ಬೆಂಗಳೂರಿಗೆ ಜಲಕ್ಷಾಮದ ಭೀತಿ.! ಕೆಆರ್​ಎಸ್​ ಜಲಾಶಯದ ನೀರಿನ ಮಟ್ಟ ಕುಸಿತ‌‌

ನೀರಿನ ಹಾಹಾಕಾರ ಬೆಂಗಳೂರಲ್ಲೂ ಉಂಟಾಗುವ ಸಾಧ್ಯತೆ ಇದೆ. ಹೌದು ಕೆಆರ್​ಎಸ್​ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದೆ.

ಬೆಂಗಳೂರಿಗೆ ಜಲಕ್ಷಾಮದ ಭೀತಿ.! ಕೆಆರ್​ಎಸ್​ ಜಲಾಶಯದ ನೀರಿನ ಮಟ್ಟ ಕುಸಿತ‌‌
ಬೆಂಗಳೂರು ಜಲಮಂಡಳಿ
Follow us
|

Updated on: Jun 16, 2023 | 5:43 PM

ಬೆಂಗಳೂರು: ಕರ್ನಾಟಕಕ್ಕೆ ಮುಂಗಾರು (Karnataka Monsoon) ಪ್ರವೇಶ ವಿಳಂಬವಾದ ಹಿನ್ನೆಲೆ ಜಲಾಶಯಗಳ (Dam) ನೀರಿನ ಮಟ್ಟ ಕ್ಷೀಣಿಸುತ್ತಿದೆ. ರಾಜ್ಯದ ಪ್ರಮುಖ ಡ್ಯಾಂಗಳು ಬರಿದಾಗುತ್ತಿವೆ. ಇದರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿನ (Drinking Water) ತೊಂದರೆ ಉಂಟಾಗಿದೆ. ಜನರು ನೀರಿಲ್ಲದೆ ಹಪಹಪಿಸುವಂತಹ ಪರಿಸ್ಥಿತಿ ಉದ್ಭವವಾಗುತ್ತಿದೆ. ಇದೀಗ ನೀರಿನ ಹಾಹಾಕಾರ ಬೆಂಗಳೂರಲ್ಲೂ (Bengaluru) ಉಂಟಾಗುವ ಸಾಧ್ಯತೆ ಇದೆ. ಹೌದು ಕೆಆರ್​ಎಸ್​ (KRS) ಡ್ಯಾಂನಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದಿದೆ.

KRS ಜಲಾಶಯದಲ್ಲಿ ಕೇವಲ 11 TMC ನೀರು ಮಾತ್ರ ಲಭ್ಯವಿದ್ದು, ಇದರಿಂದ ನಗರಕ್ಕೆ ಕಾವೇರಿ ನೀರಿನ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗುವ ಆತಂಕ ಎದುರಾಗಿದೆ. ಹೀಗಾಗಿ ಕಾವೇರಿ ನೀರನ್ನು ಜೂನ್, ಜುಲೈ ,ಆಗಸ್ಟ್​​ವರೆಗೆ ಅಗತ್ಯ ಇರುವ ಕನಿಷ್ಠ 4.8 ಟಿಎಂಸಿ ಕಾಯ್ದಿರಿಸಿ ಎಂದು ಕಾವೇರಿ ನೀರಾವರಿ ನಿಗಮ ಮಂಡಳಿ (CNNL)ಗೆ ಬೆಂಗಳೂರು ಜಲಮಂಡಳೊಯ ಮುಖ್ಯ ಇಂಜಿನಿಯರ್​ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ನೀಡಲು ಬಂದಿದೆ ಹೊಸ ಆ್ಯಪ್​; ಇಲ್ಲಿದೆ ಅದರ ವಿಶೇಷತೆ 

ಬೆಂಗಳೂರು ನಗರಕ್ಕೆ ಪ್ರತಿನಿತ್ಯ 1,450 ಮಿಲಿಯನ್ ಲೀಟರ್ ನೀರು ಅಗತ್ಯವಿದ್ದು, ಇದನ್ನು ಕಾವೇರಿ ನದಿಯಿಂದ ವಿವಿಧ ಹಂತಗಳಿಂದ ನೀಡಲಾಗುತ್ತಿದೆ. ಶಿವನ ಅಣೆಕಟ್ಟಿನಿಂದ ಇಷ್ಟು ಪ್ರಮಾಣದ ನೀರು ಪೂರೈಕೆಯಾಗುತ್ತಿದೆ. ಬೆಂಗಳೂರು ನಗರಕ್ಕೆ ನಿರಂತರ ನೀರು ಪೂರೈಕೆಗೆ ತಿಂಗಳಿಗೆ 1.6 ಟಿಎಂಸಿ ನೀರು ಬೇಕು. ಜೂನ್‌ನಿಂದ ಆಗಸ್ಟ್‌ವರೆಗೆ ಬೆಂಗಳೂರು ನಗರಕ್ಕೆ 4.8 ಟಿಎಂಸಿ ನೀರು ಬೇಕಾಗುತ್ತದೆ. ಬೆಂಗಳೂರಿನ ಜನರಿಗೆ ನೀರು ಪೂರೈಸಲು, ಅಣೆಕಟ್ಟಿನಲ್ಲಿ ನಗರಕ್ಕೆ ನೀರು ಕಾಯ್ದಿರಿಸುವಂತೆ ನಾವು ವಿನಂತಿಸುತ್ತೇವೆ ಎಂದಿದ್ದಾರೆ.

ಬಿಪರ್‌ಜೋಯ್ ಚಂಡಮಾರುತದಿಂದಾಗಿ ಕಳೆದ ವಾರ ಆರಂಭವಾಗುವ ನಿರೀಕ್ಷೆಯಿದ್ದ ಮುಂಗಾರು ವಿಳಂಬವಾಗಿದೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ