ಕಗ್ಗಂಟಾಗಿಯೇ ಉಳಿದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಆಯ್ಕೆ; ನಾಮ ಪತ್ರ ಸಲ್ಲಿಸಲು ಮೂರೇ ದಿನ ಬಾಕಿ

ರಾಜ್ಯಸಭೆಗೆ ನಾಮ ಪತ್ರ ಸಲ್ಲಿಸಲು ಇನ್ನು ಮೂರೇ ದಿನ ಬಾಕಿ ಇದೆ. ಇದುವರೆಗೂ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ. ಕರ್ನಾಟಕದಿಂದ ಬಿ ಎಲ್ ಶಂಕರ್ ಹಾಗೂ ನಾಸೀರ್ ಹುಸೇನ್ ಹೆಸರು ಮುಂಚೂಣಿಯಲ್ಲಿದೆ. ಒಕ್ಕಲಿಗ ಕೋಟಾದಡಿ ಬಿ ಎಲ್ ಶಂಕರ್ ಹಾಗೂ ಹಾಲಿ ಸದಸ್ಯ ಜಿ ಸಿ ಚಂದ್ರಶೇಖರ್​ಗೆ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ.

ಕಗ್ಗಂಟಾಗಿಯೇ ಉಳಿದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಆಯ್ಕೆ; ನಾಮ ಪತ್ರ ಸಲ್ಲಿಸಲು ಮೂರೇ ದಿನ ಬಾಕಿ
ಸಾಂದರ್ಭಿಕ ಚಿತ್ರ
Edited By: ಆಯೇಷಾ ಬಾನು

Updated on: Feb 13, 2024 | 8:30 AM

ಬೆಂಗಳೂರು, ಫೆ.13: ರಾಜ್ಯಸಭೆ ಚುನಾವಣೆಗೆ (Rajya Sabha Election) ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಕಾಂಗ್ರೆಸ್​ಗೆ (Congress) ಕಗ್ಗಂಟಾಗಿದೆ. ರಾಜ್ಯಸಭೆಗೆ ನಾಮ ಪತ್ರ ಸಲ್ಲಿಸಲು ಇನ್ನು ಮೂರೇ ದಿನ ಬಾಕಿ ಇದೆ. ಇದುವರೆಗೂ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ. ರಾಜ್ಯ ನಾಯಕರ ಆಯ್ಕೆಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೈಕಮಾಂಡ್ ನಿಂದಲೇ ಹೊರ ರಾಜ್ಯದ ಒಂದು ಅಭ್ಯರ್ಥಿಯ ಫೈನಲ್ ಆಗುವ ಸಾಧ್ಯತೆ ಇದೆ. ಅಭಿಷೇಕ್ ಮನು ಸಿಂಘ್ವಿ ಅಥವಾ ರಘುರಾಂ ರಾಜನ್ ರಾಜ್ಯಸಭೆ ಅಭ್ಯರ್ಥಿ ಆಗುವ ಸಾಧ್ಯತೆ ಇದೆ.

ಕರ್ನಾಟಕದಿಂದ ಬಿ ಎಲ್ ಶಂಕರ್ ಹಾಗೂ ನಾಸೀರ್ ಹುಸೇನ್ ಹೆಸರು ಮುಂಚೂಣಿಯಲ್ಲಿದೆ. ಒಕ್ಕಲಿಗ ಕೋಟಾದಡಿ ಬಿ ಎಲ್ ಶಂಕರ್ ಹಾಗೂ ಹಾಲಿ ಸದಸ್ಯ ಜಿ ಸಿ ಚಂದ್ರಶೇಖರ್​ಗೆ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ. ಜಿ ಸಿ ಚಂದ್ರಶೇಖರ್ ಗೆ ಡಿಸಿಎಂ ಡಿ ಕೆ ಶಿವಕುಮಾರ್ ಬೆಂಬಲ ಸೂಚಿಸಿದ್ದಾರೆ. ನಾಸೀರ್ ಹುಸೇನ್ ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬ್ಯಾಟ್ ಬೀಸುತ್ತಿದ್ದಾರೆ. ಬಿ.ಎಲ್. ಶಂಕರ್ ಅತ್ತ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಫೆಬ್ರವರಿ 14ರಂದು ರಾಜ್ಯದಲ್ಲೇ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಹೆಸರು ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಮಂಡ್ಯ ಕಣದಿಂದ ಹಿಂದೆ ಸರಿದ ನಿಖಿಲ್, ಯಾರಿಗೆ ಸಿಗಲಿದೆ ಜೆಡಿಎಸ್ ಟಿಕೆಟ್, ಮಹತ್ವದ ಸಭೆ

ಇದನ್ನೂ ಓದಿ: ಗದಗ: ಮರಳು ದಂಧೆಗೆ ಕಾಂಗ್ರೆಸ್​​ ಮುಖಂಡ ಡಾ. ಶಶಿಧರ್ ಹಟ್ಟಿ ಬಲಿ

ಫೆ.15ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೂರು ಸ್ಥಾನ ಭರ್ತಿ ಮಾಡಿಕೊಳ್ಳಲು ಕಾಂಗ್ರೆಸ್​ಗೆ ಅವಕಾಶವಿದೆ. ಪ್ರಸ್ತುತ 20ಕ್ಕಿಂತ ಹೆಚ್ಚು ಆಕಾಂಕ್ಷಿಗಳು ಮುಂದೆ ಬಂದಿದ್ದು, ವಿವಿಧ ಕೋಟಾದಡಿ ಬೇಡಿಕೆ ಮುಂದಿಟ್ಟಿದ್ದಾರೆ. ಮಠ ಮಾನ್ಯಗಳಿಂದ, ಉದ್ಯಮಿಗಳಿಂದ ಒತ್ತಡ ಹೇರಲಾರಂಭಿಸಿದ್ದಾರೆ. ಮೂರು ಸ್ಥಾನಗಳ ಪೈಕಿ ಒಂದು ಸ್ಥಾನ ಅಲ್ಪಸಂಖ್ಯಾತರಿಗೆ, ಒಂದು ಒಕ್ಕಲಿಗ ಮತ್ತೊಂದು ಪರಿಶಿಷ್ಟರಿಗೆ ಕೊಡಬೇಕೆಂದು ಚರ್ಚೆಯಾಗಿದೆ. ಅಲ್ಪಸಂಖ್ಯಾತ ಕೋಟಾದಿಂದ ಹಾಲಿ ಸದಸ್ಯ ನಾಸೀರ್ ಹುಸೇನ್ ಪುನರಾಯ್ಕೆ ಬಯಸಲಿದ್ದು, ಹೈಕಮಾಂಡ್ ಕಡೆಯಿಂದ ಭರವಸೆಯೂ ಸಿಕ್ಕಿದೆ. ಆದರೆ, ಕೊನೆ ಹಂತದ ಬದಲಾವಣೆ ಹೊರತುಪಡಿಸಿ ನಾಸೀರ್ ಪುನಃ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us