ಟ್ಯಾಂಗೋ ಆ್ಯಪ್ ಬಳಸುವವರೇ ಎಚ್ಚರ: ಮಹಿಳೆಯ ನಗ್ನ ಫೋಟೋ, ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್

ಆರೋಪಿ ಟ್ಯಾಂಗೋ (tango) ಎಂಬ ಆ್ಯಪ್ ನಲ್ಲಿದ್ದ. ಇದರಲ್ಲಿ ಸಾಕಷ್ಟು ಮಹಿಳೆಯರು ಸಹ ಇದ್ದಾರೆ. ಮಹಿಳೆಯರ ನಗ್ನ ಹಾಗು ಅರೆ ನಗ್ನ ಫೋಟೊ ಗಳನ್ನು ಸ್ರೀನ್ ಶಾಟ್ ಹಾಗು ಸ್ರೀನ್ ರೆಕಾರ್ಡ್ ಮಾಡುತಿದ್ದ.

ಟ್ಯಾಂಗೋ ಆ್ಯಪ್ ಬಳಸುವವರೇ ಎಚ್ಚರ: ಮಹಿಳೆಯ ನಗ್ನ ಫೋಟೋ, ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Oct 25, 2022 | 10:16 AM

ಬೆಂಗಳೂರು: ಮಹಿಳೆಯ ನಗ್ನ ಫೋಟೋ ಇಟ್ಟುಕೊಂಡು 30 ಲಕ್ಷ ಹಣಕ್ಕೆ ಬ್ಲ್ಯಾಕ್​ಮೇಲ್(Blackmailing) ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಈಶಾನ್ಯ CEN ಪೊಲೀಸರು ಬಂಧಿಸಿದ್ದಾರೆ(CEN Police). ಮಹಾಂತೇಶ್​ ಬಂಧಿತ ಆರೋಪಿ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್​ ಮಾಡುವ ಬೆದರಿಕೆ ಹಾಕಿದ್ದ. ಮಹಿಳೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಆರೋಪಿ ಮಹಾಂತೇಶ್, ಮಹಿಳೆಯ ನಗ್ನ ಫೋಟೋ ಇಟ್ಟುಕೊಂಡು ಆಕೆಗೆ ಹಣ ನೀಡುವಂತೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಹಣ ನೀಡದಿದ್ದರೆ ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ. ಹೊಸ ನಂಬರ್ ಖರೀದಿನಿ ಮಹಿಳೆಗೆ ವಾಟ್ಸಪ್ ಮೆಸೇಜ್ ಮಾಡಿ 30 ಲಕ್ಷ ಹಣಕ್ಕೆ ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ಈ ಮೆಸೇಜ್​ಗೆ ತಲೆ ಕೆಡಿಸಿಕೊಳ್ಳದೆ ಇದ್ದಾಗ ಮಹಿಳೆಯ ಕೆಲವು ಫೋಟೋಗಳನ್ನು ವಾಟ್ಸಪ್​ಗೆ ಕಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿಯ ಮೊದಲ ದಿನವೇ 7 ಮಂದಿಗೆ ಗಾಯ: ಪಟಾಕಿ ಹೊಡೆಯುವಾಗ ಇರಲಿ ಎಚ್ಚರ

ಇದು ಜಸ್ಟ್ ಸ್ಯಾಂಪಲ್ಸ್ ಅಷ್ಟೆ ಇನ್ನು ಬೇಕಾದಷ್ಟು ವಿಡಿಯೋ ಇದೆ ಎಂದು ಬೆದರಿಕೆ ಹಾಕಿದ್ದಾರೆ. ಬೆದರಿಕೆ ಬಳಿಕ ಮಹಿಳೆ ಈಶಾನ್ಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಕೇಸ್ ದಾಖಲು ಮಾಡಿದ್ದ ಪೊಲೀಸರು ತನಿಖೆ ವೇಳೆ ಭುವನೇಶ್ವರಿ ನಗರದ ಮಹಂತೇಶ್ ಎಂಬಾತನನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ. ಬ್ಲ್ಯಾಕ್​ಮೇಲ್ ಮಾಡಲು ಬಳಸಿದ್ದ ಫೋಟೋ ಹಾಗು ವಿಡಿಯೋ ಇದ್ದ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ತನಿಖೆ ವೇಳೆ ಪರಿಚಯ ಇಲ್ಲದ ಮಹಿಳೆ ಫೋಟೋ ಹೇಗೆ ಸಿಕ್ಕಿತು ಎಂದು ಪೊಲೀಸರ ವಿಚಾರಣೆ ನಡೆಸಿದಾಗ ಸಾಮಾಜಿಕ ಜಾಲತಾಣದಿಂದಲೇ ಮಹಿಳೆಯ ಫೋಟೋ ವಿಡಿಯೋ ಪಡೆದಿದ್ದಾಗಿ ಆರೋಪಿ ಉತ್ತರಿಸಿದ್ದಾನೆ. ಆರೋಪಿ ಟ್ಯಾಂಗೋ (tango) ಎಂಬ ಆ್ಯಪ್ ನಲ್ಲಿದ್ದ. ಇದರಲ್ಲಿ ಸಾಕಷ್ಟು ಮಹಿಳೆಯರು ಸಹ ಇದ್ದಾರೆ. ಈ ಆಪ್ ಮೂಲಕ ಅಪರಿಚಿತರ ಜೊತೆಗೆ ವಿಡಿಯೋ ಚಾಟ್ ಮಾಡಬಹುದಾಗಿದೆ. ಹೀಗಾಗಿ ಮಹಿಳೆಯರ ನಗ್ನ ಹಾಗು ಅರೆ ನಗ್ನ ಫೋಟೊ ಗಳನ್ನು ಸ್ರೀನ್ ಶಾಟ್ ಹಾಗು ಸ್ರೀನ್ ರೆಕಾರ್ಡ್ ಮಾಡುತಿದ್ದ ಆರೋಪಿ ಬಳಿಕ ಆ ಮಹಿಳೆ ಮೊಬೈಲ್ ನಂಬರ್ ಹುಡುಕಿ ಮಹಿಳೆಗೆ ಬ್ಲಾಕ್ ಮೇಲ್ ಮಾಡ್ತಿದ್ದ. ಸದ್ಯ ಅರೋಪಿ ಅರೆಸ್ಟ್ ಮಾಡಿ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:16 am, Tue, 25 October 22

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ