ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥ; ಟಿವಿ9ನಲ್ಲಿ ಸುದ್ದಿ ಪ್ರಸಾರವಾದ ಬಳಿಕ ಎಚ್ಚೆತ್ತ ಅಧಿಕಾರಿಗಳು
ನೊಂದ ಸದಸ್ಯರೊಂದಿಗೆ ಮಾತನಾಡಿದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಗಿರುವ ಘಟನೆಯ ಬಗ್ಗೆ ಹೇಗೆ ಆಯಿತು? ನಿಮಗೆ ಆಸ್ಪತ್ರೆಯಲ್ಲಿ ಬಿಲ್ ಎಷ್ಟಾಗಿದೆ? ಇದಕ್ಕೆ ಕಾರಣ ಏನು? ಎಂದು ಎಲ್ಲಾ ವಿಷಯಗಳ ಮಾಹಿತಿಯನ್ನು ಪಡೆದಿದ್ದಾರೆ.
ಬೆಂಗಳೂರು: ಕಾವೇರಿ ನೀರಿನೊಳಗೆ ಕಲುಷಿತ ನೀರು ಮಿಶ್ರಣವಾಗಿ, ನೀರು ಸೇವಿಸಿದ 20ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಸಿದಂತೆ ಟಿವಿ9 ಡಿಜಿಟಲ್ನಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಬಿಡಬ್ಲೂಎಸ್ಎಸ್ಬಿ (BWSSB) ಅಧಿಕಾರಿಗಳು, ಇಂದು (ನವೆಂಬರ್ 17) ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನ ಟೆಲಿಕಾಂ ಲೇಔಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲದೇ ಸ್ಥಳೀಯರಿಂದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ನಿನ್ನೆ (ನವೆಂಬರ್ 16) ಆರೋಗ್ಯ ಸಿಬ್ಬಂದಿ ಮತ್ತು ಲೋಕಯುಕ್ತ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿದ್ದು, ಪರಿಶೀಲನೆ ನಡೆಸಿದ್ದರು. ಜೊತೆಗೆ ಸಂಜೆ ಸೋಶಿಯಲ್ ವೆಲ್ಫೇರ್ ಮತ್ತು ಎಂಪವರ್ ಆಫ್ ಇಂಡಿಯಾ ಟೀಮ್ ಕೂಡ ಸ್ಥಳಕ್ಕೆ ಭೇಟಿ ಮಾಡಿದ್ದಾರೆ. ನೊಂದ ಸದಸ್ಯರೊಂದಿಗೆ ಮಾತನಾಡಿದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಗಿರುವ ಘಟನೆಯ ಬಗ್ಗೆ ಹೇಗೆ ಆಯಿತು? ನಿಮಗೆ ಆಸ್ಪತ್ರೆಯಲ್ಲಿ ಬಿಲ್ ಎಷ್ಟಾಗಿದೆ? ಇದಕ್ಕೆ ಕಾರಣ ಏನು? ಎಂದು ಎಲ್ಲಾ ವಿಷಯಗಳ ಮಾಹಿತಿಯನ್ನು ಅಧಿಕಾರಿಗಳು ಪಡೆದಿದ್ದಾರೆ.
ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣ ಒಳಚರಂಡಿ ಮಿಶ್ರಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನ ಟೆಲಿಕಾಂ ಬಡಾವಣೆಯಲ್ಲಿ ನಡೆದಿದೆ. ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗಿದ್ದು, ಇದನ್ನು ತಿಳಿಯದೇ ನೀರು ಸೇವನೆ ಮಾಡಿದ ಜನರು ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ. ಸದ್ಯ 20ಕ್ಕೂ ಹೆಚ್ಚು ಜನರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನು ಆಸ್ಪತ್ರೆಯಲ್ಲಿ ಒಬ್ಬರಿಗೆ ಚಿಕಿತ್ಸೆಗಾಗಿ 5 ದಿನಕ್ಕೆ 50 ಸಾವಿರ ಬಿಲ್ ಮಾಡಿದ್ದಾರೆ. ಅಸ್ವಸ್ಥವಾಗಿರುವವರು ಕಲುಷಿತ ನೀರು ಸೇವಿಸಿರುವುದು ದೃಢವಾಗಿದೆ. ಪ್ರಾಣಾಪಾಯದಿಂದ ಪಾರಾದವರ ಕುಟುಂಬಸ್ಥರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಆದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿಯೇ ನೀಡಿಲ್ಲ. ನಮ್ಮ ಮನೆಗೆ ಸರಬರಾಜು ಮಾಡಿದ್ದ ನೀರು ಸಂಗ್ರಹಿಸಿಟ್ಟಿದ್ದೇವೆ. ಆ ನೀರು ಲ್ಯಾಬ್‌ಗೆ ಕಳಿಸುತ್ತೇವೆ ಎಂದು ರೋಗಿಯೊರ್ವರ ಪುತ್ರಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕುಡಿಯುವ ನೀರಿಗೆ ಒಳಚರಂಡಿಯ ನೀರು ಮಿಶ್ರಣ; ಕಲುಷಿತ ನೀರು ಕುಡಿದ ಮಕ್ಕಳು, ಮಹಿಳೆಯರಿಗೆ ವಾಂತಿ-ಭೇದಿ
ಬೆಂಗಳೂರು: ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣ; 20ಕ್ಕೂ ಹೆಚ್ಚು ಜನರು ಅಸ್ವಸ್ಥ