ಬೆಂಗಳೂರು: ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಮತ್ತೆ ರಸ್ತೆಗಿಳಿದ ಬೌನ್ಸ್ ಇವಿ ಸ್ಕೂಟರ್

ಕರ್ನಾಟಕ ಸಾರಿಗೆ ಇಲಾಖೆ ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿತ್ತು. ಅದಾದ ನಂತರ ಕರ್ನಾಟಕ ಹೈಕೋರ್ಟ್​​ನಲ್ಲಿಯೂ ಬೈಕ್ ಟ್ಯಾಕ್ಸಿ ನಿಷೇಧ ಎತ್ತಿಹಿಡಿಯಲಾಗಿತ್ತು. ಇದರ ಬೆನ್ನಲ್ಲೇ, ಮೂರು‌ ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಬೌನ್ಸ್ ಸ್ಕೂಟಿಗಳು ಹೊಸ ರೂಪ, ಹೊಸ ನಿಯಮದೊಂದಿಗೆ ಬೆಂಗಳೂರಿನಲ್ಲಿ ಮತ್ತೆ ರಸ್ತೆಗಿಳಿಯುತ್ತಿವೆ. ಫುಡ್ ಡೆಲಿವರಿ ಬಾಯ್​ಸ್, ಕೊರಿಯರ್ ಬಾಯ್ಸ್, ಸೇಲ್ಸ್​​ಮನ್​​ಗಳಿಗೆ ನೆರವಾಗುವ ಉದ್ದೇಶದೊಂದಿಗೆ ಈ ಸೇವೆ ಆರಂಭವಾಗುತ್ತಿದೆ.

ಬೆಂಗಳೂರು: ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಮತ್ತೆ ರಸ್ತೆಗಿಳಿದ ಬೌನ್ಸ್ ಇವಿ ಸ್ಕೂಟರ್
ಬೌನ್ಸ್ ಸ್ಕೂಟಿ
Updated By: Ganapathi Sharma

Updated on: Jul 11, 2025 | 8:10 AM

ಬೆಂಗಳೂರು, ಜುಲೈ 11: ಬೆಂಗಳೂರಿನಲ್ಲಿ ಒಂದೆಡೆ ಅಗ್ರೀಗೇಟರ್ ಕಂಪನಿಗಳಾದ ಓಲಾ-ಊಬರ್​ಗಳಿಂದ ಹಗಲು ದರೋಡೆ ನಡೆಯುತ್ತಿದೆ. ಮತ್ತೊಂದೆಡೆ ರ್ಯಾಪಿಡೋ ಬೈಕ್ ಟ್ಯಾಕ್ಸಿ (Bike Taxi) ಬಂದ್ ಆಗಿದೆ. ಹೀಗಾಗಿ ಪ್ರತಿನಿತ್ಯ ಸ್ಕೂಟರ್​​ನಲ್ಲಿ ಕೆಲಸ ನಿರ್ವಹಿಸುವ ಜನರಿಗೆ ತೊಂದರೆಯಾಗುತ್ತಿದೆ. ಈ ಮಧ್ಯೆ, ಮೂರು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಬೌನ್ಸ್ ಸ್ಕೂಟಿ (Bounce Scooty) ಬಾಡಿಗೆ ಸರ್ವೀಸ್ ಮತ್ತೆ ಆರಂಭಿಸಲಾಗಿದೆ. ಕರ್ನಾಟಕ ಸಾರಿಗೆ ಇಲಾಖೆಯ ‘‘ರೆಂಟ್ ಎ ಮೋಟರ್ ಸೈಕಲ್‌ಸ್ಕೀಮ್- 1987’’ ರ ಅಡಿಯಲ್ಲಿ ಅನುಮತಿ ಪಡೆದು ಈ ಸ್ಕೂಟಿ ಸೇವೆ ನೀಡಲಾಗುತ್ತಿದೆ.

ಫುಡ್, ಕೊರಿಯರ್ ಬಾಯ್, ಸೇಲ್ಸ್​​ಮನ್​ಗಳಿಗಾಗಿ ಸೇವೆ

ಸದ್ಯ ನಗರದಲ್ಲಿ ಮತ್ತೆ ರಸ್ತೆಗಿಳಿದಿರುವ ಈ ಬಾಡಿಗೆ ಸ್ಕೂಟಿಗಳು ಬೌನ್ಸ್ ಎಲೆಕ್ಟ್ರಿಕ್ ಸ್ಕೂಟಿಗಳಾಗಿದ್ದು,ಮೊದಲ ಹಂತದಲ್ಲಿ ಗಿಗ್ ವರ್ಕರ್ಸ್​​ಗೆ, ಅಂದರೆ ಫುಡ್ ಡೆಲಿವರಿ, ಕೊರಿಯರ್ ಬಾಯ್ಸ್, ಸೇಲ್ಸ್ ಮ್ಯಾನ್ ಗಳಿಗೆ ರೆಂಟ್ ಕೊಡಲಾಗುತ್ತಿದೆ. ಈಗಾಗಲೇ ನಗರದಲ್ಲಿ ಒಂದು ಸಾವಿರ ಸ್ಕೂಟಿಗಳು ರಸ್ತೆಗಿಳಿಯಲು ಸಿದ್ಧವಾಗಿವೆ.

ಬೌನ್ಸ್ ಸ್ಕೂಟಿ ಬಾಡಿಗೆ ದರ ಎಷ್ಟು?

ಒಂದು ದಿನಕ್ಕೆ 240-280 ರಂತೆ ಚಾರ್ಜ್ ಮಾಡಲಾಗುತ್ತಿದೆ. ಕನಿಷ್ಠ ಮೂರು ದಿನಗಳಿಗೆ ಬುಕ್ಕಿಂಗ್ ಮಾಡಬೇಕಾಗುತ್ತದೆ. ನಗರದ ಜೆಪಿ‌ನಗರ, ಹೂಡಿ, ಯಲಹಂಕ, ಆರ್.ಆರ್ ನಗರ, ಹೆಚ್.ಎಸ್.ಆರ್ ಲೇಔಟ್ ಗಳಲ್ಲಿ ಹಬ್ ಮಾಡಲಾಗಿದೆ.

ಇದನ್ನೂ ಓದಿ
ಗೂಗಲ್ ಪೇ, ಫೋನ್ ಪೇ, ಪೇಟಿಯಂನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ
ಮೈಸೂರು: ನಡು ರಸ್ತೆಯಲ್ಲೇ ಮಹಿಳೆಯರು, ಯುವಕನ ಮೇಲೆ ಮಾರಣಾಂತಿಕ ದಾಳಿ
ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರದ ಅನುಮತಿ, ಕರ್ನಾಟಕ ಸರ್ಕಾರದ ನಿಲುವೇನು?
ಬೈಕ್ ಟ್ಯಾಕ್ಸಿ ನಿಷೇಧದಿಂದ ಸ್ವಿಗ್ಗಿ, ಜೊಮೆಟೋ ಡೆಲಿವರಿ ಬಾಯ್​ಗಳಿಗೂ ಕಷ್ಟ!

ಮೂರು ವರ್ಷದ ಹಿಂದೆ ಕೋವಿಡ್ ಸಂಕಷ್ಟದಲ್ಲಿ ಹೆಲ್ಮೆಟ್ ಕಳ್ಳತನ, ಬೈಕ್ ಪಾರ್ಕಿಂಗ್, ಡ್ಯಾಮೇಜ್ ಹೀಗೆ ಹಲವು ಸಮಸ್ಯೆಗಳಿಂದಾಗಿ ಈ ಬೈಕ್ ಬಾಡಿಗೆ ಸೇವೆ ನಿಲ್ಲಿಸಲಾಗಿತ್ತು. ಇದೀಗ ಹೊಸ ನಿಯಮಗಳೊಂದಿಗೆ ಸೇವೆ ಪುನರಾರಂಭಿಸಲಾಗಿದೆ. ಯಾವ ಹಬ್​​ನಿಂದ ತೆಗೆದುಕೊಂಡು ಹೋಗುತ್ತಾರೆಯೋ ಅದೇ ಹಬ್​ಗೆ ಅವಧಿ ಮುಗಿದ ನಂತರ ತಂದು ಕೊಡಬೇಕು. ಈ ಸ್ಕೂಟಿಗಳಲ್ಲಿ ವಾಹನ ಸವಾರರ ಕಂಟ್ರೋಲ್ ಸಹ ಇರಲಿದೆಯಂತೆ. ಈ ಬಗ್ಗೆ ಆನ್ಲೈನ್ ಡೆಲಿವರಿ ಬಾಯ್ಸ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರದ ಅನುಮತಿ, ಕರ್ನಾಟಕ ಸರ್ಕಾರದ ನಿಲುವೇನು?

ಒಟ್ಟಿನಲ್ಲಿ ಈಗಾಗಲೇ ಬೆಂಗಳೂರು ಹಾಗೂ ದೆಹಲಿಯಲ್ಲಿ ಆರಂಭಗೊಂಡಿರುವ ಈ ಬೌನ್ಸ್ ಸ್ಕೂಟಿ ಸೇವೆಗೆ ಗಿಗ್ ವರ್ಕರ್ಸ್​​​ನಿಂದ ಉತ್ತಮ‌ ಸ್ಪಂದನೆ ದೊರೆತಿದೆ. ಆದರೆ, ಕಳೆದ ಬಾರಿ ಆದಂತೆ ಹೆಲ್ಮೆಟ್ ಬಿಸಾಡುವುದು, ಎಲ್ಲೆಂದರಲ್ಲಿ ಪಾರ್ಕ್ ಮಾಡುವುದು ಮೊದಲಾದ ಪ್ರಕರಣಗಳು ಆಗದೇ ಇರಲಿ ಎಂದು ಆನ್ಲೈನ್ ಡೆಲಿವರಿ ಬಾಯ್ಸ್ ಮತ್ತು ಕಂಪನಿಯವರು ಆಶಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ