ನಾಯಿ ವಿಚಾರಕ್ಕೆ ಜಗಳ; ವೃದ್ಧನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ವ್ಯಕ್ತಿ ಎಸ್ಕೇಪ್, ಆಸ್ಪತ್ರೆಯಲ್ಲಿ ವೃದ್ಧಗೆ ಚಿಕಿತ್ಸೆ
ಗೇರಿ ರೋಜಾರಿಯೊ ಜೊತೆಗೆ ಚಾರ್ಲ್ಸ್ ಮಾತಿನ ಚಕಮಕಿ ನಡೆದಿದೆ. ನಂತರ ಚಾರ್ಲ್ಸ್ ಇದ್ದಕ್ಕಿದ್ದಂತೆ ತನ್ನ ಮೊದಲನೇ ಮಹಡಿಯಿಂದ ವೃದ್ಧನ ಮೇಲೆ ಕಲ್ಲು ಬೀಸಿದ್ದಾನೆ. ಕಲ್ಲು ವೃದ್ಧನ ಗಡ್ಡಕ್ಕೆ ಬಿದ್ದು ರಕ್ತ ಚಿಮ್ಮಿದ್ದು 2 ಹಲ್ಲುಗಳು ಮುರಿದಿವೆ.
ಬೆಂಗಳೂರು: ನಾಯಿ ಮೂತ್ರ ವಿಸರ್ಜನೆ ಮಾಡಿದ್ದ ವಿಚಾರಕ್ಕೆ ಗಲಾಟೆ ನಡೆದಿರುವ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ. ಘಟನೆಯಲ್ಲಿ 71 ವರ್ಷದ ವೃದ್ಧನ ಮೇಲೆ ಕಲ್ಲಿನಿಂದ ಹಲ್ಲೆ ನಡೆದಿದೆ.
ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಪ್ಪ ಲೇಔಟ್ನಲ್ಲಿ ಭಾನುವಾರ ರಾತ್ರಿ 11.30 ರ ಸುಮಾರಿಗೆ ಈ ಘಟನೆ ನಡೆದಿದೆ. ಗೇರಿ ರೋಜಾರಿಯೊ ಎಂಬ ವೃದ್ಧ ತನ್ನ ನಾಯಿಯನ್ನು ಆಚೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಎದುರು ಮನೆ ನಿವಾಸಿ ಚಾರ್ಲ್ಸ್ ಎಂಬಾತನ ಕಾರಿನ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡಿದೆ. ಇದನ್ನು ನೋಡಿದ ಚಾಲ್ಸ್ ವೃದ್ಧನ ಮೇಲೆ ಕೆಂಡಾ ಮಂಡಲನಾಗಿದ್ದಾನೆ.
ಗೇರಿ ರೋಜಾರಿಯೊ ಜೊತೆಗೆ ಚಾರ್ಲ್ಸ್ ಮಾತಿನ ಚಕಮಕಿ ನಡೆದಿದೆ. ನಂತರ ಚಾರ್ಲ್ಸ್ ಇದ್ದಕ್ಕಿದ್ದಂತೆ ತನ್ನ ಮೊದಲನೇ ಮಹಡಿಯಿಂದ ವೃದ್ಧನ ಮೇಲೆ ಕಲ್ಲು ಬೀಸಿದ್ದಾನೆ. ಕಲ್ಲು ವೃದ್ಧನ ಗಡ್ಡಕ್ಕೆ ಬಿದ್ದು ರಕ್ತ ಚಿಮ್ಮಿದ್ದು 2 ಹಲ್ಲುಗಳು ಮುರಿದಿವೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಲ್ಲಿನಿಂದ ಹೊಡೆದು ಚಾರ್ಲ್ಸ್ ಎಸ್ಕೇಪ್ ಆಗಿದ್ದಾನೆ. ಕಲ್ಲೇಟು ಬಿದ್ದ ತಕ್ಷಣ ಕೆಳಗೆ ಕುಸಿದು ಬಿದ್ದ ವೃದ್ಧ ಗೇರಿ ರೋಜಾರಿಯೊನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ವೃದ್ಧ ಚೇತರಿಸಿಕೊಂಡಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಹಲ್ಲೆ ಮಾಡಿದ ಚಾಲ್ಸ್ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.