
ಬೆಂಗಳೂರು, ಮೇ 3: ಯೆಲ್ಲೋ ಲೈನ್ ಮೆಟ್ರೋ ಮಾರ್ಗ (Namma Metro Yellow line) ಯಾವಾಗ ಕಾರ್ಯಾಚರಣೆ ಶುರು ಮಾಡುತ್ತದೆ ಎಂದು ಜನ ಕಾಯುತ್ತಿದ್ದಾರೆ. ಅತ್ತ ಜನರ ಟೀಕೆ, ಆಕ್ರೋಶದ ನಡುವೆ ಆದಷ್ಟು ಬೇಗ ಮಾರ್ಗದಲ್ಲಿ ಸಂಚಾರ ಆರಂಭಿಸಬೇಕು ಎಂಬ ಒತ್ತಡದಲ್ಲಿ ಬಿಎಂಆರ್ಸಿಎಲ್ (BMRCL) ಕೂಡ ಇದೆ. ಈ ಮಧ್ಯೆ ಕೊನೆಗೂ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭ ಸಂಬಂಧ ಬಿಎಂಆರ್ಸಿಎಲ್ ಮಹತ್ವದ ಮಾಹಿತಿ ನೀಡಿದೆ.
ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ದಿನಾಂಕವನ್ನು ಈಗಾಗಲೇ ಹಲವು ಬಾರಿ ಮುಂದೂಡಲಾಗಿದೆ. ಇದರಿಂದ ಜನ ರೋಸಿ ಹೋಗಿದ್ದಾರೆ. ಚಾಲಕ ರಹಿತ ರೈಲುಗಳ ಆಗಮನ ತಡವಾಗಿದ್ದ ಕಾರಣದಿಂದಲೇ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಿಸಲು ಸಾಧ್ಯವಾಗಿಲ್ಲ. ಈಗಲೂ ಕೂಡ ಪೂರ್ಣ ಪ್ರಮಾಣದಲ್ಲಿ ರೈಲುಗಳು ಬಿಎಂಆರ್ಸಿಎಲ್ ಕೈ ಸೇರಿಲ್ಲ. ಇದೀಗ ಮೂರನೇ ಚಾಲಕರಹಿತ ರೈಲು ಕಲ್ಕತ್ತಾದ ಟಿಟಾಘರ್ನಿಂದ ಬೆಂಗಳೂರಿನತ್ತ ಹೊರಟ್ಟಿದ್ದು ಈ ತಿಂಗಳ 14 ರಂದು ತಲುಪಲಿದೆ. ಈ ರೈಲು ಮೆಟ್ರೋ ಸೇರಿ ಟ್ರಯಲ್ ರನ್ ನಡೆಸಿದರೆ, ಈ ತಿಂಗಳು ಅಥವಾ ಮುಂದಿನ ತಿಂಗಳಿನಲ್ಲಿ ಆರ್ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚಾರ ಶುರುವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ಹಳದಿ ಮಾರ್ಗ: ಮೂರು ಹೆಚ್ಚುವರಿ ಹೊಸ ಬೋಗಿಗಳ ರವಾನೆ
ಚಾಲಕ ರಹಿತ ರೈಲು ಆಗಮನವಾದ ಬೆನ್ನಲ್ಲೇ ಬಿಎಂಆರ್ಸಿಎಲ್, ಕೇಂದ್ರ ರೈಲ್ವೆ ಸುರಕ್ಷತಾ ಅಧಿಕಾರಿಗಳನ್ನು ಪರಿಶೀಲನೆಗೆ ಬರುವಂತೆ ಆಹ್ವಾನಿಸಲಿದೆ. ಕೇಂದ್ರದ ಅಧಿಕಾರಿಗಳು ಪರಿಶೀಲನೆ ನಡೆಸಿ ಗ್ರೀನ್ ಸಿಗ್ನಲ್ ನೀಡಿದರೆ, ಕೂಡಲೇ ಸರ್ಕಾರಗಳಿಗೆ ಪತ್ರ ಬರೆದು ಅನುಮತಿ ಪಡೆಯಲಿದೆ. ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದೊಳಗೆ ಸಂಚಾರ ಶುರುವಾಗುವ ನಿರೀಕ್ಷೆ ಇದೆ.
Published On - 9:06 am, Sat, 3 May 25