ಇ ಸಿಗರೇಟ್, ಇ ಲಿಕ್ವೀಡ್ ಮಾರಾಟ ಮಾಡ್ತಿದ್ದ ಕಂಪನಿ ಗೋಡೌನ್ ಮೇಲೆ CCB ದಾಳಿ; 25 ಲಕ್ಷ ರೂ. ಮೌಲ್ಯದ ನಿಷೇಧಿತ ಲಿಕ್ವೀಡ್ ವಶ

ನಿಷೇಧಿತ ಇ ಸಿಗರೇಟ್(e-cigarette), ಇ ಲಿಕ್ವೀಡ್(e-liquid) ಮಾರಾಟ ಮಾಡುತ್ತಿದ್ದ ಕುಂಬಾರಪೇಟೆಯ ಕಂಪನಿ ಗೋಡೋನ್ ಮೇಲೆ ಸಿಸಿಬಿ (CCB)ಮಹಿಳಾ ಸಂರಕ್ಷಣಾ ವಿಭಾಗದಿಂದ ದಾಳಿ ಮಾಡಲಾಗಿದೆ. ಈ ವೇಳೆ ಗೋಡೋನ್​ನಲ್ಲಿ ಸಂಗ್ರಹಿಸಿದ್ದ 1 ಕೋಟಿ 25 ಲಕ್ಷ ರೂ. ಮೌಲ್ಯದ ನಿಷೇಧಿತ ಲಿಕ್ವೀಡ್ ವಶಕ್ಕೆ.

ಇ ಸಿಗರೇಟ್, ಇ ಲಿಕ್ವೀಡ್ ಮಾರಾಟ ಮಾಡ್ತಿದ್ದ ಕಂಪನಿ ಗೋಡೌನ್ ಮೇಲೆ CCB  ದಾಳಿ;  25 ಲಕ್ಷ ರೂ. ಮೌಲ್ಯದ ನಿಷೇಧಿತ ಲಿಕ್ವೀಡ್ ವಶ
ಇಬ್ಬರು ಆರೋಪಿಗಳು ಅರೆಸ್ಟ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 03, 2023 | 2:39 PM

ಬೆಂಗಳೂರು: ನಿಷೇಧಿತ ಇ ಸಿಗರೇಟ್(e-cigarette), ಇ ಲಿಕ್ವೀಡ್(e-liquid) ಮಾರಾಟ ಮಾಡುತ್ತಿದ್ದ ಕುಂಬಾರಪೇಟೆಯ ಕಂಪನಿ ಗೋಡೌನ್ ಮೇಲೆ ಸಿಸಿಬಿ (CCB)ಮಹಿಳಾ ಸಂರಕ್ಷಣಾ ವಿಭಾಗದಿಂದ ದಾಳಿ ಮಾಡಲಾಗಿದೆ. ಈ ವೇಳೆ ಗೋಡೋನ್​ನಲ್ಲಿ ಸಂಗ್ರಹಿಸಿದ್ದ 1 ಕೋಟಿ 25 ಲಕ್ಷ ರೂ. ಮೌಲ್ಯದ ನಿಷೇಧಿತ ಲಿಕ್ವೀಡ್, 8 ಸಾವಿರ ವಿವಿಧ ಫ್ಲೇವರ್​ನ ಇ‌-ಸಿಗರೇಟ್, 2227  ಇ-ಸಿಗರೇಟ್ ಲಿಕ್ವೀಡ್, ಇ-ಸಿಗರೇಟ್ ಪಾಡ್ ಹಾಗೂ ಕೆಲ ಬಿಡಿಭಾಗಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆಯೂ ಎರಡು ಮೂರು ಬಾರಿ ಇದೇ ಗೋಡೋನ್ ಮೇಲೆ ದಾಳಿ ಮಾಡಲಾಗಿತ್ತು. ಆದರೂ ಕೂಡ ಪದೇ ಪದೇ ಇದೇ ರೀತಿ ನಿಷೇಧಿತ ಇ‌ಸಿಗರೇಟ್ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.

ಇನ್ನು ಇದನ್ನ ಕೆಲವೊಂದು ಪಾರ್ಟಿ, ಇವೆಂಟ್​ಗಳಿಗೆ ಸರಬರಾಜು ಮಾಡಿರುವುದು ಬಯಲಿಗೆ ಬಂದಿದೆ. ಆದ್ರೆ, ಯಾವ ಯಾವ ಪಾರ್ಟಿ, ಇವೆಂಟ್ ಅನ್ನೋದು ತನಿಖೆ ಬಳಿಕ ಗೊತ್ತಾಗಬೇಕಿದೆ. ಜೊತೆಗೆ ಆನ್ ಲೈನ್ ಮೂಲಕವೂ ಇ-ಸಿಗರೇಟ್ ಮಾರಾಟ ಮಾಡುತ್ತಿರುವುದು ತಿಳಿದಿದೆ. ಈ ಇ-ಸಿಗರೇಟ್ ಆರೋಗ್ಯಕ್ಕೆ ಮಾರಕ ಎಂದು ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಆದರೂ ಇವರು ಬೇರೆ ಬೇರೆ ರಾಜ್ಯಗಳಿಂದ ತಂದು ಮಾರಾಟ ಮಾಡುತ್ತಿದ್ದರು. ಇನ್ನು ಈ ಪ್ರಕರಣ ಸಂಬಂಧ ಸಚಿನ್ ಮತ್ತು ಸಿದ್ದಲಿಂಗ ಎಂಬಿಬ್ಬರನ್ನ ಬಂಧಿಸಿ, ಗೋಡೌನ್ ಮಾಲೀಕನ ಮೇಲೆ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ ಸ್ಟಡಿ ಸೆಂಟರ್​ ಮೇಲೆ ಸಿಸಿಬಿ ದಾಳಿ

ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರ ಕೇರ್​ ಟೇಕರ್ ಸಂಸ್ಥೆ ಮೇಲೆ ಸಿಸಿಬಿ ಪೊಲೀಸರ ದಾಳಿ​​: ವಂಚನೆ ಆರೋಪ

ಬೆಂಗಳೂರು: ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರ ಕೇರ್​ ಟೇಕರ್​​ ಹೆಸರಲ್ಲಿ ಹಣ ಸಂಗ್ರಹಿಸಿ ವಂಚನೆ ಮಾಡಿದ ಆರೋಪದ ಮೇಲೆ ಬೊಮ್ಮನಹಳ್ಳಿ ವ್ಯಾಪ್ತಿಯ ಖಾಸಗಿ ಟ್ರಸ್ಟ್​ ಮೇಲೆ ಸಿಸಿಬಿ ಪೊಲೀಸರು(CCB Police) ದಾಳಿ ನಡೆಸಿದ್ದರು. ಅಜಯ್ ಹಾಗೂ ವೆಂಕಟಾಚಲ ಎಂಬ ಇಬ್ಬರು ನಡೆಸುತ್ತಿದ್ದ ಟ್ರಸ್ಟ್ ಇದಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಸಮಾಜದಲ್ಲಿ ಎಷ್ಟೋ ಜ‌ನ ಅನಾಥ ಮಕ್ಕಳು, ವೃದ್ದರೂ, ನಿರ್ಗತಿಕರು ಇದ್ದಾರೆ. ಇಂತವರನ್ನು ಕೇರ್ ಟೇಕ್ ಮಾಡುವುದಕ್ಕೆಂದು ಅದೆಷ್ಟೋ ಸಂಸ್ಥೆಗಳು ಇವೆ. ಕೆಲವರು ಸ್ವಂತ ಹಣದಲ್ಲಿ ಕೇರ್ ಟೇಕ್ ಮಾಡಿದ್ರೆ, ಇನ್ನು ಕೆಲವರು ಫಂಡ್ ಕಲೆಕ್ಟ್ ಮಾಡಿ ನೋಡ್ಕೋತಾರೆ. ಆದ್ರೆ, ಇಲ್ಲೋಂದು ಟೀಂ ಇಂತಹ ಎಮೋಷನ್ ಫೀಲಿಂಗನ್ನೇ ಬಂಡವಾಳ ಮಾಡಿಕೊಂಡು ಕೋಟ್ಯಾಂತರ ಲೂಟಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ