ಪುರುಷ ಕಾರ್ಮಿಕರ ಸಮಸ್ಯೆ ಆಲಿಸೋರೇ ಇಲ್ವಾ? ನಮಗೆ ಮಹಿಳಾ ಅಧಿಕಾರಿ ಅಲ್ಲ ಪುರುಷ ಅಧಿಕಾರಿ ಬೇಕು -ಬಿಎಂಟಿಸಿ ಎಂಡಿಗೆ ನೌಕರರ ಪತ್ರ

ಬಿಎಂಟಿಸಿ ಘಟಕ 21ರಲ್ಲಿ ಮಹಿಳಾ ಅಧಿಕಾರಿಗಳೇ ತುಂಬಿದ್ದಾರೆ. ಕೋವಿಡ್ 19 ಬಳಿಕ ವೇತನ ಹೆಚ್ಚಳವಾಗದ ಹಿನ್ನಲೆ ಮನೆಯಲ್ಲಿ ನಿತ್ಯ ಮಾನಸಿಕ ಹಿಂಸೆ ಹಾಗೂ ಸಂಸ್ಥೆಯ ಕೆಲಸದ ಒತ್ತಡದ ಮಧ್ಯೆ ಮಹಿಳಾ ಅಧಿಕಾರಿಗಳ ಕಿರುಕುಳ ಹೆಚ್ಚುತ್ತಿದೆ.

ಪುರುಷ ಕಾರ್ಮಿಕರ ಸಮಸ್ಯೆ ಆಲಿಸೋರೇ ಇಲ್ವಾ? ನಮಗೆ ಮಹಿಳಾ ಅಧಿಕಾರಿ ಅಲ್ಲ ಪುರುಷ ಅಧಿಕಾರಿ ಬೇಕು -ಬಿಎಂಟಿಸಿ ಎಂಡಿಗೆ ನೌಕರರ ಪತ್ರ
ನೌಕರರ ಪತ್ರ
Follow us
TV9 Web
| Updated By: ಆಯೇಷಾ ಬಾನು

Updated on:Jan 28, 2023 | 1:01 PM

ಬೆಂಗಳೂರು: ಪುರುಷ ಕಾರ್ಮಿಕರ ಸಮಸ್ಯೆ ಆಲಿಸಲು ಪುರುಷ ಅಧಿಕಾರಿಯನ್ನು ನೇಮಿಸುವಂತೆ ಬಿಎಂಟಿಸಿ ಎಂ.ಡಿ ಸತ್ಯವತಿಗೆ ಸಾರಿಗೆ ನೌಕರರು ಪತ್ರ ಬರೆದಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್ ಎನ್ನಲಾಗುತ್ತಿದೆ. ಪುರುಷ ಕಾರ್ಮಿಕರ ಸಮಸ್ಯೆ ಆಲಿಸೋರೇ ಇಲ್ವಾ? ಪುರುಷ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವಂತೆ ಕೋರಿ ಬಿಎಂಟಿಸಿ ಸಿಬ್ಬಂದಿ ಪತ್ರ ಬರೆದಿದ್ದಾರೆ.

ಬಿಎಂಟಿಸಿ ಘಟಕ 21ರಲ್ಲಿ ಮಹಿಳಾ ಅಧಿಕಾರಿಗಳೇ ತುಂಬಿದ್ದಾರೆ. ಕೋವಿಡ್ 19 ಬಳಿಕ ವೇತನ ಹೆಚ್ಚಳವಾಗದ ಹಿನ್ನಲೆ ಮನೆಯಲ್ಲಿ ನಿತ್ಯ ಮಾನಸಿಕ ಹಿಂಸೆ ಹಾಗೂ ಸಂಸ್ಥೆಯ ಕೆಲಸದ ಒತ್ತಡದ ಮಧ್ಯೆ ಮಹಿಳಾ ಅಧಿಕಾರಿಗಳ ಕಿರುಕುಳ ಹೆಚ್ಚುತ್ತಿದೆ. ನಮ್ಮ ಸಮಸ್ಯೆ ಕುಂದು ಕೊರತೆ ಆಲಿಸಲು ಸಂಸ್ಥೆಯಲ್ಲಿ ಪುರುಷ ಅಧಿಕಾರಿಗಳೇ ಇಲ್ಲ. ಪುರುಷರ ಸಮಸ್ಯೆ ಹೇಳಿಕೊಳ್ಳಲು ಮುಂದಾದ್ರೆ ಮಹಿಳಾ ಅಧಿಕಾರಿಗಳು ದೌರ್ಜನ್ಯ ಮಾಡ್ತಿದ್ದಾರೆ. ಹೀಗಾಗಿ ನಮ್ಮ ಸಮಸ್ಯೆಗೆ ಸ್ಪಂದಿಸಲು ಸಂಸ್ಥೆಯಲ್ಲಿ ಒಬ್ಬ ದಕ್ಷ ಐಎಎಸ್, ಐಪಿಎಸ್ ಅಧಿಕಾರಿ ನೇಮಿಸುವಂತೆ ಬಿಎಂಟಿಸಿ ನೌಕರರು ಪತ್ರ ಬರೆದಿದ್ದಾರೆ. ಅಲ್ಲದೆ ಇತ್ತೀಚೆಗೆ ನೌಕರನ ಸಾವಿಗೆ ಕಾರಣರಾದ ಮಹಿಳಾ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: BMTC Accident: ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮತ್ತೊಬ್ಬರು ಬಲಿ, ಮೂವರಿಗೆ ಗಾಯ

ನಾಲ್ವರು ಬಿಎಂಟಿಸಿ ಎಂಡಿಗಳ ಸಹಿ ಪೋರ್ಜರಿ

ಬಿಎಂಟಿಸಿಯಲ್ಲಿ ನೂರಾರು ಕೋಟಿ ವಹಿವಾಟು ನಡೆಯುತ್ತೆ. ಪ್ರಯಾಣಿಕರಿಂದ ಬರುವ ಹಣ ಒಂದು ಕಡೆಯಾದ್ರೆ, ಬಸ್ ನಿಲ್ದಾಣಗಳ ವಾಣಿಜ್ಯ ಮಳಿಗೆಗಳಿಂದ ಲಕ್ಷ ಲಕ್ಷ ರೂಪಾಯಿ ಬಾಡಿಗೆ ಬರುತ್ತೆ. ಇಂತಹ ಬಾಡಿಗೆ ಬರುವ ಕಡತಗಳನ್ನ, ವಾಣಿಜ್ಯ ಶಾಖೆ ಮುಖ್ಯ ಸಂಚಾರ ವ್ಯವಸ್ಥಾಪಕ ಶ್ರೀರಾಮ್ ಮುಲ್ಕಾವಾನ್ ಉನ್ನತ ಅಧಿಕಾರಿಗಳ ಕಚೇರಿ ತಲುಪದಂತೆ ನೋಡಿಕೊಂಡಿದ್ದಾರೆ. ಬಳಿಕ ತಾವೇ ಅಧಿಕಾರಿಗಳ ಸಹಿಗಳನ್ನ ನಕಲಿ ಮಾಡಿ ಅನುಮೋದನೆ ನೀಡಿದ್ದಾರೆ. ನಂತರ ವಾಣಿಜ್ಯ ಮಳಿಗೆಗಳ ಕಾಲಾವಧಿಯನ್ನ ವಿಸ್ತರಣೆ ಮಾಡಿ, ಬಂದಂತಹ ಕೋಟ್ಯಾಂತರ ರೂಪಾಯಿ ಹಣವನ್ನ ಜೇಬಿಗಿಳಿಸಿದ್ದಾರೆ. ಹಣಕಾಸಿನ ವಿಷ್ಯದಲ್ಲಿ ಅನುಮಾನಗೊಂಡ ಹಿರಿಯ ಅಧಿಕಾರಿಗಳು ಆದಾಯ ಸೋರಿಕೆ ಬಗ್ಗೆ ತನಿಖೆ ನಡೆಸಿದ್ದಾರೆ. ಆಗ ಪೋರ್ಜರಿ ಪ್ರಕರಣ ಬೆಳಕಿಗೆ ಬಂದಿದೆ.

ಸಹಿ ಪೋರ್ಜರಿ ಮಾಡಿದ್ದ ಅಧಿಕಾರಿ ವಿರುದ್ಧ ಎಫ್‌ಐಆರ್

ಬಿಎಂಟಿಸಿ ಎಂ.ಡಿಯಾಗಿದ್ದ ಶಿಖಾ, ಅನ್ಬುಕುಮಾರ್, ಹಾಲಿ ಎಂ.ಡಿ ಸತ್ಯವತಿ, ಐಪಿಎಸ್ ಅಧಿಕಾರಿ ರಾಧಿಕಾ ಅವರ ಸಹಿಯನ್ನ ಡಿಜಿಟಲ್ ನಕಲು ಮಾಡಿರುವ ಆರೋಪ ಕೇಳಿ ಬಂದಿದೆ. ಇವರ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಆದ್ರೆ ಸದ್ಯ ಕಲಬುರಗಿಯ ಸಾರಿಗೆ ನಿಗಮದಲ್ಲಿ ಮಂಡಳಿ ನಿರ್ದೇಶಕನಾಗಿರುವ ಶ್ರೀರಾಮ್, ಕೆಲ ದಿನಗಳಿಂದ ಕಚೇರಿಗೆ ಬಂದಿಲ್ವಂತೆ. ಮನೆಗೂ ಬಂದಿಲ್ವಂತೆ. ಇದೀಗ ಇಲಾಖಾ ತನಿಖೆ ಜೊತೆಗೆ ಪೊಲೀಸ್ ತನಿಖೆ ಸಹ ಶುರುವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:01 pm, Sat, 28 January 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್