ಬಿಎಂಟಿಸಿಯಿಂದ ‘ದಿವ್ಯ ದರ್ಶನ’: ಒಂದೇ ದಿನದಲ್ಲಿ ಬೆಂಗಳೂರಿನ 8 ದೇಗುಲಗಳಿಗೆ ಪ್ರವಾಸದ ಅವಕಾಶ

Divya Darshana package tour: ಬೆಂಗಳೂರಿನಲ್ಲಿರುವ ಪ್ರಸಿದ್ಧ ದೇವಾಲಯಗಳ ದರ್ಶನಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾರಾಂತ್ಯದ ಟೂರ್ ಪ್ಯಾಕೇಜ್​ ಆರಂಭಿಸಿದೆ. ಬಿಎಂಟಿಸಿಯ ನೂತನ ‘ದಿವ್ಯ ದರ್ಶನ’ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ಚಾಲನೆ ನೀಡಿದರು. ಈ ಯೋಜನೆಯಡಿ ಯಾವೆಲ್ಲ ದೇಗುಲಗಳಿಗೆ ಕರೆದೊಯ್ಯಲಾಗುತ್ತದೆ? ಟಿಕೆಟ್ ದರ ಎಷ್ಟು? ಯಾವೆಲ್ಲ ಸಮಯದಲ್ಲಿ ಸೇವೆ ಲಭ್ಯ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಮೇ 29: ಕರ್ನಾಟಕ ರಾಜಧಾನಿ ಬೆಂಗಳೂರಿನ ಪ್ರಸಿದ್ದ ದೇವಾಲಯಗಳ ದರ್ಶನಕ್ಕಾಗಿ ಸಾರ್ವಜನಿಕರಿಗೆ ಬಿಎಂಟಿಸಿ (BMTC) ಹೊಸ ವಿಕೇಂಡ್ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ‘ದಿವ್ಯ ದರ್ಶನ’ (Divya Darshana) ಹೆಸರಿನಲ್ಲಿ ಎಸಿ ಬಸ್​​​ ಮೂಲಕ ಒಂದೇ ದಿನ ಬೆಂಗಳೂರಿನ 8 ಪ್ರಸಿದ್ಧ ದೇಗುಲಗಳ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ದೇವಾಲಯಗಳ ವೀಕ್ಷಣೆಯ ‘ಒನ್ ಡೇ ಟೆಂಪಲ್ ಟೂರ್’ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಬುಧವಾರ ಚಾಲನೆ ನೀಡಿದ್ದಾರೆ.

ಬಿಎಂಟಿಸಿ ‘ದಿವ್ಯ ದರ್ಶನ’ದಲ್ಲಿ ಯಾವೆಲ್ಲ ದೇಗುಲ?

  • ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇಗುಲ
  • ಆರ್ ಆರ್ ನಗರದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನ
  • ಆರ್​.ಆರ್​.ನಗರದಲ್ಲಿರುವ ಶೃಂಗಗಿರಿ ಷಣ್ಮುಖ ದೇವಾಸ್ಥಾನ
  • ಆರ್​.ಆರ್​.ನಗರದಲ್ಲಿರುವ ಕರುಮಾರಿ ಅಮ್ಮ ದೇವಾಲಯ
  • ಉತ್ತರಹಳ್ಳಿ ಬಳಿಯ ಓಂಕಾರ ಹೀಲ್ಸ್
  • ಇಸ್ಕಾನ್ ದೇವಸ್ಥಾನ (ವಸಂತಪುರ) ವೈಕುಂಠ
  • ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲೀವಿಂಗ್
  • ಬನಶಂಕರಿಯಲ್ಲಿನ ಬನಶಂಕರಿ ದೇವಾಲಯ

ಬಿಎಂಟಿಸಿ ಟ್ವೀಟ್ ಮಾಹಿತಿ


ಯಾವಗೆಲ್ಲ ದಿವ್ಯ ದರ್ಶನ ಟೆಂಪಲ್ ಟೂರ್?

ಪ್ರತಿ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಈ ಟೂರ್ ಪ್ಯಾಕೇಜ್ ಲಭ್ಯವಿರಲಿದೆ. ಅಲ್ಲದೆ, ಪೂರ್ತಿ ಸಂಖ್ಯೆಯ ಬುಕಿಂಗ್ ಆದರೆ ವಾರದ ಇತರ ದಿನಗಳಲ್ಲಿಯೂ ಸೇವೆ ಲಭ್ಯವಿರಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ದಿವ್ಯ ದರ್ಶನ ಸಮಯ

ಬೆಳಗ್ಗೆ 8-30ಕ್ಕೆ ಮೆಜೆಸ್ಟಿಕ್​ನಿಂದ ಹೊರಟು ಸಂಜೆ 5-30 ರ ವರೆಗೆ ಎಸಿ ಬಸ್ ನಲ್ಲಿ 8 ಕಡೆ ಕರೆದೊಯ್ಯಲಾಗುತ್ತದೆ. ಮತ್ತೆ ಮೆಜೆಸ್ಟಿಕ್​​ಗೆ ಬಸ್ ವಾಪಸ್ಕರೆದುಕೊಂಡು ಬಂದು ಬಿಡಲಾಗುತ್ತದೆ.

ದಿವ್ಯ ದರ್ಶನ ಟಿಕೆಟ್ ದರ ಎಷ್ಟು?

ದಿವ್ಯ ದರ್ಶನ ಟೆಂಪರ್ ಟೂರ್ ಪ್ಯಾಕೇಜ್​ಗೆ ವಯಸ್ಕರಿಗೆ 450 ರೂ., ಮಕ್ಕಳಿಗೆ 350 ರೂ. ದರ ನಿಗದಿ ಮಾಡಲಾಗಿದೆ.

ದಿವ್ಯ ದರ್ಶನ ಟಿಕೆಟ್ ಬುಕಿಂಗ್ ಮಾಡುವುದು ಹೇಗೆ?

ಕೆಎಸ್​ಆರ್​ಟಿಸಿ ಅಧಿಕೃತ ವೆಬ್​ಸೈಟ್ ksrtc.in ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಬಿಎಂಟಿಸಿಯ ಸಂಪರ್ಕ ಸಂಖ್ಯೆ 080-22483777 ಅಥವಾ 7760991170 ಗೆ ಕರೆ ಮಾಡುವ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us