ಬಿಎಂಟಿಸಿ ಬಸ್​ ಚಾಲಕರೇ ಎಚ್ಚರ ಎಚ್ಚರ!: ಚಾಲನೆ ವೇಳೆ ಮೊಬೈಲ್​ ಬಳಸಿದ್ರೆ ಶಿಕ್ಷೆ ಏನ್​ ಗೊತ್ತಾ?

ಬಿಎಂಟಿಸಿ ಬಸ್​ಗಳ ಅಪಘಾತ ಹೆಚ್ಚಳ ತಡೆಗೆ ಅಧಿಕಾರಿಗಳು ಮುಂದಾಗಿದ್ದು, ಕಠಿಣ ನಿಯಮಗಳನ್ನ ಜಾರಿಗೆ ತಂದಿದ್ದಾರೆ. ಬಸ್​ ಚಾಲನೆ ವೇಳೆ ಚಾಲಕರು ಮೊಬೈಲ್​ ಬಳಕೆ ಮಾಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ನಿಯಮ ಉಲ್ಲಂಘಿಸುವ ಡ್ರೈವರ್​ಗಳಿಗೆ ಅಮಾನತು ಅಥವಾ ವರ್ಗಾವಣೆ ಶಿಕ್ಷೆಯ ಜೊತೆಗೆ ಸಂಬಳ ಕಡಿತ ಮಾಡುವುದಾಗಿಯೂ ಬಿಎಂಟಿಸಿ ಎಚ್ಚರಿಸಿದೆ.

ಬಿಎಂಟಿಸಿ ಬಸ್​ ಚಾಲಕರೇ ಎಚ್ಚರ ಎಚ್ಚರ!: ಚಾಲನೆ ವೇಳೆ ಮೊಬೈಲ್​ ಬಳಸಿದ್ರೆ ಶಿಕ್ಷೆ ಏನ್​ ಗೊತ್ತಾ?
ಬಿಎಂಟಿಸಿ ಬಸ್​ ಚಾಲಕರೇ ಎಚ್ಚರ: ಚಾಲನೆ ವೇಳೆ ಮೊಬೈಲ್​ ಬಳಸಿದ್ರೆ ಶಿಕ್ಷೆ ಫಿಕ್ಸ್​
Image Credit source: Google
Edited By:

Updated on: Sep 24, 2025 | 10:40 AM

ಬೆಂಗಳೂರು, ಸೆಪ್ಟೆಂಬರ್​ 24: ವಾಹನಗಳನ್ನ ಚಲಾಯಿಸುವಾಗ ರೀಲ್ಸ್​ ಮಾಡೋದು, ಮೊಬೈಲ್​ ಬಳಸೋದು ಅಪರಾಧವಾದ್ರೂ ಇತ್ತೀಚೆಗೆ ಅವು ಮಾಮೂಲು ಎಂಬಂತಾಗಿವೆ. ಅದರಲ್ಲೂ ಪ್ರಯಾಣಿಕರ ಸುರಕ್ಷತೆಯ ಹೊಣೆ ಹೊತ್ತ ಸಾರಿಗೆ ವಾಹನಗಳ ಚಾಲಕರ ಮೊಬೈಲ್​ ಗೀಳು ಸಾಕಷ್ಟು ಅನಾಹುತಕ್ಕೆ ಕಾರಣವಾಗ್ತಿದೆ. ಹೀಗಾಗಿ ಎಚ್ಚೆತ್ತಿರೋ ಬಿಎಂಟಿಸಿ, ಸಂಸ್ಥೆಯ ಚಾಲಕರಿಗೆ ಖಡಕ್​ ಎಚ್ಚರಿಕೆ ರವಾನಿಸಿದೆ. ಬಸ್​ ಚಾಲನೆ ವೇಳೆ ಮೊಬೈಲ್​ ಬಳಸಿದ್ರೆ ಅಮಾನತು, ವರ್ಗಾವಣೆ ಶಿಕ್ಷೆ ಕನ್ಫರ್ಮ್​ ಎಂಬ ಸಂದೇಶ ನೀಡಿದೆ.

ನಗರದಲ್ಲಿ ಬಿಎಂಟಿಸಿ ಬಸ್​ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಬಸ್​ ಚಾಲನೆ ವೇಳೆ ಚಾಲಕರು ಕಡ್ಡಾಯವಾಗಿ ಮೊಬೈಲ್​ ಬಳಸಬಾರದು. ಫೋನ್​ನಲ್ಲಿ ಮಾತಾಡಿದ್ರೆ, ಹೆಡ್​ ಫೋನ್​ ಬಳಕೆ ಅಥವಾ ಚಾಟಿಂಗ್​ ಮಾಡಿದ್ರೆ ಸಸ್ಪೆಂಡ್​ ಅಥವಾ ಟ್ರಾನ್ಸ್ಫರ್​ ಜೊತೆಗೆ ಸಂಬಳದಲ್ಲಿಯೂ ಕಡಿತಗೊಳಿಸುವ ಶಿಕ್ಷೆ ನೀಡಲು ತೀರ್ಮಾನಿಸಲಾಗಿದೆ. ಬಿಎಂಟಿಸಿ ಬಸ್​ ಅಪಘಾತಗಳ ತಡೆಗೆ ಕಠಿಣ ಕ್ರಮಕ್ಕೆ ಮುಂದಾಗಿರೋ ಅಧಿಕಾರಿಗಳು, ಇದರ ಭಾಗವಾಗಿ ಚಾಲಕರಿಗೆ ಖಡಕ್​ ಸೂಚನೆ ರವಾನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಶಾಕ್​ ಕೊಟ್ಟ ಐಟಿ: ಬೆಳ್ಳಂಬೆಳಗ್ಗೆ ಹಲವು ಕಾಲೇಜುಗಳ ಮೇಲೆ ದಾಳಿ

ಚಾಲನೆ ವೇಳೆ ಮೊಬೈಲ್​ ಬಳಸಿದ್ರೆ ಶಿಕ್ಷೆ ಏನು?

ಮೊದಲನೇ ಬಾರಿ:

  • 15 ದಿನಗಳ ಅಮಾನತ್ತು
  • ಶಿಸ್ತು ಕ್ರಮ (ನಿಯಮ-23)
  • ಅಮಾನತ್ತು ತೆರವು ನಂತರ ಬೇರೆ ಘಟಕಕ್ಕೆ ವರ್ಗಾವಣೆ
  •  ವೇತನದಿಂದ ₹5000 ಕಡಿತ

ಎರಡನೇ ಬಾರಿ: 

  • 15 ದಿನಗಳ ಅಮಾನತ್ತು
  • ಶಿಸ್ತು ಕ್ರಮ (ನಿಯಮ-23)
  • ವರ್ಗಾವಣೆ
  • ವಾರ್ಷಿಕ ಬಡ್ತಿ 1 ವರ್ಷಕ್ಕೆ ತಡೆ ಅಥವಾ ₹5000 ಕಡಿತ

ಮೂರನೇ ಬಾರಿ:

  • 15 ದಿನಗಳ ಅಮಾನತ್ತು
  • ಶಿಸ್ತು ಕ್ರಮ
  • ವರ್ಗಾವಣೆ
  • ವಾರ್ಷಿಕ ಬಡ್ತಿ 2 ವರ್ಷಕ್ಕೆ ತಡೆ ಅಥವಾ ₹10,000 ಕಡಿತ

ನಾಲ್ಕನೇ ಬಾರಿ:

  • 15 ದಿನಗಳ ಅಮಾನತ್ತು
  • ಶಿಸ್ತು ಕ್ರಮ
  • ವರ್ಗಾವಣೆ
  • ಶಾಶ್ವತ ಬಡ್ತಿ ಇಳಿಕೆ / 2 ವರ್ಷ ತಡೆ ಅಥವಾ ₹20,000 ಕಡಿತ

ಐದನೇ ಬಾರಿ:

  • 15 ದಿನಗಳ ಅಮಾನತ್ತು
  • ಶಿಸ್ತು ಕ್ರಮ
  •  ವರ್ಗಾವಣೆ
  • ವಾರ್ಷಿಕ ಬಡ್ತಿಗೆ ಶಾಶ್ವತ ತಡೆ ಅಥವಾ ₹25,000 ಕಡಿತ

ಆರು ಅಥವಾ ಅದಕ್ಕಿಂತ ಹೆಚ್ಚು ಸಲ

  • 15 ದಿನಗಳ ಅಮಾನತ್ತು
  • ಶಿಸ್ತು ಕ್ರಮ
  • ವರ್ಗಾವಣೆ
  • 2 ವಾರ್ಷಿಕ ಬಡ್ತಿ ಶಾಶ್ವತ ಇಳಿಕೆ/ತಡೆ ಅಥವಾ ₹30,000 ಕಡಿತ
  • ಸಂಸ್ಥೆಯ ಶಿಸ್ತು ನಿಯಮಾವಳಿ 1971 ರ ನಿಯಮ 18(b) ಅನ್ವಯ ಹೆಚ್ಚುವರಿ ಶಿಕ್ಷೆ

ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:34 am, Wed, 24 September 25

Follow Us