ಬೆಂಗಳೂರಿನಲ್ಲಿ ಲೈಸನ್ಸ್ ಇಲ್ಲದ ಗನ್ ಸಪ್ಲೈ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್, ಗನ್ ಹಾಗೂ ಐದು ಗುಂಡುಗಳು ವಶಕ್ಕೆ
ನಗರದ ಹಲವು ಕಡೆ ಅಕ್ರಮವಾಗಿ ಗನ್ ಮಾರಾಟದ ಶಂಕೆ ವ್ಯಕ್ತವಾಗಿದೆ. ಮಾಹಿತಿ ಸಿಕ್ಕ ಬೆನ್ನಲ್ಲೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಸದ್ಯ ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಗಾಂಜಾ ಆಯ್ತು, ಡ್ರಗ್ಸ್ ಆಯ್ತು ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮತ್ತೊಂದು ದೊಡ್ಡ ಮಾಫಿಯಾ ಎಂಟ್ರಿ ಕೊಟ್ಟದೆ. ನಗರದಲ್ಲಿ ಗನ್ ಮಾಫಿಯ(Gun Mafia) ಕಾಲಿಟ್ಟ ಬಗ್ಗೆ ಪೊಲೀಸರು ಮಾಹಿತಿ ಬಯಲು ಮಾಡಿದ್ದಾರೆ. ಲೈಸನ್ಸ್ ಇಲ್ಲದ ಗನ್ಗಳು ಗಲ್ಲಿ ಗಲ್ಲಿಯಲ್ಲಿ ಸೇಲ್ ಆಗ್ತಿದೆಯಂತೆ. ಹೊರರಾಜ್ಯಗಳಿಂದ ನಗರಕ್ಕೆ ಗನ್ ಸಪ್ಲೈ ಮಾಡಲಾಗುತ್ತಿದೆಯಂತೆ ಈ ಬಗ್ಗೆ ಪೊಲೀಸರು ಆತಂಕಕಾರಿ ಮಾಹಿತಿ ಬಯಲು ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗಾಂಜಾ, ಡ್ರಗ್ಸ್ ಮಾಫಿಯಾ ಹೆಚ್ಚಾಗಿದೆ. ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಸಪ್ಲೈ ಮಾಡಿದ್ದಾರೆ. ಇದಕ್ಕೆ ಮಟ್ಟ ಹಾಕಲು ಪೊಲೀಸರು ಹರ ಸಾಹಸ ಪಟ್ಟಿದ್ದಾರೆ, ಇನ್ನೂ ಪಡುತ್ತಿದ್ದಾರೆ. ಸದ್ಯ ಈಗ ನಗರದಲ್ಲಿ ಮತ್ತೊಂದು ಮಾಫಿಯಾ ತಲೆ ಎತ್ತಿದೆ. ಯಾವುದೇ ಪರವಾನಗೆ ಇಲ್ಲದೆ ಗನ್ ಸಪ್ಲೈ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುತ್ತಿದ್ದ ಗನ್ ಬಗ್ಗೆ ಬ್ಯಾಟರಾಯನಪುರ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ನಗರದ ಹಲವು ಕಡೆ ಅಕ್ರಮವಾಗಿ ಗನ್ ಮಾರಾಟದ ಶಂಕೆ ವ್ಯಕ್ತವಾಗಿದೆ. ಮಾಹಿತಿ ಸಿಕ್ಕ ಬೆನ್ನಲ್ಲೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಸದ್ಯ ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಸ್ಯಾಟಲೈಟ್ ಬಸ್ ಸ್ಟಾಪ್ ಬಳಿ ಅಕ್ರಮವಾಗಿ ಪಿಸ್ತೂಲ್ ಮಾರಾಟಕ್ಕೆ ಯತ್ನಿಸಿದ್ದು ಬ್ಲಾಕ್ ಬ್ಯಾಗ್ನ ಒಳಗೆ ವೈಟ್ ಬ್ಯಾಗ್ನಲ್ಲಿ ಪಿಸ್ತೂಲ್ಇಟ್ಟುಕೊಂಡಿದ್ದರು. ಪಿಸ್ತೂಲ್ ಜೊತೆ ಐದು ಜೀವಂತ ಗುಂಡುಗಳು ಸಹ ಪತ್ತೆಯಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ರಾಹುಲ್ ಸತೀಶ್ ಮಾನೆ ಮತ್ತು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಫಿಕ್ ದಸ್ತಗಿರ್ ನದಾಫ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಪಿಸ್ತೂಲ್ ಹಾಗೂ ಐದು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 50 ವರ್ಷಗಳಿಂದ ಮಸೀದಿಯನ್ನು ಕಾಳಜಿ ವಹಿಸಿ ನೋಡಿಕೊಳ್ಳುತ್ತಿದೆ ಪಶ್ಚಿಮ ಬಂಗಾಳದ ಈ ಹಿಂದೂ ಕುಟುಂಬ
ಕೇರಳಾದ ಅತಿರಪ್ಪಿಳ್ಳಿ ಜಲಪಾತದಲ್ಲಿ ಈಜುಡುಗೆಯಲ್ಲಿ ಪೋಸ್ ನೀಡಿದ ಹಾಟ್ ಬೆಡಗಿ ಸಮಂತಾ