ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರು ಬಳಸಿ ವಂಚನೆ; ಇಬ್ಬರ ವಿರುದ್ಧ ದೂರು ದಾಖಲು

ಇನ್ಫೋಸಿಸ್ ಮುಖ್ಯಸ್ಥೆ ಡಾ ಸುಧಾಮೂರ್ತಿಯವರ ಹೆಸರು ಬಳಸಿಕೊಂಡು ವಂಚನೆ ಮಾಡಲಾಗುತ್ತಿದ್ದು ಸುಧಾಮೂರ್ತಿಯವರ PA ಮಮತ ಸಂಜಯ್ ಎಂಬುವವರು ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೃತಿ ಹಾಗೂ ಲಾವಣ್ಯ ಎಂಬುವರ ವಿರುದ್ದ ದೂರು ದಾಖಲಾಗಿದೆ.

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಹೆಸರು ಬಳಸಿ ವಂಚನೆ; ಇಬ್ಬರ ವಿರುದ್ಧ ದೂರು ದಾಖಲು
ಡಾ ಸುಧಾಮೂರ್ತಿ
Follow us
Shivaprasad
| Updated By: ಆಯೇಷಾ ಬಾನು

Updated on:Sep 24, 2023 | 7:45 AM

ಬೆಂಗಳೂರು, ಸೆ.24: ಬಹು ಕೋಟಿ ಒಡತಿ, ಸರಳ, ಸಜ್ಜನ, ಪರೋಪಕಾರಿ ಗುಣವನ್ನು ಹೊಂದಿರುವ ಇನ್ಫೋಸಿಸ್ ಮುಖ್ಯಸ್ಥೆ ಡಾ ಸುಧಾಮೂರ್ತಿಯವರ (Infosys Sudha Murty) ಹೆಸರು ಬಳಸಿಕೊಂಡು ವಂಚನೆ ಮಾಡಲಾಗುತ್ತಿದ್ದು ಸುಧಾಮೂರ್ತಿಯವರ PA ಮಮತ ಸಂಜಯ್ ಎಂಬುವವರು ಈ ಬಗ್ಗೆ ಜಯನಗರ ಪೊಲೀಸ್ (Jayanagar Police Station) ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೃತಿ ಹಾಗೂ ಲಾವಣ್ಯ ಎಂಬುವರ ವಿರುದ್ದ ದೂರು ದಾಖಲಾಗಿದೆ. ಆರೋಪಿಗಳು ಸುಧಾಮೂರ್ತಿಯವರ ಪೋಟೋಗಳನ್ನ ಬಳಸಿ ಜಾಹಿರಾತು ನೀಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಟಿಕೆಟ್ ಮಾರಾಟ ಮಾಡಿ ವಂಚಿಸುತ್ತಿದ್ದರು. ಸದ್ಯ ವಂಚನೆ ಬೆಳಕಿಗೆ ಬಂದಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

KKNC (Kannada koota of Northen California) ದಿಂದ 50 ನೇ ವರ್ಷದ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರಿಗೆ ಆಹ್ವಾನಿಸಲಾಗಿತ್ತು. ಆದ್ರೆ ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲವೆಂದು ಇಮೇಲ್ ಮೂಲಕ Dr.ಸುಧಾಮೂರ್ತಿ ಅವರು ಸಂದೇಶ‌ ಕಳಿಸಿದ್ದರು. ಈ ಮಧ್ಯೆ ಕಿಡಿಗೇಡಿಗಳು ಸಮಯ ಬಳಿಸಿಕೊಂಡು ಸುಧಾಮೂರ್ತಿಯವರ ಪೋಟೋಗಳನ್ನ ಬಳಸಿ KKNC ಕಾರ್ಯಕ್ರಮಕ್ಕೆ ಬರುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ನೀಡಿ ಕಾರ್ಯಕ್ರಮಕ್ಕೆ ಟಿಕೆಟ್ ಮಾರಾಟ ಮಾಡಿದ್ದಾರೆ. ಮೂರ್ತಿ ಟ್ರಸ್ಟ್​ನ ಕಚೇರಿ ಎಂದು ಹೆಸರು ಸೃಷ್ಠಿಸಿ ಸುಧಾಮೂರ್ತಿಯವರ ಅಸಿಸ್ಟೆಂಟ್ ಎಂದು ವಂಚಿಸಿದ್ದಾರೆ. ಲಾವಣ್ಯ ಎಂಬುವರು ಕಾರ್ಯಕ್ರಮಕ್ಕೆ ಸುಧಾಮೂರ್ತಿ ಮೇಡಂ ಬರೋದಾಗಿ ಹೇಳಿ ವಂಚನೆ‌‌ ಮಾಡಿದ್ದಾರೆ. ಈ ಬಗ್ಗೆ KKNC ಕಾರ್ಯಕ್ರಮ ಆಯೋಜನೆ ಮಾಡುವವರಿಗೆ ಕರೆ ಮಾಡಿ ವಿಚಾರಿಸಿದಾಗ ಸುಧಾಮೂರ್ತಿಯವರ ಅಸಿಸ್ಟೆಂಟ್ ಕರೆ ಮಾಡಿ ಸುಧಾಮೂರ್ತಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

ಇದನ್ನೂ ಓದಿ: ಮಂತ್ರಾಲಯ ರಾಯರ ದರ್ಶನ ಪಡೆದ ರಿಷಿ ಸುನಕ್ ಪೋಷಕರು, ಬೀಗರಿಗೆ ಸುಧಾಮೂರ್ತಿ ಸಾಥ್

ಇಷ್ಟೇ ಅಲ್ಲದೆ ಹೀಗೆ ಅಮೆರಿಕಾದಲ್ಲಿ meet and greet with ಡಾ.ಸುಧಾಮೂರ್ತಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ. ಅಮೆರಿಕಾದ sewa milpitas ಎಂಬಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ. ಪ್ರತಿ ಟಿಕೆಟ್​ಗೆ 40 ಡಾಲರ್ ಪಡೆದಿರುವ ಆರೋಪ ಕೇಳಿ ಬಂದಿದೆ. ಈ ರೀತಿ ಸುಧಾಮೂರ್ತಿಯವರಿಗೆ ತಿಳಿಯದೆಯೇ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಬಗ್ಗೆ ಅನುಮಾನ ಬಂದು ಕಂಪನಿಯಲ್ಲಿ ಪ್ರಶ್ನಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಸದ್ಯ ಜಯನಗರ ಠಾಣೆಯಲ್ಲಿ ಐಟಿ ಆಕ್ಟ್ 66c, 66d ಹಾಗೂ ಐಪಿಸಿ 419, 420 ಕಾಯ್ದೆಯಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:37 am, Sun, 24 September 23