ಡಂಪಿಂಗ್ ಯಾರ್ಡ್ ಆಗುತ್ತಿರುವ ಬಿಎಂಟಿಸಿ ಬಸ್ ಸ್ಟಾಂಡ್ಗಳು, ದುರ್ನಾತದಲ್ಲೇ ಬಸ್ಗಾಗಿ ಕಾಯುವ ಸ್ಥಿತಿ
ನಮ್ಮ ಸಿಲಿಕಾನ್ ಸಿಟಿ ಜನರು ಎಷ್ಟು ಸೋಮಾರಿಗಳಾಗಿದ್ದಾರೆ ಅಂದರೆ, ಪ್ರತಿದಿನ ಪೌರಕಾರ್ಮಿಕರು ಕಸ ತೆಗೆದುಕೊಂಡು ಹೋಗಲು ಮನೆ ಮುಂದೆ ಬರ್ತಾರೆ. ಆದರೆ ಕಸವನ್ನು ವಿಂಗಡಣೆ ಮಾಡಬೇಕು ಅನ್ನೋ ಏಕೈಕ ಕಾರಣಕ್ಕೆ, ನಗರ ಬಿಎಂಟಿಸಿ ಬಸ್ ಶೆಲ್ಟರ್ ಗಳನ್ನು ಡಂಪಿಂಗ್ ಯಾರ್ಡ್ ಆಗಿ ಮಾಡಿಕೊಂಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಬಸ್ ಸ್ಟ್ಯಾಂಡ್ ಗಳಲ್ಲಿ ನಿಲ್ಲಲು ಆಗ್ತಿಲ್ಲ ಕೂರಲು ಆಗ್ತಿಲ್ಲ.
ಬೆಂಗಳೂರು, ಸೆ.18: ನಗರದಲ್ಲಿರುವ ನೂರಾರು ಬಸ್ ಶೆಲ್ಟರ್ಗಳಲ್ಲಿ (Bus Stands) ಪ್ರಯಾಣಿಕರು ನಿಲ್ಲಲು ಆಗ್ತಿಲ್ಲ, ಕೂರಲು ಆಗ್ತಿಲ್ಲ, ಕಾರಣ ಅಂದರೆ ಕೆಲ ಜನರು ರಾತ್ರಿ ವೇಳೆಯಲ್ಲಿ ಕಾರು, ಬೈಕ್ಗಳಲ್ಲಿ ಬಂದು ತಮ್ಮ ಮನೆಯ ಕಸವನ್ನು ತಂದು ಬಸ್ ಶೆಲ್ಟರ್ ಗಳ ಬಳಿ ಸುರಿದು ಹೋಗುತ್ತಿದ್ದಾರೆ. ಇದರಿಂದ ಪ್ರಯಾಣಿಕರು ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲಲು ಆಗದೆ ಪರದಾಡುತ್ತಿದ್ದಾರೆ.
ಬೆಂಗಳೂರಿನ ಅತ್ಯಂತ ಜನಪ್ರಿಯ ಮತ್ತು ಇತಿಹಾಸ ಇರೋ ಜಯನಗರ ಅಂದ್ರೇನೆ ವಿದ್ಯಾವಂತರೇ ಹೆಚ್ಚಾಗಿರೋ ಹೈ ಪ್ರೋಫೈಲ್ ಏರಿಯಾ, ಇತಂಹ ಏರಿಯಾದ ಮಾಧವನ್ ಪಾರ್ಕ್ ಬಿಎಂಟಿಸಿ ಬಸ್ ನಿಲ್ದಾಣವೊಂದು, ಕಸ ಹಾಕೋ ಡಂಪಿಂಗ್ ಯಾರ್ಡ್ ಅಂತಾಗಿದೆ. ಕಸದಿಂದಲೇ ಕೂಡಿರೋ ಬಸ್ ಶೆಲ್ಟರ್ ಕಳೆಗೆ ಪ್ರಯಾಣಿಕರು ಕೂತು ಬಸ್ಗೆ ಕಾಯ್ತಾರೆ. ಗಬ್ಬೆದ್ದು ನಾರ್ತಿರೋ ಬಸ್ ನಿಲ್ದಾಣದಿಂದ ಸೊಳ್ಳೆಗಳ ಕಾಟವೂ ಹೆಚ್ಚು, ಗಿಡಗಂಟೆಗಳು ಬೆಳೆದಿದ್ರು ನಿರ್ವಾಹಣೆ ಮಾತ್ರ ಮಾಡದೇ, ಬಿಟ್ಟಿರೋ ಬಸ್ ನಿಲ್ದಾಣವನ್ನ ಸರಿ ಮಾಡಿ, ಪ್ರಯಾಣಿಕರಿಗೆ ಆಗ್ತಿರೋ ಸಮಸ್ಯೆಯನ್ನ ಬಗೆಹರಿಸಿ ಅಂತಿದ್ದಾರೆ.
ಇದನ್ನೂ ಓದಿ: ಆತ್ಮಹತ್ಯೆ ತಾಣ ಆಗುತ್ತಿದೆಯಾ ನಮ್ಮ ಮೆಟ್ರೋ? 9 ತಿಂಗಳಲ್ಲಿ 7ನೇ ಘಟನೆ, ಇಬ್ಬರು ಸಾವು!
ಇನ್ನೂ ಅಶೋಕ ಪಿಲ್ಲರ್ ರಸ್ತೆಯಲ್ಲಿರುವ ರಾಣಿ ಸರಳದೇವಿ ಕಾಲೇಜು ಮುಂಭಾಗದಲ್ಲಿರುವ ಬಸ್ ಶೆಲ್ಟರ್ ನಲ್ಲಂತೂ ಕಸದ ರಾಶಿಯನ್ನೇ ಸುರಿದಿದ್ರೆ, ಅದರ ಜೊತೆಗೆ ಬಿಯರ್ ಬಾಟಲ್, ಹಾರ್ಡ್ ಡ್ರಿಂಕ್ಸ್ ಬಾಟಲ್, ಟೆಟ್ರಾ ಪ್ಯಾಕ್ ಗಳು ಬಿಸಾಡಿದ್ರು. ಇನ್ನೂ ಲಾಲ್ ಬಾಗ್ ನ ಮುಂಭಾಗದಲ್ಲಿದ್ದ ಬಸ್ ಸ್ಟ್ಯಾಂಡ್ ನಲ್ಲಿ ರಾಶಿ ರಾಶಿ ಕಸ ಸುರಿದಿದ್ರೆ ಇದರಿಂದ ಸೊಳ್ಳೆ ನೊಣಗಳು ಹಾರಾಡುತಿದ್ವು ಈ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಒಟ್ನಲ್ಲಿ ನಗರದಲ್ಲಿರುವ ನೂರಾರು ಬಸ್ ಸ್ಟ್ಯಾಂಡ್ ಗಳಲ್ಲಿ ನಮ್ಮ ಜನರು ಕಸದ ರಾಶಿ ರಾಶಿ ಸುರಿದು ಹೋಗ್ತಿದ್ದಾರೆ, ಇನ್ನಾದ್ರು ಬಿಬಿಎಂಪಿ ಇಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು ಜನರು ಮನೆಯ ಬಳಿ ಬರುವ ಪೌರ ಕಾರ್ಮಿಕರಿಗೆ ನೀಡಿ ನಗರವನ್ನು ಸ್ವಚ್ಚವಾಗಿಡಲು ಸಹಕರಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ