ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಚಿನ್ನವಿದ್ದ ಬ್ಯಾಗ್ ಬಿಟ್ಟು ಹೋದ ಮಹಿಳೆ; ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದ ಸಿಬ್ಬಂದಿ

ಸ್ಥಳದಲ್ಲಿದ್ದ ಬಿಎಂಟಿಸಿಯ ಟ್ರಾಫಿಕ್ ಕಂಟ್ರೋಲರ್​ಗಳಾದ ಪ್ರಕಾಶ್, ಶಮಿ ಸಾಬ್‌ಗೆ ಬ್ಯಾಗ್ ಸಿಕ್ಕಿತ್ತು. ಬ್ಯಾಗ್​ನಲ್ಲಿದ್ದ ಫೋನ್​ಗೆ ಕರೆ ಬಂದಿದ್ದರಿಂದ ಮಹಿಳೆಗೆ ಹೆಬ್ಬಾಳ ಠಾಣೆಗೆ ಕರೆಸಿಕೊಂಡು ಅಧಿಕಾರಿಗಳು ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಚಿನ್ನವಿದ್ದ ಬ್ಯಾಗ್ ಬಿಟ್ಟು ಹೋದ ಮಹಿಳೆ; ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದ ಸಿಬ್ಬಂದಿ
ವಸ್ತುಗಳನ್ನು ಮಾಲೀಕರು ಪತ್ತೆಹಚ್ಚಿದ ನಂತರ ವಾಪಸ್ ನೀಡಿದ್ದಾರೆ
Follow us
TV9 Web
| Updated By: preethi shettigar

Updated on:Nov 23, 2021 | 8:35 AM

ಬೆಂಗಳೂರು: ಲಕ್ಷಾಂತರ ಮೌಲ್ಯದ ಚಿನ್ನವಿದ್ದ ಬ್ಯಾಗ್‌ ಅನ್ನು ನಿನ್ನೆ (ನವೆಂಬರ್ 22) ಮಹಿಳೆಯೊಬ್ಬರು ಕಳೆದುಕೊಂಡಿದ್ದರು. ಹೆಬ್ಬಾಳದ ಎಸ್ಟಿಮ್ ಮಾಲ್ ಬಳಿಯಿರುವ ಬಿಎಂಟಿಸಿ (BMTC) ಬಸ್ ನಿಲ್ದಾಣದಲ್ಲಿ ಮಹಿಳೆ ಬ್ಯಾಗ್ ಬಿಟ್ಟು ಹೋಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಬಿಎಂಟಿಸಿಯ ಟ್ರಾಫಿಕ್ ಕಂಟ್ರೋಲರ್​ಗಳಾದ (Traffic controller) ಪ್ರಕಾಶ್, ಶಮಿ ಸಾಬ್‌ಗೆ ಬ್ಯಾಗ್ ಸಿಕ್ಕಿತ್ತು. ಬ್ಯಾಗ್​ನಲ್ಲಿದ್ದ ಫೋನ್​ಗೆ ಕರೆ ಬಂದಿದ್ದರಿಂದ ಮಹಿಳೆಗೆ ಹೆಬ್ಬಾಳ ಠಾಣೆಗೆ ಕರೆಸಿಕೊಂಡು ಅಧಿಕಾರಿಗಳು ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ರಾಜೇಶ್ವರಿ ಎಂಬ ಮಹಿಳಾ ಪ್ರಯಾಣಿಕರ ಬ್ಯಾಗ್​ನಲ್ಲಿ ಒಂದು ಸಾವಿರ ರೂ. ನಗದು, ಏಳು ಗೋಲ್ಡ್ ರಿಂಗ್, 2 ಚಿನ್ನದ ಸರ, 1 ಮಾಂಗಲ್ಯ ಸರ, ಎರಡು ಓಲೆ, ಮೊಬೈಲ್ ಇತ್ತು. ಒಟ್ಟು ಇದರ ಮೌಲ್ಯ ಆರು‌ ಲಕ್ಷದ ಮೂವತ್ತೊಂದು ಸಾವಿರದ ಐನೂರು ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಮಹಿಳೆಯ ಬ್ಯಾಗ್ ಅಧಿಕಾರಿಗಳ ಸಿಕ್ಕಿದೆ. ಮಹಿಳೆಯನ್ನು ಹೆಬ್ಬಾಳ ಠಾಣೆಗೆ ಕರೆಸಿಕೊಂಡ ಅಧಿಕಾರಿಗಳು ವಸ್ತುಗಳನ್ನು ಮಾಲೀಕರು ಪತ್ತೆಹಚ್ಚಿದ ನಂತರ ವಾಪಸ್ ನೀಡಿದ್ದಾರೆ.

ಬೆಂಗಳೂರು: ಮನೆ ಮನೆ ಸುತ್ತಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ ಹಗಲು ವೇಳೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೈಯದ್ ಅಹಮದ್(38) ಬಂಧಿತ ಆರೋಪಿ. ಬೆಂಗಳೂರಿನ ಜ್ಞಾನಭಾರತಿ ಠಾಣೆಯ ಪೊಲೀಸರು ಸೈಯದ್​ನನ್ನು ಬಂಧಿಸಿದ್ದು, ಬಂಧಿತನಿಂದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಬಂಧನದಿಂದ ಒಟ್ಟು ಏಳು ಪ್ರಕರಣಗಳು ಬೆಳಕಿಗೆ ಬಂದಿದೆ. ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಆ ನಂತರ ಮನೆ ಬಳಿ ಬಂದು ಹತ್ತಾರು ಬಾರಿ ಕಾಲಿಂಗ್ ಬೆಲ್ ಮಾಡುತ್ತಿದ್ದ. ಬಾಗಿಲು ತೆರೆದರೆ ವಿಳಾಸ ಕೇಳಿ ವಾಪಸ್ ಬರುತ್ತಿದ್ದ. ಇನ್ನು ಯಾರೂ ಇಲ್ಲದಿದ್ದರೆ ಮನೆ ಬಾಗಿಲು ಒಡೆದು ಒಳಹೋಗುತ್ತಿದ್ದ ಎಂದು ತನಿಖೆ ವೇಳೆ ಆರೋಪಿ ಸೈಯದ್ ಮಾಹಿತಿ ನೀಡಿದ್ದಾನೆ.

ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಆರೋಪಿ ಸೈಯದ್​ನಿಂದ 20 ಲಕ್ಷ ಮೌಲ್ಯದ 407 ಗ್ರಾಂ ಚಿನ್ನಾಭರಣ, 2500 ಗ್ರಾಂ ಬೆಳ್ಳಿಯ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಜ್ಞಾನಭಾರತಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

Cryptocurrencies: ಕ್ರಿಪ್ಟೋವನ್ನು ಕರೆನ್ಸಿ ಎಂಬುದರ ಬದಲಾಗಿ ಚಿನ್ನದಂತೆ ಪರಿಗಣಿಸಲು ಪ್ರಸ್ತಾವ; ಗೊತ್ತಿರಬೇಕಾದ 10 ಅಂಶಗಳು

ನಿಷ್ಪ್ರಯೋಜಕ, ಲಜ್ಜೆಗೇಡಿ ಬಿಬಿಎಮ್​ಪಿ ಅಧಿಕಾರಿಗಳು ವಿವಿ ಪುರಂ ಸಂಚಾರಿ ಠಾಣೆ ಪೊಲೀಸರನ್ನು ಮಾದರಿಯಾಗಿಟ್ಟುಕೊಳ್ಳಬೇಕು!

Published On - 8:00 am, Tue, 23 November 21