ಬೆಂಗಳೂರು ಸೆ.25: ತಮಿಳುನಾಡಿಗೆ (Tamil Nadu) ಕಾವೇರಿ ನೀರು (Cauvery Water Dispute) ಬಿಡುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ನಡುವೆಯೇ ಕೆಆರ್ಎಸ್ (KRS) ಆಣೆಕಟ್ಟೆಯಿಂದ ಹೊರಹರಿವು ಹೆಚ್ಚಳವಾಗಿದೆ. ಶನಿವಾರ ಮತ್ತು ಭಾನುವಾರ ಹೆಚ್ಚುವರಿಯಾಗಿ 800-1,000 ಕ್ಯೂಸೆಕ್ ನೀರು ಬಿಡಲಾಗಿದೆ. ಭಾನುವಾರ 6,874 ಕ್ಯೂಸೆಕ್ ನೀರು ಬಿಡಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನಿರ್ದೇಶನದಂತೆ 3,838 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ನಾಲೆಗಳಿಗೆ 3,036 ಕ್ಯೂಸೆಕ್ ನೀರು ಬಿಡಲಾಗಿದೆ. ಸೆಪ್ಟೆಂಬರ್ 27 ರವರೆಗೆ ಪ್ರತಿದಿನ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ CWMA ಸೂಚಿಸಿದೆ. ಹಾಗಿದ್ದರೇ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಇಲ್ಲಿದೆ ವಿವರ
ಜಲಾಶಯದ ಗರಿಷ್ಠಮಟ್ಟ – 124.80 ಅಡಿ,
ಇಂದಿನ ಮಟ್ಟ – 96.70 ಅಡಿ,
ಒಳಹರಿವು – 5993 ಸಾವಿರ ಕ್ಯೂಸೆಕ್,
ಒಟ್ಟ ಹೊರಹರಿವು – 6716 ಸಾವಿರ ಕ್ಯೂಸೆಕ್,
ನದಿಗೆ – 4105 ಕ್ಯೂಸೆಕ್
ಹೇಮಾವತಿ ಜಲಾಶಯದಿಂದಲೂ ಕೆ.ಆರ್.ಎಸ್ನತ್ತ ನೀರು ಹರಿಯುತ್ತಿದೆ. ಅಧಿಕಾರಿಗಳು ಕಳೆದ ಒಂದೂವರೆ ತಿಂಗಳಿನಿಂದ ನಿತ್ಯ 1300 ಕ್ಯುಸೆಕ್ ನೀರು ಹರಿಸುತ್ತಿದ್ದಾರೆ.
ಇಂದಿನ ನೀರಿನ ಮಟ್ಟ – 2896.90 ಅಡಿ,
ಗರಿಷ್ಠ ನೀರಿನ ಮಟ್ಟ – 2922 ಅಡಿ,
ಒಟ್ಟು ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ,
ಇಂದಿನ ಸಂಗ್ರಹ ಸಾಮರ್ಥ್ಯ – 17.904 ಟಿಎಂಸಿ,
ಬಳಕೆಗೆ ಲಭ್ಯವಿರುವ ನೀರು – 13.565 ಟಿಎಂಸಿ,
ಒಳಹರಿವು – 2704 ಸಾವಿರ ಕ್ಯೂಸೆಕ್,
ಹೊರಹರಿವು – 1300 ಸಾವಿರ ಕ್ಯೂಸೆಕ್
ಇದನ್ನೂ ಓದಿ: ಕಾವೇರಿ ನದಿ ನೀರು ವಿಚಾರದಲ್ಲಿ ಸರ್ಕಾರ ಆರಂಭದಲ್ಲೇ ಎಡವಿದೆ: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ
ಗರಿಷ್ಟ ಸಾಮರ್ಥ್ಯ – 2859,
ಇಂದಿನ ಸಾಮರ್ಥ್ಯ – 2855.94,
ಒಳಹರಿವು – 992 ಅಡಿ,
ಹೊರ ಹರಿವು -1600 ಕ್ಯೂಸೆಕ್
ನಾಲೆಗೆ- 1200 ಕ್ಯೂಸೆಕ್ ನೀರು ಬಿಡಲಾಗುತ್ತಿದೆ.
ಗರಿಷ್ಠ ಸಾಮರ್ಥ್ಯ – 84 ಅಡಿ,
ಇಂದಿನ ನೀರಿನ ಮಟ್ಟ – 74.24 ಅಡಿ,
ಇಂದಿನ ಒಳಹರಿವು – 2,126 ಕ್ಯೂಸೆಕ್
ತಮಿಳುನಾಡಿಗೆ ಕೆಆರ್ಎಸ್ ಡ್ಯಾಂನಿಂದ ನೀರು ಬಿಡುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ನೀಡಿವೆ. ಇದಕ್ಕೆ ಸಾರಿಗೆ ಇಲಾಖೆ ನೌಕರರು, ಹೊಟೇಲ್ ಮಾಲಿಕರು, ಓಲಾ, ಊಬರ್ ಸೇರಿಂದ ಎಲ್ಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:14 am, Mon, 25 September 23