AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸ್​ನಲ್ಲಿ ಮಹಿಳೆ ಮೇಲೆ ಹಲ್ಲೆ: ಗಲಾಟೆಗೆ ಕಾರಣವೇನು? ಕಂಡಕ್ಟರ್ ಹೇಳಿಕೆ ಇಲ್ಲಿದೆ

ಟಿಕೆಟ್ ವಿಚಾರಕ್ಕೆ ನಡೆದ ಜಗಳದಲ್ಲಿ ಬೆಂಗಳೂರಿನಲ್ಲಿ ಮಹಿಳೆಗೆ ಮನಬಂದಂತೆ ಹೊಡೆದು ಹಲ್ಲೆ ಮಾಡಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಕಂಡಕ್ಟರ್ ಹೊನ್ನಪ್ಪ‌ನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಪೊಲೀಸರು ಹೊನ್ನಪ್ಪ‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೇ ಗಲಾಟೆಗೆ ಕಾರಣವೇನು? ಯಾಕಾಗಿ ಹೀಗೆ ಹೊಡೆದಿದ್ದು ಎಂದು ವಿಚಾರಿಸಿದ್ದು, ಈ ವೇಳೆ ಹೊನ್ನಪ್ಪ‌ ಪೊಲೀಸರ ಮುಂದೆ ತಮ್ಮ ಹೇಳಿಕೆ ನೀಡಿದ್ದು, ಅದು ಈ ಕೆಳಗಿನಂತಿದೆ.

ಬಸ್​ನಲ್ಲಿ ಮಹಿಳೆ ಮೇಲೆ ಹಲ್ಲೆ: ಗಲಾಟೆಗೆ ಕಾರಣವೇನು? ಕಂಡಕ್ಟರ್ ಹೇಳಿಕೆ ಇಲ್ಲಿದೆ
ಬಿಎಂಟಿಸಿ ಬಸ್​ನಲ್ಲಿ ಮಹಿಳೆ ಮೇಲೆ ಹಲ್ಲೆ
ರಾಚಪ್ಪಾಜಿ ನಾಯ್ಕ್
| Edited By: |

Updated on:Mar 26, 2024 | 7:58 PM

Share

ಬೆಂಗಳೂರು, ಮಾ.26: ಮಹಿಳೆ ಮೇಲೆ ಬಿಎಂಟಿಸಿ (BMTC) ಕಂಡಕ್ಟರ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹೊನ್ನಪ್ಪನನ್ನ ಈಗಾಗಲೇ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾಗಿದ್ದ ತನ್ಜಿಲಾ ಇಸ್ಮಾಯಿಲ್ ಎಂಬ ಮಹಿಳೆ ಪ್ರಯಾಣದ ಟಿಕೆಟ್​ ಕೇಳಿದ್ದಾಳೆ. ಈ ವೇಳೆ ಕಂಡಕ್ಟರ್, ಕೊಡ್ತಿನಿ‌ ಇರಿ ಎಂದಿದ್ದಾನೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ರೊಚ್ಚಿಗೆದ್ದ ಕಂಡಕ್ಟರ್​ ಹಲ್ಲೆ ನಡೆಸಿದ್ದಾನೆ ಎನ್ನಲಾಗಿತ್ತು.

ಕಂಡಕ್ಟರ್ ಮತ್ತು ಮಹಿಳೆ ನಡುವಿನ ಗಲಾಟೆಗೆ ಕಾರಣ ಏನು?

ಹಾಗಾದ್ರೆ ಕಂಡಕ್ಟರ್ ಮತ್ತು ಮಹಿಳೆ ನಡುವಿನ ಗಲಾಟೆಗೆ ಕಾರಣವೇನು ಎಂಬುದರ ಕುರಿತು ಕಂಡಕ್ಟರ್​ ಹೊನ್ನಪ್ಪ‌ ಹೇಳಿಕೆ ದಾಖಲಿಸಿರುವ ಪೊಲೀಸರು, ಇದಕ್ಕೆಲ್ಲ ಉಚಿತ ಬಸ್ ಪ್ರಯಾಣವೇ ಕಾರಣವಾಗಿದೆ. ಹೌದು, ಬಿಳೆಕಳ್ಳಿ ಬಳಿ ಬಸ್ ಹತ್ತಿದ್ದ ಮಹಿಳೆಗೆ ಟಿಕೆಟ್ ನೀಡಲು ಆಧಾರ್ ಕಾರ್ಡ್ ತೋರಿಸುವಂತೆ ಕಂಡಕ್ಟರ್ ಹೇಳಿದ್ದಾರೆ. ಆದರೆ, ಎರಡು ಸ್ಟಾಪ್ ಬಂದರೂ ಯುವತಿ ತನ್ನ ಆಧಾರ್ ಕಾರ್ಡ್ ತೋರಿಸಿಲ್ಲ.

ಇದನ್ನೂ ಓದಿ:ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್ ಹಲ್ಲೆ; ಪೊಲೀಸ್ ವಶಕ್ಕೆ

ಬಳಿಕ ನಿಮ್ಮ ಸ್ಟೇಜ್ ಮುಕ್ತಾಯವಾಗುತ್ತೆ ಬೇಗ ಆಧಾರ್ ಕಾರ್ಡ್ ತೋರಿಸಿ, ಇಲ್ಲದಿದ್ದರೆ ಹಣ ಕೊಟ್ಟು ಟಿಕೆಟ್ ತೆಗೆದುಕೊಳ್ಳುವಂತೆ ಎಂದು ಕಂಡಕ್ಟರ್​ ಸೂಚಿಸಿದ್ದಾರೆ. ಇದರಿಂದ ಕೆಂಡಾಮಂಡಲಳಾದ ಮಹಿಳೆ, ಮಾತಿಗೆ ಮಾತು ಬೆಳೆದು ಕಂಡಕ್ಟರ್​ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಂಡಕ್ಟರ್​ ಕೂಡ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.

ಕಂಡಕ್ಟರ್​ ಅಮಾನತು, ಆದೇಶದಲ್ಲಿ ಏನಿದೆ?

ಇನ್ನು ಘಟನೆ ಬೆನ್ನಲ್ಲೇ ಕಂಡಕ್ಟರ್​ನನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಬಿಎಂಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ಘಟಕ -34 (ಕೊತ್ತನೂರು ದಿಣ್ಣೆ) ರ ನಿರ್ವಾಹಕರಾಗಿರುವ ಹೊನ್ನಪ್ಪ ನಾಗಪ್ಪ ಅಗಸರ್ ಕಾರ್ಯನಿರ್ವಹಿಸುತ್ತಿದ್ದು, ಇಂದು ಮಾರ್ಗ ಸಂಖ್ಯೆ 368/6 ರಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹೊರ ರಾಜ್ಯದ ಓರ್ವ ಮಹಿಳಾ ಪ್ರಯಾಣಿಕರೊಂದಿಗೆ ಟಿಕೆಟ್ ಪಡೆಯುವ ನೀಡುವ ವಿಚಾರವಾಗಿ ಮಾತಿನ ಚಕಮಕಿ ನಡೆದು ಹಲ್ಲೆ ಮಾಡಿರುತ್ತಾನೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿರುವ ಹಿನ್ನೆಲೆ ಸದರಿ ಅಂತರ್ಜಾಲದ ಸುದ್ದಿಯ ಆಧಾರದ ಮೇಲೆ ಹೊನ್ನಪ್ಪ ನಾಗಪ್ಪ ಅಗಸರ್ ರನ್ನು ಅಮಾನತ್ತು ಮಾಡಲಾಗಿದೆ ಎಂದು  ಮೂಲಕ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Tue, 26 March 24