ಮೆಟ್ಟಿಲಿನ ಮೇಲಿಂದ ಬಿದ್ದು ಕರ್ತವ್ಯ ನಿರತ ಬಸನಾಳ ಗ್ರಾಮದ ಯೋಧ ಸಾವು..
ಹಾಸನದಲ್ಲಿ ಕರ್ತವ್ಯ ನಿರತ CISF ಯೋಧ ಹನುಮಂತ ಕೋಳುರಗಿ ಸೇವೆಯಲ್ಲಿದ್ದಾಗ ಮೆಟ್ಟಿಲು ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೊಲಂಬಿಯ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಯೋಧ ಮೃತಪಟ್ಟಿದ್ದಾರೆ.
ಬೆಂಗಳೂರು: ಮೆಟ್ಟಿಲ ಮೇಲಿಂದ ಬಿದ್ದು ಗಾಯಗೊಂಡಿದ್ದ ಕರ್ತವ್ಯ ನಿರತ ಯೋಧ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹನುಮಂತ ಕೋಳುರಗಿ(45) ಮೃತ ಯೋಧ.
ಹಾಸನದಲ್ಲಿ ಕರ್ತವ್ಯ ನಿರತ CISF ಯೋಧ ಹನುಮಂತ ಕೋಳುರಗಿ ಸೇವೆಯಲ್ಲಿದ್ದಾಗ ಮೆಟ್ಟಿಲಿನ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೊಲಂಬಿಯ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಯೋಧ ಮೃತಪಟ್ಟಿದ್ದಾರೆ. ಇವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಸನಾಳ ಗ್ರಾಮದವರು.
ಇಂದು ಯೋಧನ ಪಾರ್ಥಿವ ಶರೀರ ಸ್ವಗ್ರಾಮ ಇಂಡಿ ತಾಲೂಕಿನ ಬಸನಾಳ ಗ್ರಾಮಕ್ಕೆ ಆಗಮಿಸಿದ್ದು. ಸಾರ್ವಜನಿಕರ ದರ್ಶನದ ಬಳಿಕ, ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ. ಯೋಧನ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಎರಡು ಕಡೆ ಪ್ರತ್ಯೇಕ ಆತ್ಮಹತ್ಯೆ: ಕರ್ತವ್ಯ ನಿರತ ಯೋಧ ನೇಣಿಗೆ ಶರಣು.. ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿ ಶವ ಪತ್ತೆ