್ತು ಶಸ್ತ್ರ ಚಿಕಿತ್ಸೆಗಳನ್ನು ಫ್ಯಾನ್, ಕೂಲರ್ ಬಳಸಿ ಮಾಡಲಾಗುತ್ತಿದೆ. ಎಸಿ ಇಲ್ಲದಿದ್ದಲ್ಲಿ ಸರ್ಜರಿ ಮಾಡಿದ ಸ್ಥಳಕ್ಕೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಆಯ್ದ ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಲಾಗಿದೆ ಎಂದು ಎಂದು ಬಿಎಂಸಿಆರ್‌ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಶೇಷಾಧಿಕಾರಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ