ಬೆಂಗಳೂರು: ಬಿಎಂಟಿಸಿ ಸಿಬ್ಬಂದಿಗೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ವೇತನದಲ್ಲಿ ಬಾಕಿ ಇದ್ದ ಶೇಕಡಾ 50 ರಷ್ಟು ವೇತನ ಪಾವತಿಗೆ ಹಣ ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳ ಬಾಕಿ 29.91 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಅಕ್ಟೋಬರ್ ತಿಂಗಳ ಬಾಕಿ 30.16 ಕೋಟಿ ರೂಪಾಯಿ ಕೂಡ ಪಾವತಿ ಮಾಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಆರ್ಥಿಕ ಅನುದಾನದಿಂದ ಇಂದು ಈ ಬಾಕಿ ಇದ್ದ ಮೊತ್ತವನ್ನು ಪಾವತಿ ಮಾಡಲಾಗಿದೆ.
ನಮ್ಮ ಮೆಟ್ರೋದಲ್ಲಿ ತಾಂತ್ರಿಕ ದೋಷ; 25 ನಿಮಿಷ ರೈಲು ಓಡಾಟ ವ್ಯತ್ಯಯ
ನಮ್ಮ ಮೆಟ್ರೋದಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷದ ಪರಿಣಾಮವಾಗಿ ಸುಮಾರು 25 ನಿಮಿಷ ಮೆಟ್ರೋ ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ. ನಾಗಸಂದ್ರ, ರೇಷ್ಮೆ ಸಂಸ್ಥೆ ಮೆಟ್ರೋ ಸ್ಟೇಷನ್ ಬಳಿ ದೋಷ ಕಂಡುಬಂದಿತ್ತು. ಮಧ್ಯಾಹ್ನ 1.10 ಕ್ಕೆ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಈ ಕಾರಣದಿಂದ ಮೆಟ್ರೋ ರೈಲು ಓಡಾಟದಲ್ಲಿ ವ್ಯತ್ಯಯ ಉಂಟಾಗಿದೆ. ಬಳಿಕ ಮಧ್ಯಾಹ್ನ 1.35ಕ್ಕೆ ಮತ್ತೆ ಮೆಟ್ರೋ ಓಡಾಟ ಆರಂಭವಾಗಿದೆ. ಸುಮಾರು 25 ನಿಮಿಷ ಪ್ರಯಾಣಿಕರು ರೈಲಿನಲ್ಲೇ ಇದ್ದರು ಎಂದು ತಿಳಿದುಬಂದಿದೆ. ಈ ಕುರಿತು ಬಿಎಂಆರ್ಸಿಎಲ್ನಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: ಕೊವಿಡ್ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಿದ ಬಿಎಂಆರ್ಸಿಎಲ್; ಮೆಟ್ರೋದಲ್ಲಿ ಓಡಾಟಕ್ಕೆ ಮಾಸ್ಕ್ ಕಡ್ಡಾಯ
ಇದನ್ನೂ ಓದಿ: ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಚಿನ್ನವಿದ್ದ ಬ್ಯಾಗ್ ಬಿಟ್ಟು ಹೋದ ಮಹಿಳೆ; ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದ ಸಿಬ್ಬಂದಿ