ಮಹಿಳೆಯ ಗೌರವಕ್ಕೆ ಧಕ್ಕೆ ಆರೋಪ, ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್​ಗೆ ಬಂಧನ ಭೀತಿ

ದೌರ್ಜನ್ಯ, ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪ ಹಿನ್ನೆಲೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್​ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿ ಬೆಂಗಳೂರಿನ ಸಿಸಿಹೆಚ್ 72ರ ಜಡ್ಜ್ ಕೆ.ಎಸ್.ಜ್ಯೋತಿಶ್ರೀ ಆದೇಶ ಹೊರಡಿಸಿದ್ದಾರೆ.

ಮಹಿಳೆಯ ಗೌರವಕ್ಕೆ ಧಕ್ಕೆ ಆರೋಪ, ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್​ಗೆ ಬಂಧನ ಭೀತಿ
ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 28, 2023 | 4:34 PM

ಬೆಂಗಳೂರು: ದೌರ್ಜನ್ಯ, ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪ ಹಿನ್ನೆಲೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ (BV Srinivas) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿ ಬೆಂಗಳೂರಿನ ಸಿಸಿಹೆಚ್ 72ರ ಜಡ್ಜ್ ಕೆ.ಎಸ್.ಜ್ಯೋತಿಶ್ರೀ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಬಿ.ವಿ.ಶ್ರೀನಿವಾಸ್​ಗೆ ಬಂಧನ ಭೀತಿ ಶುರುವಾಗಿದೆ. ಅಸ್ಸಾಂನ ಕಾಂಗ್ರೆಸ್ ನಾಯಕಿ ಅಂಕಿತಾ ದತ್ತಾ ದೂರು ನೀಡಿದ್ದರು. ದೂರುದಾರರು ಮಹಿಳೆಯಾಗಿದ್ದು ಆಕೆಯ ಗೌರವಕ್ಕೆ ಹಾನಿಯಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಯುವತಿ 164ರಡಿ ಹೇಳಿಕೆ ದಾಖಲಿಸಿದ್ದಾರೆ ಎಂದು ಯುವತಿ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದಮಂಡಿಸಿದ್ದರು. ಅಸ್ಸಾಂ ಪೊಲೀಸರ ಪರ ಅಲ್ಲಿನ ಎಸ್​ಪಿಪಿ ವಾದಿಸಿದ್ದರು. ಹಾಗಾಗಿ ಬಿ.ವಿ.ಶ್ರೀನಿವಾಸ್​ಗೆ ನಿರೀಕ್ಷಣಾ ಜಾಮೀನನ್ನು ಕೋರ್ಟ್​ ನಿರಾಕರಿಸಿದೆ.

ಶ್ರೀನಿವಾಸ್ ಕಿರುಕುಳ ನೀಡಿದ್ದಾರೆ ಎಂದು ಅಂಕಿತಾ ಆರೋಪ ಮಾಡಿದ ಬೆನ್ನಲ್ಲೇ ಇತ್ತೀಚೆಗೆ ಶ್ರೀನಿವಾಸ್ ಅವರ ನಿವಾಸವನ್ನು ಹುಡುಕಿಕೊಂಡು ಅಸ್ಸಾಂ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದರು. ಗುವಾಹಟಿಯ ಐಪಿಎಸ್ ಅಧಿಕಾರಿ ಪ್ರತೀಕ್ ಖುದ್ದು ಆಗಮಿಸಿದ್ದು, ಅಸ್ಸಾಂನ ಪೊಲೀಸರು ಬಸವೇಶ್ವರನಗರದಲ್ಲಿರುವ ನಿವಾಸಕ್ಕೆ ಬೆಂಗಳೂರು ನಗರ ಪೊಲೀಸರ ಸಹಾಯದಿಂದ ಬಂಧಿಸಲು ಆಗಮಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

ಅಸ್ಸಾಂನ ಕಾಂಗ್ರೆಸ್ ನಾಯಕಿ ಅಂಕಿತಾ ದತ್ತಾ ಆರೋಪವೇನು?

ಕಾಂಗ್ರೆಸ್ ನಾಯಕಿ ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನ ನಿವಾಸ ಹುಡುಕಿ ಬಂದ ಅಸ್ಸಾಂ ಪೊಲೀಸರು, ಬಂಧನದ ಭೀತಿಯಲ್ಲಿ ಯುವ​ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್

ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಅವರು, ಶ್ರೀನಿವಾಸ್ ಬಿವಿ ಅವರು ಸತತವಾಗಿ ನನಗೆ ಕಿರುಕುಳ ನೀಡಿದ್ದಾರೆ. ಲಿಂಗ ತಾರತಮ್ಯ ಮಾಡಿದ್ದಾರೆ, ಹೆಣ್ಣು ಎಂಬ ಕಾರಣಕ್ಕೆ ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಅಂಕಿತಾ ದೂರಿದ್ದರು. ನೀವು ಓಡ್ಕಾ ಕುಡಿಯುತ್ತೀರಾ ಎಂದು ವ್ಯಂಗ್ಯವಾಗಿ ಪ್ರಶ್ನೆಗಳನ್ನು ಕೇಳಿದ್ದಾಗಿ ಹೇಳಿಕೊಂಡಿದ್ದರು.

ಕಾಂಗ್ರೆಸ್ ಹೇಳಿದ್ದೇನು? ಭಾರತೀಯ ಯುವ ಕಾಂಗ್ರೆಸ್ ಅಂಕಿತಾ ಅವರ ಆರೋಪಗಳನ್ನು ಅಸಂಬದ್ಧ ಮತ್ತು ಆಧಾರರಹಿತ ಎಂದು ಹೇಳಿತ್ತು. ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಅಂಕಿತಾ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಹೀಗಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಹೇಳಿಕೊಂಡಿತ್ತು. ಬಿಜೆಪಿಯವರ ಒತ್ತಾಯದ ಮೇರೆಗೆ ಅವರು ಇಂತಹ ಆರೋಪ ಮಾಡಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ವಿಷಸರ್ಪವಾದರೆ, ಸೋನಿಯಾ ಗಾಂಧಿ ವಿಷಕನ್ಯೆನಾ? ಶಾಸಕ ಯತ್ನಾಳ್​​ ಪ್ರಶ್ನೆ

ಈ ಆರೋಪಗಳು ಸಂಪೂರ್ಣವಾಗಿ ನಿರಾಧಾರ ಎಂದು ಯುವ ಕಾಂಗ್ರೆಸ್‌ನ ಸಂಘಟನಾ ಕಾರ್ಯದರ್ಶಿ ಮತ್ತು ಅಸ್ಸಾಂ ಉಸ್ತುವಾರಿ ವರ್ಧನ್ ಯಾದವ್ ಹೇಳಿದ್ದರು. ಶೀಘ್ರದಲ್ಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗುತ್ತಿದೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:28 pm, Fri, 28 April 23