ಬೆಂಗಳೂರು: ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣ; 20ಕ್ಕೂ ಹೆಚ್ಚು ಜನರು ಅಸ್ವಸ್ಥ

ಅಸ್ವಸ್ಥವಾಗಿರುವವರು ಕಲುಷಿತ ನೀರು ಸೇವಿಸಿರುವುದು ದೃಢವಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾದವರ ಕುಟುಂಬಸ್ಥರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕಾವೇರಿ ನೀರಿಗೆ ಒಳಚರಂಡಿ ನೀರು ಮಿಶ್ರಣ; 20ಕ್ಕೂ ಹೆಚ್ಚು ಜನರು ಅಸ್ವಸ್ಥ
ಕಲುಷಿತ ನೀರು (ಸಂಗ್ರಹ ಚಿತ್ರ)
Follow us
TV9 Web
| Updated By: preethi shettigar

Updated on:Nov 15, 2021 | 11:55 AM

ಬೆಂಗಳೂರು: ಒಳಚರಂಡಿ ಮಿಶ್ರಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಬೆಂಗಳೂರಿನ ಹೆಚ್‌ಬಿಆರ್ ಲೇಔಟ್‌ನ ಟೆಲಿಕಾಂ ಬಡಾವಣೆಯಲ್ಲಿ ನಡೆದಿದೆ. ಕಾವೇರಿ ನೀರಿಗೆ ಒಳಚರಂಡಿ ನೀರು (Drainage water) ಮಿಶ್ರಣವಾಗಿದ್ದು, ಇದನ್ನು ತಿಳಿಯದೇ ನೀರು ಸೇವನೆ ಮಾಡಿದ ಜನರು ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ. ಸದ್ಯ 20ಕ್ಕೂ ಹೆಚ್ಚು ಜನರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನು ಆಸ್ಪತ್ರೆಯಲ್ಲಿ(Hospital) ಒಬ್ಬರಿಗೆ ಚಿಕಿತ್ಸೆಗಾಗಿ 5 ದಿನಕ್ಕೆ 50 ಸಾವಿರ ಬಿಲ್ ಮಾಡಿದ್ದಾರೆ. ಅಸ್ವಸ್ಥವಾಗಿರುವವರು ಕಲುಷಿತ ನೀರು ಸೇವಿಸಿರುವುದು ದೃಢವಾಗಿದೆ. ಪ್ರಾಣಾಪಾಯದಿಂದ ಪಾರಾದವರ ಕುಟುಂಬಸ್ಥರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ಆದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿಯೇ ನೀಡಿಲ್ಲ. ನಮ್ಮ ಮನೆಗೆ ಸರಬರಾಜು ಮಾಡಿದ್ದ ನೀರು ಸಂಗ್ರಹಿಸಿಟ್ಟಿದ್ದೇವೆ. ಆ ನೀರು ಲ್ಯಾಬ್‌ಗೆ ಕಳಿಸುತ್ತೇವೆ ಎಂದು ರೋಗಿಯೊರ್ವರ ಪುತ್ರಿ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಮಾಡಿದ್ದವರಿಗೆ ವಾಂತಿ ಭೇದಿ; 150ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು ಮದುವೆ ಮನೆಯಲ್ಲಿ ಊಟ ಮಾಡಿದ್ದವರಿಗೆ ವಾಂತಿ ಭೇದಿ ಉಂಟಾದ ಘಟನೆ ಸಂಭವಿಸಿದೆ. ಈ ಸಂಬಂಧ ಮೆಗ್ಗಾನ್ ಆಸ್ಪತ್ರೆಗೆ 150ಕ್ಕೂ ಹೆಚ್ಚು ಜನರು ದಾಖಲು ಆಗಿದ್ದಾರೆ. ಶಿವಮೊಗ್ಗ ತಾಲೂಕಿನ ಹರಮಘಟ್ಟದಲ್ಲಿ ನವೆಂಬರ್ 12 ಮದುವೆ ನಡೆದಿತ್ತು. ನಿನ್ನೆ ವಾಂತಿ ಭೇದಿಯಿಂದ 50 ಜನರು ಆಸ್ಪತ್ರೆಗೆ ದಾಖಲು ಆಗಿದ್ದರು. ನವೆಂಬರ್ 13 ರಂದು 100ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು ಆಗಿದ್ದಾರೆ.

ಮಕ್ಕಳಿಬ್ಬರ ಮದುವೆ ಮಾಡಿದ್ದ ಮಲ್ಲಿಕಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಿದ್ದಾರೆ. ಊಟ, ನೀರು ಕುರಿತು ಎಲ್ಲಾ ಮುಂಜಾಗ್ರತೆ ವಹಿಸಲಾಗಿತ್ತು. ಆದರೆ, ಊಟ ಮಾಡಿದ್ದವರಿಗೆ ವಾಂತಿ ಭೇದಿ, ಚಳಿ ಜ್ವರ ಬರುತ್ತಿದೆ ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಲ್ಲಿಕಪ್ಪ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ವಿಜಯನಗರ: ಕಲುಷಿತ ನೀರು ಸೇವನೆ ಪ್ರಕರಣ; ಮಕರಬ್ಬಿ ಗ್ರಾಮದಲ್ಲಿ ಮುಂದುವರಿದ ಸಾವಿನ ಸರಣಿ

ವಿಜಯನಗರ: ಕಲುಷಿತ ನೀರು ಸೇವಿಸಿ ಮೃತಪಟ್ಟ ಕುಟುಂಬಗಳಿಗೆ ತಲಾ 3 ಲಕ್ಷ ಪರಿಹಾರ ಘೋಷಣೆ

Published On - 10:51 am, Mon, 15 November 21