AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ ಅರೆಸ್ಟ್

ಸುಶೀಲ್ ಮಂತ್ರಿ ವಿರುದ್ಧ ಮನಿ ಲ್ಯಾಂಡರಿಂಗ್ ಆರೋಪ ಹಿನ್ನೆಲೆ ಜೂ.25ರಂದು ಸುಶೀಲ್ ಬಂಧಿಸಿ ಇಡಿ ವಿಚಾರಣೆ ನಡೆಸಿತ್ತು. ಬಳಿಕ ಜಾಮೀನಿನ ಮೇಲೆ ಸುಶೀಲ್ ಹೊರಬಂದಿದ್ದರು. ಈಗ ಮತ್ತೆ ಸಿಐಡಿ ತನಿಖಾ ತಂಡ ನಿನ್ನೆ ರಾತ್ರಿ ಸುಶೀಲ್ ಅವರನ್ನು ಅರೆಸ್ಟ್ ಮಾಡಿದೆ.

ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ  ಅರೆಸ್ಟ್
ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ
TV9 Web
| Updated By: ಆಯೇಷಾ ಬಾನು|

Updated on:Sep 10, 2022 | 5:22 PM

Share

ಬೆಂಗಳೂರು: ಮಂತ್ರಿ ಡೆವಲಪರ್ಸ್ ನಿರ್ದೇಶಕ, ಉದ್ಯಮಿ ಸುಶೀಲ್ ಮಂತ್ರಿ(Mantri Developers Director Sushil Mantri) ಅವರನ್ನು ಸಿಐಡಿ(CID) ವಿಶೇಷ ತಂಡ ಬಂಧಿಸಿದೆ. ಸುಶೀಲ್ ಮಂತ್ರಿ ವಿರುದ್ಧ ಮನಿ ಲ್ಯಾಂಡರಿಂಗ್ ಆರೋಪ ಹಿನ್ನೆಲೆ ಜೂ.25ರಂದು ಸುಶೀಲ್ ಬಂಧಿಸಿ ಇಡಿ ವಿಚಾರಣೆ ನಡೆಸಿತ್ತು. ಬಳಿಕ ಜಾಮೀನಿನ ಮೇಲೆ ಸುಶೀಲ್ ಹೊರಬಂದಿದ್ದರು. ಈಗ ಮತ್ತೆ ಸಿಐಡಿ ತನಿಖಾ ತಂಡ ನಿನ್ನೆ ರಾತ್ರಿ ಸುಶೀಲ್ ಅವರನ್ನು ಅರೆಸ್ಟ್ ಮಾಡಿದೆ.

ಸಿಐಡಿ ಎಸ್ಪಿ ರವಿ ಡಿ ಚೆನ್ನಣ್ಣನವರ್ ಟೀಂ ನಿಂದ ಮಂತ್ರಿ ಡೆವಲಪರ್ಸ್ ನಿರ್ದೇಶಕ ಸುಶೀಲ್ ಮಂತ್ರಿ ಅರೆಸ್ಟ್ ಆಗಿದ್ದಾರೆ ಎಂದು ಸಿಐಡಿ ತನಿಖಾ ತಂಡದಿಂದ ಮಾಹಿತಿ ಲಭ್ಯವಾಗಿದೆ. ಸುಶೀಲ್ ವಿರುದ್ಧ ತನ್ನ ಗ್ರಾಹಕರಿಗೆ ವಂಚನೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಜೊತೆಗೆ ಗ್ರಾಹಕರಿಂದ ಖರೀದಿ ಹಣ ದುರ್ಬಳಕೆ ಆರೋಪ ಸಹ ಇದೆ. ಸುಶೀಲ್ ಮಂತ್ರಿ ಮೇಲೆ ಮನಿ ಲ್ಯಾಂಡರಿಂಗ್ ಆರೋಪ ಹಿನ್ನೆಲೆ ಕಳೆದ ಜೂನ್ 25 ರಂದು ಇಡಿ ಅರೆಸ್ಟ್ ಮಾಡಿ ತನಿಖೆ ಮಾಡಿತ್ತು. ಆದಾದ ಬಳಿಕ ಜಾಮೀನಿನ ಮೇಲೆ ಸುಶೀಲ್ ಹೊರ ಬಂದಿದ್ದರು. ಆದರಂತೆ ನಿನ್ನೆ ರಾತ್ರಿ ಮತ್ತೆ ಅರೆಸ್ಟ್ ಆಗಿದ್ದಾರೆ. ಇದನ್ನೂ ಓದಿ: ಮಂತ್ರಿಗ್ರೂಪ್ಸ್‌ನ ಸಿಎಂಡಿ ಸುಶೀಲ್ ಪಾಂಡುರಂಗ ಬಂಧನದ ಅಸಲಿ ಕಾರಣ ಬಯಲು; ಅಕ್ರಮದ ಗೂಡಿನ ಆರೋಪದಲ್ಲಿ ವಂಚನೆಯ ಮೊತ್ತವೆಷ್ಟು ಗೊತ್ತಾ?

ಉದ್ಯಮಿ ಸುಶೀಲ್ ಮಂತ್ರಿಗೆ ಸಿಐಡಿ ಪೊಲೀಸರಿಂದ ಗ್ರಿಲ್

ಸಾವಿರಾರು ಗ್ರಾಹಕರಿಂದ 1000 ಕೋಟಿ ಸಂಗ್ರಹಿಸಿದ್ದ ಸುಶೀಲ್, 7 ರಿಂದ 10 ವರ್ಷಗಳಲ್ಲಿ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಸುಳ್ಳು ಸುಳ್ಳಿ ಬ್ರೋಚರ್ಸ್ ತೋರಿಸಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಲೇಕ್ಟ್ ಮಾಡಿಕೊಂಡಿದ್ದ ಹಣವನ್ನು ದುರ್ಬಳಕೆ ಮಾಡಿದ್ರಂತೆ. ಈ ಬಗ್ಗೆ 2022 ರಲ್ಲೇ ಸಾವಿರಾರು ಗ್ರಾಹಕರು ದೂರು ನೀಡಿದ್ದರು. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕನಕಪುರ ರಸ್ತೆಯ ಕೆಲ ಪ್ರಾಜೆಕ್ಟ್ ಗಳಲ್ಲಿ ವಂಚನೆ ಮಾಡಿದ್ದಾರಂತೆ. ಸದ್ಯ ಸುಶೀಲ್​ನನ್ನು ಅರೆಸ್ಟ್ ಮಾಡಿದ್ದು ಪ್ಯಾಲೇಸ್ ರಸ್ತೆಯ ಕಾರ್ಲ್ ಟನ್ ಭವನ ಸಿಐಡಿ‌ ಕಚೇರಿಯಲ್ಲಿ ಸುಶೀಲ್ ಮಂತ್ರಿ ವಿಚಾರಣೆ ನಡೆಸಲಾಗುತ್ತಿದೆ. ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ನೇತೃತ್ವದ ತಂಡದಿಂದ ವಿಚಾರಣೆ ನಡೆಯುತ್ತಿದೆ. ದೂರುದಾರರನ್ನು ಕರೆಸಿ ದಾಖಲೆಗಳ ಸಂಗ್ರಹದಲ್ಲಿ ಸಿಐಡಿ ತೊಡಗಿದೆ.

ಉದ್ಯಮಿ ಸುಶೀಲ್ ಮಂತ್ರಿ ಪುತ್ರ ಪ್ರತೀಕ್ ಬಂಧಿಸಿದ ಸಿಐಡಿ

ಇನ್ನು ಮತ್ತೊಂದು ಕಡೆ ವಂಚನೆ ಕೇಸ್​ನಲ್ಲಿ ಉದ್ಯಮಿ ಸುಶೀಲ್ ಮಂತ್ರಿ ಪುತ್ರ ಪ್ರತೀಕ್ ನನ್ನು ಸಿಐಡಿ ಬಂಧಿಸಿದೆ. ಸೋಮವಾರ ಸುಶೀಲ್​ರನ್ನು ಕಸ್ಟಡಿಗೆ ಪಡೆಯಲು ತಯಾರಿ ನಡೆದಿದೆ. ನಿನ್ನೆ ಸಿಐಡಿ ಅಧಿಕಾರಿಗಳು ಸುಶೀಲ್​ ನನ್ನು ಬಂಧಿಸಿದ್ದಾರೆ. ಬಳಿಕ 1ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಿದ್ದು ಸೆ.12ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.

ಇನ್ನು ಈ ಬಗ್ಗೆ ಸಿಐಡಿ ಕಚೇರಿ ಕರ್ನಾಟಕ ಮನೆ ಗ್ರಾಹಕರ ವೇದಿಕೆ ಧನಂಜಯ್ ಪದ್ಮನಾಭ ಸಂಚಾಲಕ ಮಾತನಾಡಿದ್ದು, ಮಂತ್ರಿ ಡೆವಲಪರ್ಸ್ ಕಂಪೆನಿಯಿಂದ ಮಂತ್ರಿ ಸೆರೆನಟಿ, ಮಂತ್ರಿ ವೆಬ್ ಸಿಟಿ ಪ್ರಾಜೆಕ್ಟ್ ಗಳಲ್ಲಿ ವಂಚನೆ ಆಗಿದೆ. ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದ ಪ್ರಾಜೆಕ್ಟ್ ಗಳಲ್ಲಿ ವಂಚನೆಯಾಗಿದೆ. ಸಾಕ್ಣ್ಯಾಧಾರ, ದಾಖಲೆಗಳ ಸಂಗ್ರಹಕ್ಕೆ ಸಿಐಡಿ ಅಧಿಕಾರಿಗಳು ಕರೆಸಿದ್ದರು. 2013ರಲ್ಲಿ ಹಣ ಪಡೆದುಕೊಂಡು 2016 ಫ್ಲಾಟ್ ನೀಡುವುದಾಗಿ ಹೇಳಿದ್ರು. 2020 ರಲ್ಲಿ ಸುಬ್ರಮಣ್ಯಪುರ, ಹೆಣ್ಣೂರು ಠಾಣೆಗಳಲ್ಲಿ ಕೇಸ್ ದಾಖಲಿಸಿದ್ರು ಯಾವುದೇ ಕ್ರಮ ಆಗಿರಲಿಲ್ಲ. ನಮಗೆ ಮನೆ ಸಿಕ್ಕಿಲ್ಲ, ನಾವು ಹೂಡಿಕೆದಾರರಲ್ಲ, ಮನೆ ಗ್ರಾಹಕರು, 70-80 ಲಕ್ಷ ಹಣ ಪಾವತಿಸಿದ್ದೇವೆ. ರೇರಾ ಕೆಲಸವನ್ನು ಮಾಡದೆ ಇರುವುದರಿಂದ ನಮಗೆ ಈ ಪರಿಸ್ಥಿತಿ. ಕರ್ನಾಟಕದಲ್ಲಿ ಮಂತ್ರಿ ಡೆವಲಪರ್ಸ್ UDS, (ಮನೆಯಲ್ಲಿ ಭಾಗ) ಸೇಲ್ ಡೀಡ್ ನಲ್ಲಿ ನೀಡಬೇಕು. ಅನ್ ಲೈನ್ ಮೂಲಕ ಫ್ಲಾಟ್ ಬುಕ್ ಮಾಡಿದ್ವಿ, ಅಂಡರ್ ಕನ್ಸಟ್ರಕ್ಷನ್ ಅಂಪಾರ್ಟ್ ಮೆಂಟ್ ಹೂಡಿಕೆ ಮಾಡಿದ್ದೇವೆ. 3 ಸಾವಿರ ಫ್ಲಾಟ್ ಗಳಲ್ಲಿ ವೆಬ್ ಸಿಟಿ, ಮಂತ್ರಿ ಸಿಟಿ, ಸೆರೆನಿಟಿ ಫ್ಲಾಟ್ ಗಳಲ್ಲಿ ವಂಚನೆ ಆಗಿದೆ. ನಮಗೆ ನ್ಯಾಯಾ ಸಿಗುವ ವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದರು.

ವಂಚನೆಯ ಮೊತ್ತವೆಷ್ಟು ಗೊತ್ತಾ?

ಇಡಿ ಸ್ಥಳೀಯ ಠಾಣೆಯಿಂದ ಪಡೆದ ಮಾಹಿತಿಯಲ್ಲಿದೆ ಸಾವಿರಾರು ಕೋಟಿಯ ವಂಚನೆಯ ದೂರಿನ ದಾಖಲೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ನಲ್ಲಿ ಬರೋಬ್ಬರಿ 1200 ಮಂದಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬರೋಬ್ಬರಿ 1350 ಕೋಟಿ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಹೂಡಿಕೆ ಮಾಡಿದ ಹಣ ಕೇಳಲು ಹೋದವರಿಗೆ ಕಂಪನಿ ಹಣ ವಾಪಾಸ್ ಮಾಡಿಲ್ಲ. ಫೋಜಿ ಸ್ಕೀಂ ಮೂಲಕ ಸಹ ಆಫರ್ ನೀಡಿ ವಂಚನೆ ಮಾಡಿರುವ ಸಂಗತಿ ಪತ್ತೆ ಆಗಿದೆ. ಫೋಜಿ ಸ್ಕೀಂ ಅಂತೆಯೇ buy-back ಅಡಿಯಲ್ಲಿ ಅಕ್ರಮ ನಡೆದಿದೆ. ಪ್ಲಾಟ್ ಕೊಡೊದಾಗಿ, ನಿವೇಶನ ಕೊಡೊದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. 1350 ಕೋಟಿ ಹಣವೂ ಸುಶೀಲ್ ವಂಚಿಸಿದ್ದಾರೆ. ಏಳರಿಂದ ಹತ್ತು ವರ್ಷಗಳ ಹಿಂದೆಯೇ ಹಣ ಕಟ್ಟಿದ್ರು ಇದೂವರೆಗೂ ಮನೆ ನೀಡಿಯೇ ಇಲ್ಲ. ಹೂಡಿಕೆದಾರರ ಹಣವನ್ನು ವೈಯಕ್ತಿಕ ಬಳಕೆ ಮಾಡಿಕೊಂಡಿದ್ದಾರೆ. ಒಂದು ಕಡೆ ಹಣ ತೆಗೆದು ಮತ್ತೊಂದು ಕಡೆ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಮಂತ್ರಿ ಕಂಪನಿ ವಿವಿಧ ಬ್ಯಾಂಕ್ ಗಳಿಂದ 5000 ಕೋಟಿ ಲೋನ್ ಪಡೆದಿದೆ. ಪಡೆದ ಲೋನ್ ನಲ್ಲಿ 1000 ಕೋಟಿಯಲ್ಲಿ ಕೆಲವು ಅವಧಿ ಮೀರಿದ ಮೊತ್ತ ಇದೆ. ಇನ್ನು ಕೆಲವು ಕಾರ್ಯನಿರ್ವಹಿಸದ ಸ್ವತ್ತುಗಳಾಗಿವೆ(NPA).

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:49 pm, Sat, 10 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ