ಅನಧಿಕೃತ ಬೆಟ್ಟಿಂಗ್ ಹಿನ್ನೆಲೆ ರೇಸ್ ಕೋರ್ಸ್ ಮೇಲೆ ಸಿಸಿಬಿ ದಾಳಿ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ

ಬೆಂಗಳೂರು ನಗರದ ರೇಸ್​ಕೋರ್ಸ್ (Bengaluru race course ) ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ನಿನ್ನೆ ದಾಳಿ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ಅಧಿಕೃತವಾಗಿ ಬೆಟ್ಟಿಂಗ್ ಜೊತೆಗೆ ಅನಧಿಕೃತವಾಗಿ ಕೂಡ ಬೆಟ್ಟಿಂಗ್ ನಡೆಸಲಾಗುತ್ತಿತ್ತು ಎಂದು ಹೇಳಿದ್ದಾರೆ.

ಅನಧಿಕೃತ ಬೆಟ್ಟಿಂಗ್ ಹಿನ್ನೆಲೆ ರೇಸ್ ಕೋರ್ಸ್ ಮೇಲೆ ಸಿಸಿಬಿ ದಾಳಿ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ
Edited By: Rakesh Nayak Manchi

Updated on: Jan 13, 2024 | 3:01 PM

ಬೆಂಗಳೂರು, ಜ.13: ಅಧಿಕೃತವಾಗಿ ಬೆಟ್ಟಿಂಗ್ ಜೊತೆಗೆ ಅನಧಿಕೃತವಾಗಿ ಕೂಡ ಬೆಟ್ಟಿಂಗ್ ನಡೆಯುತ್ತಿದ್ದಿದ್ದರಿಂದ ಸಿಸಿಬಿ ಪೊಲೀಸರು (CCB) ರೇಸ್​ಕೋರ್ಸ್ (Race Course) ಬುಕ್ಕಿಂಗ್ ಕೌಂಟರ್ ಮೇಲೆ ದಾಳಿ ನಡೆಸಿದ್ದಾರೆ ಎಂದು ನಗರ (Bengaluru) ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ. ಸಿಸಿಬಿ ತಂಡದ ವಿಶೇಷ ವಿಚಾರಣೆ ದಳವು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

ಯಾವುದೇ ದಾಖಲೆಗಳು, ರಶೀದಿ ಇಟ್ಟುಕೊಳ್ಳದೇ ಹಣದ ವ್ಯವಹಾರ ನಡೆಸಲಾಗುತ್ತಿತ್ತು. ಈ ಹಿನ್ನಲೆ ದಾಳಿ‌ ಮಾಡಿ ಬರೋಬ್ಬರಿ ಮೂರು ಕೋಟಿ 45 ಲಕ್ಷ ರೂಪಾಯಿ ನಗದು ವಶಪಡೆಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ 66 ಜನರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದು ನೊಟೀಸ್ ನೀಡಲಾಗಿದೆ. ಐಪಿಸಿ ಸೆಕ್ಷನ್ 41ರ ಅಡಿ ನೊಟೀಸ್ ನೀಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.

ಅನಧಿಕೃತವಾಗಿ ನಡೆಸಲಾಗುತ್ತಿದ್ದ ಬೆಟ್ಟಿಂಗ್​ನ ಲಾಭ ಯಾರು ಪಡೆದುಕೊಳ್ಳುತ್ತಿದ್ದಾರೆ, ಇದರ ಹಿಂದೆ ಯಾರಿದಾರೆ ಎಂಬುದರ ಬಗ್ಗೆ ಸಿಸಿಬಿ ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ರೀತಿ ಅಕ್ರಮ‌ ಬೆಟ್ಟಿಂಗ್​ನಿಂದ ಜಿಎಸ್​ಟಿ ವಂಚನೆ ಆಗಿದೆ. ಶೇ.28 ರಷ್ಟು ಜಿಎಸ್​ಟಿ ಕಟ್ಟಬೇಕು. ಆದರೆ ಜಿಎಸ್​ಟಿ ತೆರಿಗೆ ವಂಚನೆ ಮಾಡಲಾಗಿದೆ. ಅನಧಿಕೃತ ವ್ಯಕ್ತಿಗಳು ಕೌಂಟರ್ ನಡೆಸುತ್ತಿದ್ದ ಮಾಹಿತಿ ಸಿಕ್ಕಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತದೆ ಎಂದರು.

ಇದನ್ನೂ ಓದಿ: ಬೆಂಗಳೂರು: ಏಳು ಜನ ಡ್ರಗ್​​​​​ ಪೆಡ್ಲರ್​​ಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು

ಜನರಿಂದ ಹೆಚ್ಚು ಹಣ ಪಡೆದು ಕಡಿಮೆ ಮೊತ್ತಕ್ಕೆ ಟಿಕೆಟ್ ಮಾರಾಟ, ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಾಗೂ ಜಿಎಸ್​ಟಿ ಕಟ್ಟದೆ ವಂಚನೆ ಮಾಡಿದ ಆರೋಪ ಮೇಲೆ ನಿನ್ನೆ ಸಿಸಿಬಿ ಪೊಲೀಸರು ರೇಸ್​ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದರು. ದಾಳಿ ವೇಳೆ 3 ಕೋಟಿ 45 ಲಕ್ಷ ರೂ. ಹಣ ಜಪ್ತಿ ಮಾಡಿದ್ದರು.

ಎಎ ಅಸೋಸಿಯೇಟ್ಸ್, ಸಾಮ್ರಾಟ್ ಅಂಡ್ ಕೋ. ನೀಲಕಂಠ, ಮೆಟ್ರೊ ಅಸೋಸಿಯೇಟ್ಸ್, ಶೆಟ್ಟಿ ಅಸೋಸಿಯೇಟ್ಸ್, ಮೇಘನ ಎಂಟರ್ ಪ್ರೈಸಸ್, ಮಂಜು ಅಸೋಸಿಯೇಟ್ಸ್, ಮಾರುತಿ ಎಂಟರ್ ಪ್ರೈಸಸ್, ಆದಿತ್ಯ ಎಂಟರ್ ಪ್ರೈಸಸ್, ಪರಸ್ ಅಂಡ್ ಕೋ, ಬನಶಂಕರಿ ಎಂಟರ್ ಪ್ರೈಸಸ್, ಶ್ರೀಹರಿ ಎಂಟರ್ ಪ್ರೈಸಸ್, ತೇಜಸ್ವಿನಿ ಎಂಟರ್ ಪ್ರೈಸಸ್, ಸೂರ್ಯ ಅಂಡ್ ಕೋ, ಹೆಚ್ಎನ್ಎಸ್ ಅಂಡ್ ಕೋ, ಸಾಯಿ ರತನ್, ವಿಕ್ರಾಂತ್ ಎಂಟರ್ ಪ್ರೈಸಸ್, ನಿರ್ಮಲ್ ಅಂಡ್ ಕೋ, ಶ್ರೀರಾಮ ಎಂಟರ್ ಪ್ರೈಸಸ್, ಚಾಮುಂಡೇಶ್ವರಿ ಎಂಟರ್ ಪ್ರೈಸಸ್, ಆರ್‌.ಆರ್ ಎಂಟರ್ ಪ್ರೈಸಸ್, ರಾಯಲ್ ಇಎನ್ ಟಿಪಿ, ಆರ್.ಕೆ.ಎಂಟರ್ ಪ್ರೈಸಸ್ ಶ್ರೀವಾರಿ ಆ್ಯಂಡ ಕಂಪನಿ, ಕಾರ್ತಿಕ್ ಆ್ಯಂಡ ಕಂಪನಿ, ಅಮೃತಾಯ ಕೌಂಟರ್​ಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us