ಬೆಂಗಳೂರು: ಗ್ಯಾಸ್ ಪೈಪ್‌ಲೈನ್‌ಗೆ ರಸ್ತೆ ಅಗೆಯುವುದಕ್ಕೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಟ್ರಾಫಿಕ್ ಇನ್ಸ್‌ಪೆಕ್ಟರ್ ಲಂಚ ಸ್ವೀಕರಿಸುತ್ತಿದ್ದಾಗಲೆ ಎಸಿಬಿ (Anti Corruption Bureau -ACB) ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಚಿಕ್ಕಜಾಲ ಸಂಚಾರಿ ಇನ್ಸ್‌ಪೆಕ್ಟರ್ ಹಂಸವೇಣಿ (Chikkajala Traffic Inspector Hamsaveni) 20 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಸರ್ಕಾರಿ ಸ್ವಾಮ್ಯದ GAIL ಕಂಪನಿ ಅಧಿಕಾರಿಗಳಿಂದ (GAIL authorities) ಹಂಸವೇಣಿ ಲಂಚ ಸ್ವೀಕರಿಸ್ತಿದ್ದರು. ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ಯಾಸ್ ಪೈಪ್ ಲೈನ್ ಗೆ ರಸ್ತೆ ಬದಿಯಲ್ಲಿ ಕೆಲಸ ಮಾಡಲು ಯೋಜನೆ ಮಂಜೂರಾಗಿತ್ತು. ಈ ವೇಳೆ ರಸ್ತೆ ಬದಿ ಅಗೆಯಲು GAIL ಕಂಪನಿ ಅಧಿಕಾರಿಗಳು/ ಸಿಬ್ಬಂದಿ ಮುಂದಾಗಿದ್ದರು. ಆದರೆ ರಸ್ತೆ ಬದಿ ಅಗೆದು ಕೆಲಸ ಮಾಡಲು ಸಂಚಾರಿ ಪೊಲೀಸರ ಅನುಮತಿ ಸಹ ಪಡೆಯಬೇಕಿತ್ತು. ಅದಕ್ಕೆ ಅನುಮತಿ ನೀಡಲು ಇಪ್ಪತ್ತು ಸಾವಿರ ಲಂಚ ಕೇಳಿದ್ದರು ಮಹಿಳಾ ಇನ್ಸ್ಪೆಕ್ಟರ್ ಹಂಸವೇಣಿ. ಇದರಿಂದ ರೋಸಿದ GAIL ಕಂಪನಿ ಅಧಿಕಾರಿಗಳು ಪೊಲೀಸರ ಲಂಚದ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಇಂದು ಬುಧವಾರ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಸಂಚಾರಿ ಇನ್ಸ್ ಪೆಕ್ಟರ್ ಹಂಸವೇಣಿ ಅವರನ್ನು ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಅಗಿ ಲಾಕ್ ಮಾಡಿದರು.
ಭೂ ಪರಿಹಾರ ನೀಡಲು ಶೇ 1 ರಷ್ಟು ಲಂಚ: ಭೂಸ್ವಾಧೀನ ಇಲಾಖೆಯ ವ್ಯವಸ್ಥಾಪಕ ಅರೆಸ್ಟ್
ಕಲಬುರಗಿ: ಕಲಬುರಗಿ ಭೂಸ್ವಾಧೀನ ಇಲಾಖೆ ಕಚೇರಿಯ SLAO ವ್ಯವಸ್ಥಾಪಕ ಶರಣ ಬಸಪ್ಪ ಜಾಲಹಳ್ಳಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಭೂಸ್ವಾಧೀನದ ಪರಿಹಾರ ಚೆಕ್ ನೀಡಲು 14,850 ರೂ. ಲಂಚ ಕೇಳಿದ್ದರು. 14,85,000 ರೂ. ಚೆಕ್ ನೀಡಲು ಸುರಪೂರದ ರೈತ ರಾಜಾ ನಾಯಕ ಎಂಬುವವರಿಂದ 14,850 ರೂ. ಲಂಚ (ಶೇ 1 ರಷ್ಟು ಲಂಚ) ಸ್ವೀಕರಿಸುವಾಗ ಎಸಿಬಿ ನಡೆಸಿದ ಮಿಂಚಿನ ಕಾರ್ಯಾಚರಣೆ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವ್ಯವಸ್ಥಾಪಕ ಶರಣಸಪ್ಪ ಜಾಲಹಳ್ಳಿ ಅರೆಸ್ಟ್ ಆಗಿದ್ದಾರೆ.
ಹೊಸದುರ್ಗ: ಲಂಚ ಸ್ವೀಕರಿಸುತ್ತಿದ್ದ ಉಪ ನೋಂದಣಾಧಿಕಾರಿ ಎಸಿಬಿ ಬಲೆಗೆ
ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಕಚೇರಿಯಲ್ಲಿ 4 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಉಪ ನೋಂದಣಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಆಸ್ತಿ ಮಾರ್ಟ್ಗೇಜ್ ವಿಚಾರವಾಗಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗುರುಪ್ರಸಾದ್, ಲಂಚ ಸ್ವೀಕಾರ ವೇಳೆ ಎಸಿಬಿ ಇನ್ಸ್ಪೆಕ್ಟರ್ ಪ್ರವೀಣ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದನ್ನೂ ಓದಿ:
ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ವಿಚಾರಣೆಗೆ ಐವರು ಅಭ್ಯರ್ಥಿಗಳು ಗೈರು
ಇದನ್ನೂ ಓದಿ:
7 ತಿಂಗಳ ಹಿಂದೆ ಯುವತಿಯೊಂದಿಗೆ ಓಡಿಹೋಗಿದ್ದ ವಿವಾಹಿತನಿಗೆ 55,000 ರೂ. ದಂಡ; ಕಾರಣವೇನು ಗೊತ್ತಾ?
Published On - 3:36 pm, Wed, 20 April 22