ಎರಡು ಕಡೆ ಪ್ರತ್ಯೇಕ ಆತ್ಮಹತ್ಯೆ: ಕರ್ತವ್ಯ ನಿರತ ಯೋಧ ನೇಣಿಗೆ ಶರಣು.. ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿ ಶವ ಪತ್ತೆ
ಬೆಂಗಳೂರಿನ ಕಲಾಸಿಪಾಳ್ಯದ MRR ಲೇನ್‌ನಲ್ಲಿರುವ ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಕಚೇರಿಯ ಟೆರೇಸ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪ್ರಭು ಅಲಿಯಾಸ್ ಪಾಂಡಿ ಪ್ರಭು(30) ಮೃತ ದುರ್ದೈವಿ.
ವಿಜಯಪುರ: ಕರ್ತವ್ಯ ನಿರತ ಯೋಧ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರಿನ ನಿವಾಸಿ ಯೋಧ ಪರಸಪ್ಪ ಚಿಲಕನಹಳ್ಳಿ(25) ದೆಹಲಿಯ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ರಾಸ್ ರೆಜಿಮೆಂಟ್ನ 27ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಪತ್ನಿ ಜತೆ ನವದೆಹಲಿಯಲ್ಲಿ ವಾಸವಾಗಿದ್ದರು. ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ.
ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಆತ್ಮಹತ್ಯೆ ಇನ್ನು ಇದೇ ರೀತಿ ಬೆಂಗಳೂರಿನ ಕಲಾಸಿಪಾಳ್ಯದ MRR ಲೇನ್‌ನಲ್ಲಿರುವ ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಕಚೇರಿಯ ಟೆರೇಸ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪ್ರಭು ಅಲಿಯಾಸ್ ಪಾಂಡಿ ಪ್ರಭು(30) ಮೃತ ದುರ್ದೈವಿ. ಮಾಜಿ ಕಾರ್ಪೊರೇಟರ್ ಧನರಾಜ್ ಕಚೇರಿಯಲ್ಲಿ ಕೆಲಸಕ್ಕಿದ್ದ ಪ್ರಭು, ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದ. ಈತ ಮೂಲತಃ ತಮಿಳುನಾಡಿನವನಾಗಿದ್ದು ನಿನ್ನೆ ತಡರಾತ್ರಿವರೆಗೂ ಗೆಳೆಯನ ಜೊತೆಗಿದ್ದ ಬಳಿಕ ಟೆರೆಸ್ಗೆ ತೆರಳಿದ್ದ. ಆದ್ರೆ ಇಂದು ಬೆಳಗ್ಗೆ ಪ್ರಭು ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಲಾಸಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ವಿಕ್ಟೋರಿಯಾಗೆ ರವಾನಿಸಲಾಗಿದೆ.
ಇದನ್ನೂ ಓದಿ: ಆಸ್ತಿ ವಿವಾದ, ಸಾಲಬಾಧೆ: ಬೆಂಗಳೂರಿನ ತಾಯಿ-ಮಗಳು ನರಸಾಪುರ ಕೆರೆಗೆ ಜಿಗಿದು ಆತ್ಮಹತ್ಯೆ