ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ; ಪಶ್ಚಿಮ ಬಂಗಾಳ ಮೂಲದ ಮೂವರು ಬಂಧನ

ಬೇರೆಯವರ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾಡಿಸಿ ಕಳ್ಳಸಾಗಣೆ ಮೂಲಕ ಮಹಿಳೆಯರನ್ನು ಕರೆತಂದು ದಂಧೆ ನಡೆಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ಈ ಪ್ರಕರಣ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

  • TV9 Web Team
  • Published On - 15:40 PM, 19 Apr 2021
ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ; ಪಶ್ಚಿಮ ಬಂಗಾಳ ಮೂಲದ ಮೂವರು ಬಂಧನ
ಪಶ್ಚಿಮ ಬಂಗಾಳ ಮೂಲದ ಮೂವರು ಆರೋಪಿಗಳು

ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಪಶ್ಚಿಮ ಬಂಗಾಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ನೌಶದ್ ಅಲಿ (55), ರಿಯಾಜುಲ್ ಶೇಕ್ (31), ಸಮೀರ್ (40) ಎಂದು ತಿಳಿದುಬಂದಿದೆ. ಬೇರೆಯವರ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾಡಿಸಿ ಕಳ್ಳಸಾಗಣೆ ಮೂಲಕ ಮಹಿಳೆಯರನ್ನು ಕರೆತಂದು ದಂಧೆ ನಡೆಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ಈ ಪ್ರಕರಣ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಂಧಿತರು ಮಹಿಳೆಯರನ್ನು ಹೊರ ದೇಶ ಹಾಗೂ ರಾಜ್ಯದಿಂದ ಕಳ್ಳಸಾಗಣೆ ಮೂಲಕ ಕರೆತರುತ್ತಿದ್ದರು. ದಾಳಿ ವೇಳೆ ಬೇರೆ ಬೇರೆ ಹೆಸರಿನ 11 ಆಧಾರ್ ಕಾರ್ಡ್​ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸರವನ್ನು ಎಗರಿಸಿ ಕಳ್ಳ ಪರಾರಿ
ಕೋಲಾರ: ಮಹಿಳೆಯ ಚಿನ್ನದ ಸರವನ್ನು ಎಗರಿಸಿ ಕಳ್ಳ ಪರಾರಿಯಾಗಿರುವ ಘಟನೆ ಕೋಟೆ ಬಡಾವಣೆಯಲ್ಲಿ ನಡೆದಿದೆ. ವಾಯುವಿಹಾರಕ್ಕೆ ಬಂದಿದ್ದ ಅಖಿಲಾ ಎಂಬುವವರ 60 ಗ್ರಾಂ ಚಿನ್ನದ ಸರವನ್ನು ಕದ್ದು ಕಳ್ಳ ಪರಾರಿಯಾಗಿದ್ದಾನೆ. ಸರಗಳ್ಳನನ್ನು ಸ್ಥಳೀಯರು ಸುತ್ತುವರಿದರು ಕಳ್ಳ ತಕ್ಷಣ ಬೈಕ್ ಹಾಗೂ ಕೃತ್ಯಕ್ಕ ಬಳಸಿದ್ದ ಚಾಕು ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಕೆಂಗನಹಳ್ಳಿ ಗ್ರಾಮದಲ್ಲಿ ಹಾಡುಹಗಲೇ ಮನೆಯ ಬಾಗಿಲನ್ನು ಮುರಿದು ಕಳ್ಳತನ ಎಸಗಿದ್ದಾರೆ. ಚನ್ನಬಸವ ಅವರಿಗೆ ಸೇರಿದ ಮನೆಯಲ್ಲಿ 20 ಗ್ರಾಂ ಚಿನ್ನಾಭರಣ, 10 ಸಾವಿರ ನಗದು ಸೇರಿದಂತೆ ಮನೆಯಲ್ಲಿದ್ದ ಟಿವಿ ಕಳವು ಆಗಿದೆ. ಹಾಡುಹಗಲೇ ಕಳ್ಳತನಕ್ಕೆ ಗ್ರಾಮಸ್ಥರು ಪೋಲಿಸರ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ

ಲಸಿಕೆ ಪಡೆದಿದ್ದರೂ ಸೋಂಕು ಬಂತು; ದೊಡ್ಡ ಚರ್ಚೆ ಹುಟ್ಟುಹಾಕಿತು ವೈದ್ಯರು ಹೇಳಿದ ಧೈರ್ಯದ ಮಾತು

ಗೋಕರ್ಣಕ್ಕೆ ಕೈಹಾಕಿದ್ದ ರಾಮಚಂದ್ರಾಪುರ ಮಠಕ್ಕೆ ಮುಖಭಂಗ; ದೇಗುಲವನ್ನು ಮುಜರಾಯಿ ಇಲಾಖೆಗೆ ಹಿಂದಿರುಗಿಸಲು ಸುಪ್ರೀಂ ಆದೇಶ

(CCB Police arrested three people from West Bengal who were involved in prostitution At bengaluru)