ಇಂದಿರಾನಗರ ಡಿಪೋ ಮ್ಯಾನೇಜರ್ ಮುಂದೆ ಬಿಎಂಟಿಸಿ ನೌಕರ ಆತ್ಮಹತ್ಯೆಗೆ ಯತ್ನ
ಆತ್ಮಹತ್ಯೆಗೆ ಯತ್ನಿಸಿದ ಕೇಶವ್ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದರು. ಹಳೆ ಬಯ್ಯಪ್ಪನಹಳ್ಳಿಯಲ್ಲಿ ವಾಸವಾಗಿದ್ದರು. ಇಂದು (ಅ.7) ಬೆಳಿಗ್ಗೆ 10 ಗಂಟೆ ಸುಮಾರಿಗೆ ವಜಾಗೊಂಡಿದ್ದ ನೌಕರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಂಗಳೂರು: ವಜಾಗೊಂಡ ಬಿಎಂಟಿಸಿ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂದಿರಾನಗರದ ಡಿಪೋ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡಿಪೋ ಮ್ಯಾನೇಜರ್ ಮುಂದೆ ಕೇಶವ್ ಎಂಬುವವರು ವಿಷ ಸೇವಿಸಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇಶವ್ ಡಿಪೋ-6 ರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ನಲ್ಲಿ ನಡೆದ ಮುಷ್ಕರದ ವೇಳೆ ಇವರು ವಜಾಗೊಂಡಿದ್ದರು.
ಆತ್ಮಹತ್ಯೆಗೆ ಯತ್ನಿಸಿದ ಕೇಶವ್ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದರು. ಹಳೆ ಬಯ್ಯಪ್ಪನಹಳ್ಳಿಯಲ್ಲಿ ವಾಸವಾಗಿದ್ದರು. ಇಂದು (ಅ.7) ಬೆಳಿಗ್ಗೆ 10 ಗಂಟೆ ಸುಮಾರಿಗೆ ವಜಾಗೊಂಡಿದ್ದ ನೌಕರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪೂರ್ಣ ವೇತನ ಸಿಕ್ಕಿಲ್ಲ ಅಕ್ಟೋಬರ್ 7 ಆದ್ರೂ ಆಗಸ್ಟ್ ತಿಂಗಳ ಪೂರ್ಣ ವೇತನ ಸಿಗದೆ ರಾಜ್ಯದಲ್ಲಿ ಸಾರಿಗೆ ನೌಕರರು ಪರದಾಡುತ್ತಿದ್ದಾರೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿ ಸಾರಿಗೆ ನೌಕರರು ವೇತನಕ್ಕೆ ಪರದಾಟ ನಡೆಸುತ್ತಿದ್ದು, ಸರ್ಕಾರದ ಅನುದಾನಕ್ಕೆ ಸಾರಿಗೆ ನಿಗಮಗಳು ಕಾಯುತ್ತಿವೆ. ಸರ್ಕಾರ ಆಗಸ್ಟ್ ತಿಂಗಳಲ್ಲಿ ಅರ್ಧ ವೇತನ ಮಾತ್ರ ನೀಡಿದೆ. ಇದರಿಂದ ಅರ್ಧ ವೇತನ ಪಡೆದುಕೊಂಡೇ ಜೀವನ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಕೊರೊನಾ ಕಾರಣದಿಂದ ಸಾರಿಗೆ ನಿಗಮದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ನೌಕರರಿಗೆ ಸಂಬಳ ನೀಡುವುದಕ್ಕೆ ಸಾರಿಗೆ ನಿಗಮಗಳ ಬಳಿ ಹಣವಿಲ್ಲ. ಹೀಗಾಗಿ ಸರ್ಕಾರದ ಅನುದಾನಕ್ಕೆ ಕಾಯುತ್ತಿವೆ. ಆಗಸ್ಟ್ ತಿಂಗಳ ವೇತನ ನೀಡಿ ಅಂತ ನೌಕರರು ಮನವಿ ಮಾಡಿದ್ದಾರೆ. ದಸರಾ ಆರಂಭವಾಗುತ್ತಿದೆ ಈಗಲಾದರೂ ಸಂಬಳ ನೀಡಿ. ಅರ್ಧ ಸಂಬಳ ನೀಡಿ ಗಣೇಶನ ಹಬ್ಬವನ್ನು ಆಚರಿಸುವಂತೆ ಮಾಡಿದ್ದೀರಿ. ಈಗಾಲಾದರೂ ದಸರಾ ಮುನ್ನ ಬಾಕಿ ಹಣ ನೀಡಿ ಅಂತ ನೌಕರರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ
ಯಾದಗಿರಿಯಲ್ಲಿ ಅಣ್ಣನಿಂದ ತಂಗಿ ಮೇಲೆ ಅತ್ಯಾಚಾರ ಆರೋಪ! ಸಂತ್ರಸ್ತೆಯಿಂದ ದೂರು ದಾಖಲು
ಶೂ ಧರಿಸಿ ಚಾಮುಂಡಿ ದೇವಸ್ಥಾನದ ಒಳಗೆ ಹೋದ ಮೈಸೂರು ಎಸ್ಪಿ; ವಿಡಿಯೋ ಇದೆ