ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು
ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದ್ದಾರೆ. ಶಂಕಿತ ಉಗ್ರ ಅಖ್ತರ್ ಹುಸೇನ್ ನೀಡದ ಮಾಹಿತಿ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರು 4 ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸದ್ಯ ಶಂಕಿತ ಉಗ್ರನನ್ನು 10 ದಿನ ಸಿಸಿಬಿ ಕಸ್ಟಡಿಗೆ ನೀಡಿ ಎನ್ಆಯ್ಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಶಂಕಿತ ಉಗ್ರ ಅಖ್ತರ್ ಆಗಸ್ಟ್ 3ರವರೆಗೆ ಸಿಸಿಬಿ ಕಸ್ಟಡಿಯಲ್ಲಿರಲಿದ್ದಾನೆ. ಶಂಕಿತ ಉಗ್ರನ ಮೊಬೈಲ್ ರಿಟ್ರೀವ್ಗೆ ಕೊರ್ಟ್ ಅನುಮತಿ ನೀಡಿದೆ. ಅಖ್ತರ್ ಹುಸೇನ್ ಅಸ್ಸಾಂ ಮೂಲದನಾಗಿದ್ದಾನೆ.
ಆರೋಪಿ ಟೆಲಿಗ್ರಾಂ, ಫೇಸ್ ಬುಕ್ ಮೆಸೆಂಜರ್ ಸೇರಿ ಹಲವು ಗ್ರೂಪ್ಗಳನ್ನ ಹೊಂದಿದ್ದಾನೆ. ಅಲ್ಲದೆ, ಆರೋಪಿ ಜೊತೆ ಚೆನ್ನೈ, ಅಸ್ಸಾಂ ಹಾಗೂ ವೆಸ್ಟ್ ಬೆಂಗಾಲದಲ್ಲಿ ತನಿಖೆ ಮಾಡುವ ಅಗತ್ಯ ಇದೆ. ತನಿಖೆ ಸಂಬಂಧ ಸಾಕಷ್ಟು ಸಾಕ್ಷ್ಯ ಗಳ ಸಂಗ್ರಹ ಅಗತ್ಯ ಇದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ನೀಡುವಂತೆ ಸಿಸಿಬಿ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.
ಸಿಸಿಬಿ ಅಧಿಕಾರಿಗಳು ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ. 23 ವರ್ಷದ ಶಂಕಿತ ಉಗ್ರ ಅಸ್ಸಾಂ ಮೂಲದವನಾಗಿದ್ದು, ಈತನನ್ನು ಸಿಸಿಬಿ ಪೊಲೀಸರು ತಮಿಳುನಾಡಿನ ಸೇಲಂನಲ್ಲಿ ವಶಕ್ಕೆ ಪಡೆದಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಶಂಕಿತ ಉಗ್ರನನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ಬೆಂಗಳೂರು ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
Published On - 5:26 pm, Mon, 25 July 22