ಬೆಂಗಳೂರು, ಜನವರಿ 17: ನಗರದಲ್ಲಿ ದಿನದಿಂದ ದಿನಕ್ಕೆ ಮೆಟ್ರೋ (Namma Metro) ಜಾಲ ವಿಸ್ತರಣೆ ಆಗುತ್ತಿದೆ. ಮೆಟ್ರೋದಲ್ಲಿ ಸಂಚಾರ ಮಾಡುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಟಿಕೆಟ್ ದರ ಹೆಚ್ಚಳ ಮಾಡಲು ಬಿಎಂಆರ್ಸಿಎಂ ಮುಂದಾಗಿತ್ತು. ಇದೀಗ ಕೊನೆಗೂ ಬಿಎಂಆರ್ಸಿಎಲ್ ಬೋರ್ಡ್ ದರ ಏರಿಕೆಗೆ ಅಸ್ತು ಎಂದಿದೆ. ನಾಳೆ ಅಧಿಕೃತ ಘೋಷಣೆ ಮಾಡಲಿದೆ. ಆ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಿದೆ.
ಇಂದು ಶಾಂತಿನಗರದ ಬಿಎಂಆರ್ಸಿಎಲ್ ಮುಖ್ಯ ಕಚೇರಿಯಲ್ಲಿ ದರ ಏರಿಕೆ ಸಂಬಂಧ ಸಭೆ ಮಾಡಲಾಯಿತು. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಂಆರ್ಸಿಎಲ್ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್, ಸಭೆಯಲ್ಲಿ ದರ ಏರಿಕೆಗೆ ಒಪ್ಪಿಗೆ ಸೂಚಿಸಲಾಗಿದೆ. ನಾಳೆ ಸುದ್ದಿಗೋಷ್ಠಿ ಮಾಡಲಿರುವ ಬಿಎಂಆರ್ಸಿಎಲ್, ಅಧಿಕೃತ ಘೋಷಣೆ ಮಾಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ ಮಾದಾವರ ಮಾರ್ಗ ಕೊನೆಗೂ ಕಾರ್ಯಾಚರಣೆಗೆ ಸಿದ್ಧ
ಜೊತೆಗೆ ಯಾವತ್ತಿನಿಂದ ದರ ಜಾಸ್ತಿ ಮಾಡಬೇಕು ಎನ್ನುವ ಸಿದ್ದತೆಗೆ ಬಿಎಂಆರ್ಸಿಎಲ್ಗೆ ಬೋರ್ಡ್ ಸೂಚಿಸಿದ್ದು, ಅದರಂತೆ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಎಷ್ಟಾಗಬೇಕು, ಎಷ್ಟು ದರ ನಿಗದಿ ಎನ್ನುವ ಬಗ್ಗೆ ನಾಳೆ ನಿರ್ಧಾರ ಮಾಡಿ ಬಿಎಂಆರ್ಸಿಎಲ್ ಮಾಹಿತಿ ನೀಡಲಿದೆ.
105% ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಬಿಎಂಆರ್ಸಿಎಲ್ ಮನವಿ ಮಾಡಿತ್ತು. ಆದರೆ ಬಹುತೇಕ 40% ರಿಂದ 45% ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಮೆಟ್ರೋದಲ್ಲಿ ಟಿಕೆಟ್ ದರ ಕನಿಷ್ಠ 10 ರೂ. ಇದೆ. ಅದರಲ್ಲಿ ಯಾವುದೇ ಹೆಚ್ಚಳವಾಗಲ್ಲ.
ಗರಿಷ್ಠ 60 ರೂ ಇರುವ ದರದಲ್ಲಿ 90 ರೂ. ವರೆಗೆ ಹೆಚ್ಚಳವಾಗಲಿದೆ. ಪ್ರತಿ ಎರಡು ಕಿ.ಮೀ ನಂತರ ಹತ್ತು ರೂಪಾಯಿಯಷ್ಟು ಹೆಚ್ಚಳ ಮಾಡಲು ಪ್ಲಾನ್ ಮಾಡಿರುವುದಾಗಿ ಟಿವಿ9 ಗೆ ನಮ್ಮ ಮೆಟ್ರೋ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಕೋಲ್ಕತ್ತಾದಿಂದ ಬೆಂಗಳೂರಿನತ್ತ ಚಾಲಕ ರಹಿತ ರೈಲು
ಕಳೆದ ಏಳು ವರ್ಷಗಳಿಂದ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರಲಿಲ್ಲ. ಹಾಗಾಗಿ ಟಿಕೆಟ್ ದರ ಹೆಚ್ಚಳ ಮಾಡಲು ನಮ್ಮ ಮೆಟ್ರೋ ಇತ್ತೀಚೆಗೆ ಕಮಿಟಿ ಕೂಡ ರಚನೆ ಮಾಡಿತ್ತು. ಆ ಮೂಲಕ ಅಕ್ಟೋಬರ್ 3 ರಿಂದ 28ರ ವರೆಗೆ ಪ್ರಯಾಣಿಕರ ಅಭಿಪ್ರಾಯ ತಿಳಿಸಲು ಅವಕಾಶ ನೀಡಲಾಗಿತ್ತು. ಪ್ರಯಾಣಿಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದ ಕಮಿಟಿ, ಆ ವರದಿಯನ್ನು ಡಿಸೆಂಬರ್ ಕೊನೆ ವಾರದಲ್ಲಿ ಬಿಎಂಆರ್ಸಿಎಲ್ಗೆ ಸಲ್ಲಿಸಲಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Fri, 17 January 25