ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಸಿಬ್ಬಂದಿ ಬೆಂಗಳೂರಿಗೆ ವರ್ಗಾವಣೆ!

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಳೆದ ತಿಂಗಳು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್​ಗೆ ಸಿಐಎಸ್​ಎಫ್​ ಮಹಿಳಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಸಸ್ಪೆಂಡ್ ಆಗಿದ್ದ ಸಿಐಎಸ್​ಎಫ್ ಸಿಬ್ಬಂದಿ ಕುಲ್ವಿಂದರ್​ ಕೌರ್ ಅವರನ್ನು ಮತ್ತೆ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗಿದೆ. ಆದ್ರೆ, ಚಂಡೀಗಢ ವಿಮಾನ ನಿಲ್ದಾಣ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಸಿಬ್ಬಂದಿ ಬೆಂಗಳೂರಿಗೆ ವರ್ಗಾವಣೆ!
ಕಂಗನಾ, ಕುಲ್ವಿಂದರ್ ಕೌರ್
Follow us
ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on: Jul 03, 2024 | 9:49 PM

ಬೆಂಗಳೂರು, (ಜುಲೈ 03): ಕಳೆದ ತಿಂಗಳು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್​ಗೆ ಕೆನ್ನೆಗೆ ಬಾರಿಸಿ ಅಮಾನತುಗೊಂಡಿದ್ದ ಸಿಐಎಸ್​ಎಫ್ ಸಿಬ್ಬಂದಿ ಕುಲ್ವಿಂದರ್​ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಹೌದು…ಶಿಸ್ತು ಉಲ್ಲಂಘನೆ ವಿಚಾರಣೆ ಬಾಕಿಯಿರುವಂತೆ  ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ CISF ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.

ನಟಿ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಂಬಂಧ ಸಸ್ಪೆಂಡ್ ಆಗಿದ್ದ ಸಿಐಎಸ್‌ಎಫ್ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಅಲ್ಲದೇ ಅವರನ್ನು ಚಂಡೀಗಢದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿ ಇರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವರ್ಗಾವಣೆ ಮಾಡಲಾಗಿದೆ. ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇಲೆ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರಿಗೆ ಇಲಾಖಾ ವಿಚಾರಣೆ ನಡೆಯುತ್ತಿದೆ ಎಂದು ಸಿಐಎಸ್‌ಎಫ್ ತಿಳಿಸಿದೆ.

ಇದನ್ನೂ ಓದಿ: ಕಂಗನಾ ಕೆನ್ನೆಗೆ ಹೊಡೆದಿದ್ದು ಯಾಕೆ? ಕಾರಣ ತಿಳಿಸಿದ ಸಿಐಎಸ್​ಎಫ್​ ಮಹಿಳಾ ಸಿಬ್ಬಂದಿ

ಜೂನ್ 7 ರಂದು ಕಂಗನಾ ಚಂಡೀಗಢ ವಿಮಾನ ನಿಲ್ದಾಣದಿಂದ ದೆಹಲಿಯತ್ತ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಕಪಾಳಮೋಕ್ಷ ಮಾಡಿದ್ದರು.  ಬಳಿಕ ಕುಲ್ವಿಂದರ್ ಕೌರ್  ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಅಲ್ಲದೇ ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಕಂಗನಾ ಹೇಳಿಕೆಯಿಂದ ಕುಲ್ವಿಂದರ್ ಅವರಿಗೆ ನೋವಾಗಿದೆ. ಈ ಕಾರಣದಿಂದ ಅವರಿ ಕಂಗನಾ ಕೆನ್ನೆಗೆ ಹೊಡೆದಿದ್ದಾರೆ ಎಂದು ಹೇಳಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಿರಾಜ್ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಹೆಡ್
ಸಿರಾಜ್ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಹೆಡ್
ಹಠಾತ್ತನೆ ಬೆಂಗಳೂರಿಗೆ ಬಂದ ಸನ್ನಿ ಲಿಯೋನಿ: ಕಾರಣವೇನು?
ಹಠಾತ್ತನೆ ಬೆಂಗಳೂರಿಗೆ ಬಂದ ಸನ್ನಿ ಲಿಯೋನಿ: ಕಾರಣವೇನು?
ಪಂಜರದೊಳಗಿದ್ದ ಸಿಂಹವನ್ನು ಕೆಣಕಿ ಕೈ ಬೆರಳನ್ನೇ ಕಳೆದುಕೊಂಡ ಯುವಕ
ಪಂಜರದೊಳಗಿದ್ದ ಸಿಂಹವನ್ನು ಕೆಣಕಿ ಕೈ ಬೆರಳನ್ನೇ ಕಳೆದುಕೊಂಡ ಯುವಕ
ರಾಜ್ಯದ 71ಲಕ್ಷ ಬಿಜೆಪಿ ಕಾರ್ಯಕರ್ತರೆಲ್ಲ ಒಂದೇ ತೆರನಾಗಿರುವುದಿಲ್ಲ: ಆಗರವಾಲ
ರಾಜ್ಯದ 71ಲಕ್ಷ ಬಿಜೆಪಿ ಕಾರ್ಯಕರ್ತರೆಲ್ಲ ಒಂದೇ ತೆರನಾಗಿರುವುದಿಲ್ಲ: ಆಗರವಾಲ
ಆಂಬ್ಯುಲೆನ್ಸ್ ಕದ್ದವನ ಹಿಡಿಯಲು ಹೈದರಾಬಾದ್ ಪೊಲೀಸರಿಂದ ಚೇಸಿಂಗ್
ಆಂಬ್ಯುಲೆನ್ಸ್ ಕದ್ದವನ ಹಿಡಿಯಲು ಹೈದರಾಬಾದ್ ಪೊಲೀಸರಿಂದ ಚೇಸಿಂಗ್
ಬಸನಗೌಡ ಯತ್ನಾಳ್ ಬಾಯಿಗೆ ಬೀಗ ಹಾಕಿಸುವಲ್ಲಿ ಬಿವೈ ವಿಜಯೇಂದ್ರ ಸಫಲರಾದರೇ?
ಬಸನಗೌಡ ಯತ್ನಾಳ್ ಬಾಯಿಗೆ ಬೀಗ ಹಾಕಿಸುವಲ್ಲಿ ಬಿವೈ ವಿಜಯೇಂದ್ರ ಸಫಲರಾದರೇ?
ನನ್ನಲ್ಲೇನೂ ಬದಲಾವಣೆ ಆಗಿಲ್ಲ, ನಾನು ಸ್ಥಿತಪ್ರಜ್ಞ: ಬಸನಗೌಡ ಯತ್ನಾಳ್
ನನ್ನಲ್ಲೇನೂ ಬದಲಾವಣೆ ಆಗಿಲ್ಲ, ನಾನು ಸ್ಥಿತಪ್ರಜ್ಞ: ಬಸನಗೌಡ ಯತ್ನಾಳ್
ಮನೆ ಬಿಟ್ಟು ಹೋಗ್ತೀನೆಂದ ತ್ರಿವಿಕ್ರಮ್, ತಪ್ಪು ಆಗಿದ್ದು ಎಲ್ಲಿ
ಮನೆ ಬಿಟ್ಟು ಹೋಗ್ತೀನೆಂದ ತ್ರಿವಿಕ್ರಮ್, ತಪ್ಪು ಆಗಿದ್ದು ಎಲ್ಲಿ
ಕಾಂಗ್ರೆಸ್ ಕಡೆ ಒಲವು ತೋರುತ್ತಿರುವ ಜೆಡಿಎಸ್ ಶಾಸಕರ ಪೈಕಿ ಮಂಜುನಾಥ ಒಬ್ಬರೇ?
ಕಾಂಗ್ರೆಸ್ ಕಡೆ ಒಲವು ತೋರುತ್ತಿರುವ ಜೆಡಿಎಸ್ ಶಾಸಕರ ಪೈಕಿ ಮಂಜುನಾಥ ಒಬ್ಬರೇ?
ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ ಏನೂ ಇಲ್ಲ: ಡಿಕೆ ಶಿವಕುಮಾರ್
ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ ಏನೂ ಇಲ್ಲ: ಡಿಕೆ ಶಿವಕುಮಾರ್