ಇಂದಿನ ಸಮಾವೇಶದ ಹೆಸರು ಬದಲಾವಣೆ ಮಾಡಿದ್ದೇಕೆ ಬಿಜೆಪಿ? ಜನೋತ್ಸವದ ಹಿಂದಿನ ಅಸಲಿ ಕಹಾನಿ ಇಲ್ಲಿದೆ

ಈ ಮುಂಚೆ ಜನಸ್ಪಂದನ ಸಮಾವೇಶಕ್ಕೆ ಜನೋತ್ಸವ ಎಂದು ಹೆಸರಿಸಲಾಗಿತ್ತು. ಆದರೆ ಜನೋತ್ಸವ ಎಂಬ ಹೆಸರು ಬಿಜೆಪಿಗೆ ಸರಿ ಹೊಂದಿ ಬರಲಿಲ್ಲ.

ಇಂದಿನ ಸಮಾವೇಶದ ಹೆಸರು ಬದಲಾವಣೆ ಮಾಡಿದ್ದೇಕೆ ಬಿಜೆಪಿ? ಜನೋತ್ಸವದ ಹಿಂದಿನ ಅಸಲಿ ಕಹಾನಿ ಇಲ್ಲಿದೆ
ಜನಸ್ಪಂದನ ಸಮಾವೇಶ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Sep 10, 2022 | 12:12 PM

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರ ಮುಂದೆ ಇಡುವ ಉದ್ದೇಶದಿಂದ ಆಡಳಿತ ಪಕ್ಷ ಬಿಜೆಪಿ ಇಂದು (ಸೆಪ್ಟೆಂಬರ್ 10) ದೊಡ್ಡಬಳ್ಳಾಪುರದಲ್ಲಿ ‘ಜನಸ್ಪಂದನ’ ಸಮಾವೇಶ (Janaspandana Samavesha)  ಆಯೋಜನೆ ಮಾಡಿದೆ. ಈ ಮುಂಚೆ ಜನಸ್ಪಂದನ ಸಮಾವೇಶಕ್ಕೆ ‘ಜನೋತ್ಸವ’ ಎಂದು ಹೆಸರಿಡಲಾಗಿತ್ತು. ಆದರೆ ‘ಜನೋತ್ಸವ’ ಎಂಬ ಹೆಸರು ಬಿಜೆಪಿಗೆ ಸರಿ ಹೊಂದಿ ಬರಲಿಲ್ಲ ಎಂದು ಕಾಣುತ್ತಿದೆ. ವಾಸ್ತವವಾಗಿ ದೊಡ್ಡಬಳ್ಳಾಪುರದಲ್ಲಿ ಸಮಾವೇಶ ನಡೆಸಲು ಬಿಜೆಪಿ ನಿರ್ಧರಿಸಿದಾಗ ಆರಂಭದಲ್ಲಿ ಇರಿಸಿದ್ದ ಹೆಸರೇ ‘ಜನಸ್ಪಂದನ’. ‌ಆದರೆ ನಂತರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಮಾವೇಶದ ಹೆಸರನ್ನು ‘ಜನೋತ್ಸವ’ ಎಂದು ಬದಲಾಯಿಸಿದರು. ಆದರೆ ಎರಡು ಮೂರು ಬಾರಿ ಮುಂದೂಡಲ್ಪಟ್ಟಾಗ‌ ಕೊನೆಗೆ ಸಾಧನೆಯ ಸಮಾವೇಶಕ್ಕೆ ಬಿಜೆಪಿ ಇಟ್ಟಿದ್ದ ಆರಂಭಿಕ ಹೆಸರೇ ‘ಜನಸ್ಪಂದನ’.‌

‘ಜನೋತ್ಸವ’ದಿಂದ‌ ಜನಸ್ಪಂದನ‌ ಸಮಾವೇಶವಾಗಿ ಮಾರ್ಪಾಡಾಗಿ ನಡೆದ ಸಮಾವೇಶದ ಒಳ ಹೊಕ್ಕು ನೋಡಿದಾಗ ಸಾಕಷ್ಟು ಅಡೆತಡೆಗಳು ಬಂದಿದ್ದು ಕಾಣುತ್ತಿದೆ. ಆಗಸ್ಟ್ 28 ರಂದು ಮೊದಲ ಬಾರಿಗೆ ಸಮಾವೇಶ ನಿಗದಿಯಾದಾಗ ಬಸವರಾಜ ಬೊಮ್ಮಾಯಿ‌ ‌ಸರ್ಕಾರದ ಒಂದು ವರ್ಷದ ಸಾಧನಾ ಸಮಾವೇಶ ಎಂಬಂತೆ ಬಿಂಬಿತವಾಗಿತ್ತು.‌ ಆ‌ ಸಮಯದಲ್ಲಿ ಒಂದು ವರ್ಷದ ಸಾಧನೆ ಎಂಬುದಕ್ಕೆ ಮಾಜಿ ಸಿಎಂ‌ ಬಿ.ಎಸ್. ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತು ಅದನ್ನು ವರಿಷ್ಠರ ಗಮನಕ್ಕೂ ತಂದಿದ್ದರು ಎಂಬುದನ್ನು ಪಕ್ಷದ ಮೂಲಗಳ ತಿಳಿಸಿವೆ. ಆ ಬಳಿಕವೇ ಬಿಜೆಪಿ ಸರ್ಕಾರದ ಮೂರು ವರ್ಷ ಎಂಬ ಸಾಲು ಕೂಡಾ‌ ಸೇರಿಕೊಂಡಿದ್ದು ಎಂಬುದನ್ನು ಬಿಜೆಪಿ ನಾಯಕರೇ ಹೇಳುತ್ತಾರೆ.

ಸಮಾವೇಶ ಬೇಡ‌ ಎಂದ ಬಿಎಸ್​ವೈ:

ಆಗಸ್ಟ್ 8 ರಂದು ನಿಗದಿಯಾಗಿದ್ದ ‘ಜನೋತ್ಸವ’ ಸಮಾವೇಶ ಸಂಪುಟ ಸಚಿವರಾಗಿದ್ದ ಉಮೇಶ್ ಕತ್ತಿಯವರ ಹಠಾತ್‌ ‌ನಿಧನದಿಂದ ಮುಂದೂಡಲ್ಪಡಬೇಕಾದ ಸನ್ನಿವೇಶ ಎದುರಾಗಿತ್ತು. ಆದರೆ ಸಮಾವೇಶ ಮುಂದೂಡಲ್ಪಡುವ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಮತ್ತು ಸಚಿವ ಡಾ. ಸುಧಾಕರ್ ಸಾಕಷ್ಟು ಅಳೆದು ತೂಗುವ ಪ್ರಯತ್ನ ‌ಮಾಡಿದ್ದರು. ಉಮೇಶ್ ಕತ್ತಿ ತೀರಿಕೊಂಡ‌ ದಿನವೇ ಸಮಾವೇಶ ಮುಂದೂಡುವುದು ಸೂಕ್ತ ಎಂದು ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಯಡಿಯೂರಪ್ಪ ಸಲಹೆ ನೀಡಿದ್ದರು. ಸಿದ್ದರಾಮಯ್ಯ ಕೂಡಾ ಕಮೆಂಟ್ ಮಾಡಿದ್ದರು. ಸಮಾವೇಶ ಬೇಡ‌ ಎಂದೂ ಬಿಎಸ್ ವೈ ತಮ್ಮ ಅಭಿಪ್ರಾಯವನ್ನು ನೇರವಾಗಿಯೇ ಸಿಎಂ ಮುಂದೆ ಹೇಳಿದ್ದರು. ಆದರೆ ಅದಕ್ಕೆ ತಕ್ಷಣಕ್ಕೆ ಒಪ್ಪದ ಸಿಎಂ ಬೊಮ್ಮಾಯಿ‌, ಸಮಾವೇಶದ‌ ಆರಂಭದಲ್ಲಿ ಕತ್ತಿ‌ ನಿಧನಕ್ಕೆ ಸಂತಾಪ ಸೂಚಿಸಿ ನಂತರ‌ ನಡೆಸೋಣ ಎಂದು ಯಡಿಯೂರಪ್ಪ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಿದ್ದರು ಎಂದು ತಿಳಿದುಬಂದಿದೆ.

ಅನಂತರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ರಾತ್ರಿಯೇ ಫೋನ್ ಮೂಲಕ ಸಂಪರ್ಕಿಸಿದ್ದ ಬೊಮ್ಮಾಯಿ‌, ಸಮಾವೇಶ ನಡೆಸಲು ಗ್ರೀನ್ ಸಿಗ್ನಲ್ ಕೂಡಾ ಪಡೆದುಕೊಂಡಿದ್ದರು. ಆದರೂ ಮತ್ತಷ್ಟು ಮೋಡದ ಕವಿದ ರೀತಿಯ ವಾತಾವರಣ ಇದ್ದುದರಿಂದ ಮರುದಿನ ಬೆಳಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ರನ್ನು ಸಂಪರ್ಕಿಸಿದ ಬಸವರಾಜ ಬೊಮ್ಮಾಯಿ‌, ಸಮಾವೇಶಕ್ಕೆ ಡಬಲ್ ಒಪ್ಪಿಗೆಯನ್ನೂ ಪಡೆದಿದ್ದರು. ಆದರೆ ಮರುದಿನ ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಹೆಚ್ ಎಎಲ್ ಏರ್ ಪೋರ್ಟ್​ನಲ್ಲಿ ಬೆಳಗಾವಿಗೆ ವಿಶೇಷ ವಿಮಾನ ಹತ್ತಿದ್ದ ಸಿಎಂ ಸಾಂಬ್ರಾ ಏರ್ ಪೋರ್ಟ್ ನಲ್ಲಿ ‌ಲ್ಯಾಂಡ್ ಆಗುವವಷ್ಟರಲ್ಲಿ ಸಮಾವೇಶ ಸೆಪ್ಟೆಂಬರ್ 11ಕ್ಕೆ ಮುಂದೂಡಿಕೆಯಾಗಿತ್ತು.

ಸಪ್ಟೆಂಬರ್ 10ಕ್ಕೆ ಕಾರ್ಯಕ್ರಮ ಮರು ನಿಗದಿ:

ಸಮಾವೇಶ ಯಾವಾಗ ಸೆಪ್ಟೆಂಬರ್ 11 ಕ್ಕೆ ಮುಂದೂಡಲ್ಪಟ್ಟಿತೋ, ಆಗ 11 ರಂದು ಪಿತೃ ಪಕ್ಷ ಇರುವುದು ಸಮಾವೇಶದ ಉಸ್ತುವಾರಿಯನ್ನು ತಲೆ ಮೇಲೆ ಹೊತ್ತಿದ್ದ ಸಚಿವ ಡಾ. ಸುಧಾಕರ್ ಗಮನಕ್ಕೆ ಬಂದಿದೆ. ತರಾತುರಿಯಲ್ಲಿ ಅರುಣ್ ಸಿಂಗ್ ಮತ್ತು ಬಸವರಾಜ ಬೊಮ್ಮಾಯಿ‌ ಅವರನ್ನು ಸಂಪರ್ಕಿಸಿದ‌ ಸಚಿವ ಸುಧಾಕರ್ ಸಪ್ಟೆಂಬರ್ 10 ಕ್ಕೆ ಮರು ನಿಗದಿಗೊಳಿಸಿದರು. ಆದರೆ ಈ ಆತುರದ ಬದಲಾವಣೆಗಳು ಬಿಜೆಪಿ ನಾಯಕರ ಗಮನಕ್ಕೇ ಬಂದಿರಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇನ್ನು ಸೆಪ್ಟೆಂಬರ್ 10 ರಂದು ಸಮಾವೇಶ ನಡೆಸುವುದು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೂ ಇಷ್ಟ ಇರಲಿಲ್ಲ. ಯಾಕೆಂದರೆ ಸೆಪ್ಟೆಂಬರ್ 10 ರಂದೇ ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ರಾಜ್ಯಮಟ್ಟದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಾಗಿತ್ತು. ಹಾಗಾಗಿ ‘ಜನಸ್ಪಂದನ’ ಸಮಾವೇಶ 10 ರಂದು ಬೇಡ ಎಂಬುದು ಕಟೀಲ್ ಮನಸ್ಸಿನಲ್ಲಿದ್ದ ಅಂಶವಾಗಿತ್ತು. ಹೀಗೆ ‘ಜನಸ್ಪಂದನ’ ಸಮಾವೇಶದ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ‌ ಮತ್ತು ಸಚಿವ ಡಾ. ಸುಧಾಕರ್ ತೆಗೆದುಕೊಂಡ ನೇರ ನಿರ್ಧಾರಗಳು ಪಕ್ಷದೊಳಗೆ ಅಸಂತೋಷಕ್ಕೂ ಕಾರಣವಾಗಿದೆ.

ಸ್ಥಳ ಮಹಿಮೆ:

ಕರ್ನಾಟಕ ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಯಶಸ್ವಿಯಾಗಿ 3 ವರ್ಷ ಆಡಳಿತಾವಧಿಯನ್ನ ಪೂರೈಸಿದ ಸಂಭ್ರಮದಲ್ಲಿದೆ. ತಮ್ಮ ಯಶಸ್ಸಿನ ಪಯಣದ ಯಶೋಗಾಥೆ ಕುರಿತು ಅದ್ದೂರಿ ಸಮಾವೇಶದ ಮೂಲಕ ಜನರ ಮುಂದೆ ಹೋಗುತ್ತಿದ್ದಾರೆ. ‘ಜನಸ್ಪಂದನ’ ಹೆಸರಿನಡಿ ಆಯೋಜಿಸಿರುವ ಈ ಅದ್ದೂರಿ ಸಮಾರಂಭಕ್ಕೆ ಕೊನೆಗೂ ಅಂತಿಮ ವೇದಿಕೆ ಸಿದ್ಧವಾಗಿದೆ. ‘ಜನಸ್ಪಂದನ’ ಹೆಸರಿಗೂ ಮುನ್ನ ‘ಜನೋತ್ಸವ’ ಹೆಸರಲ್ಲಿ ಸರ್ಕಾರದ ಸಾಧನೆಗಳನ್ನ ಜನರ ಮುಂದಿಡಲು ಬಿಜೆಪಿ ರಣೋತ್ಸಾಹದಲ್ಲಿತ್ತು. ಜುಲೈ 28ಕ್ಕೆ ನಿಗದಿಯಾಗಿದ್ದ ‘ಜನೋತ್ಸವ’ ಸಮಾವೇಶ ಮುಂದೂಡವಂತೆ ಮಾಡಿದ್ದು, ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಯಾರ್ ಕೊಲೆ. ಸೂತಕದ ಮನೆಯಲ್ಲಿ ಸಂಭ್ರಮಚಾರಣೆ ಬೇಡ ಅನ್ನೋದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯರಾತ್ರಿಯೇ ನಿರ್ಧರಿಸಿ ಮುಂದೂಡಿದ ಬಗ್ಗೆ ಘೋಷಿಸಿದರು. ಬಳಿಕ ಆಗಸ್ಟ್ 28 ರಂದು ಕಾರ್ಯಕ್ರಮಕ್ಕೆ ಚಿಂತಿಸುತ್ತಿರುವಾಗಲೇ, ಗಣೇಶ ಚತುರ್ಥಿ ಹಬ್ಬ ಮತ್ತೆ ಮುಂದೂಡವಂತೆ ಮಾಡಿತು. ಮತ್ತೆ ಸೆಪ್ಟೆಂಬರ್ 08ಕ್ಕೆ ‘ಜನೋತ್ಸವ’ ಕಾರ್ಯಕ್ರಮ ನಿಗದಿಯಾಯ್ತು.

ಸಮಾವೇಶಕ್ಕೆ 2 ದಿನ ಬಾಕಿ ಇರುವಾಗ ಹಾಲಿ ಸಚಿವರಾಗಿದ್ದ ಉಮೇಶ್ ಕತ್ತಿ ಹಠಾತ್ ನಿಧನರಾದರು. ಇದು ಬಿಜೆಪಿಯ ಸಮಾವೇಶಕ್ಕೆ ಮತ್ತೊಮ್ಮೆ ಬರಸಿಡಿಲಂತೆ ಎದುರಾಯ್ತು. ಆಗಲೇ ಬಿಜೆಪಿ ವಲಯದಲ್ಲಿ ಗುಸು ಗುಸು ಚರ್ಚೆಯಾಗಿದ್ದು, ಸ್ಥಳ ಮಹಿಮೆ ವಿಚಾರ. ಈ ಸ್ಥಳ ವಾಸ್ತು ಪ್ರಕಾರ ಸರಿಯಿಲ್ಲ ಎಂದು ಕಾರ್ಯಕರ್ತರು ಪಿಸುಗೋಡೋಕೆ ಶುರುಮಾಡಿದರು. ಇನ್ನು ಕೆಲವರಂತು ನೇರವಾಗೇ ಈ ಸ್ಥಳದಲ್ಲಿ ದೇವರ ಮಹಿಮೆ ಇದೆ, ಹೀಗಾಗಿಯೇ ಈ ರೀತಿ ಆಗುತ್ತದೆ, ಪರಿಹಾರಕ್ಕಾಗಿ ಹೋಮ ಹವನ ಮಾಡಬೇಕು ಎಂದು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್​ಗೆ ನೇರವಾಗಿ ಹೇಳಿದರು.

ಈ ಸ್ಥಳದಲ್ಲಿ ಮುನೇಶ್ವರ ಸ್ವಾಮಿ ಹಾಗೂ ಅಕ್ಕಯಮ್ಮನ ದೇವರಿದೆ. ಇಲ್ಲಿ ಇದನ್ನ ದೇವರ ಮಹಿಮೆಗಾಗಿ ಮೀಸಲಿಡಬೇಕು. ದೇವರ ಆಶೀರ್ವಾದವಿಲ್ಲದೇ ಇಲ್ಲಿ ಏನಾದರೂ ಮಾಡುವುದು ಕಷ್ಟ ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ. ಈ ಹಿಂದೆ ಹಲವು ನಾಯಕರು ಈ ಜಾಗವನ್ನ ಖರೀದಿಸಲು ಮುಂದಾಗಿದ್ದು, ತುಂಬಾ ಆರ್ಥಿಕವಾಗಿ ನಷ್ಟವನ್ನು ಅನುಭವಿಸಿದ್ದಾರೆ. ಈ ಜಾಗದ ಮೇಲೆ ಆಸೆಪಟ್ಟವರು, ತುಂಬಾ ಕೆಳಸ್ಥಿತಿಗೆ ತಲುಪಿದ್ದಾರೆಂದು ಸ್ಥಳೀಯರು ಹೇಳುತ್ತಿದ್ದಾರೆ. ಸುಮಾರು 26 ಎಕರೆ ಜಾಗವಿದೆ. ಸುತ್ತಮುತ್ತ ಎಲ್ಲವೂ ವಾಣಿಜ್ಯತಾತ್ಮಕವಾಗಿ ಬಳಕೆಯಾಗುತ್ತಿದೆ. ಆದರೆ ಈ ಸ್ಥಳ ಮಾತ್ರ ಇನ್ನು ಖಾಲಿ ಇರುವುದೇ ನಿಗೂಢವಾಗಿದೆ. ಈ ಜಾಗದಲ್ಲಿ ಲೇ ಔಟ್ ನಿರ್ಮಾಣ ಮಾಡಲು ಪ್ರಯತ್ನಿಸಿದ ಅದೆಷ್ಟೋ ಬಿಲ್ಡರ್ಸ್ ಹಲವು ವಿಘ್ನಗಳನ್ನ ಎದುರಿಸಿ ಕೈ ಚೆಲ್ಲಿದ್ದಾರೆ. ಹೀಗಾಗಿ ಈ ಸ್ಥಳದ ಮಹಿಮೆ ಬಗ್ಗೆ ಪುಂಕಾನುಪುಂಕವಾಗಿ ಮಾತುಗಳು ಕೇಳಿಬರುತ್ತಿರೋದಂತು ಸುಳ್ಳಲ್ಲ ಎಂದು ಪಕ್ಷದಲ್ಲಿಯೇ ಕೆಲವರು ಮಾತನಾಡುತ್ತಿದ್ದಾರೆ.

ಕಿರಣ್ ಹನಿಯಡ್ಕ ಹಾಗೂ ಶಿವರಾಜ್ ಕುಮಾರ್ ಟಿವಿ9, ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:07 am, Sat, 10 September 22

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ