ಸಿಗ್ನಲ್ ಜಂಪ್ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ಕಿರಿಕ್: ಮಹಿಳೆ ಬಂಧನ
ಕಿರಿಕ್ ಮಾಡಿ ಕಾಲರ್ ಹಿಡಿದು ಎಳೆದಾಡಿದ್ದಾಗಿ ಎಎಸ್ಐ ಬಸಯ್ಯ ಎಂಬುವವರು ಮಹಿಳೆ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಅಡಿ ದೂರನ್ನು ದಾಖಲಿಸಿಕೊಂಡು ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಬೆಂಗಳೂರು: ನಿಯಮಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಪಾಲಿಸದಿದ್ದರೆ ಅಥವಾ ನಿಯಮ ಉಲ್ಲಂಘನೆಯಾದರೇ ಸಂಬಂಧಪಟ್ಟವರು ಪ್ರಶ್ನಿಸುತ್ತಾರೆ. ಪ್ರಶ್ನೆ ಮಾಡುವುದು ಅವರ ಕರ್ತವ್ಯವೂ ಆಗಿರುತ್ತದೆ. ಮಾತ್ರವಲ್ಲದೇ ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಹೀಗೆ ತಪ್ಪನ್ನು ಪ್ರಶ್ನಿಸಿದ ಪೊಲೀಸರ ಕಾಲರ್ ಪಟ್ಟಿ ಹಿಡಿದು, ಎಳೆದಾಡಿದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ (ಮಾರ್ಚ್ 6) ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸಿಗ್ನಲ್ ಜಂಪ್ ಮಾಡಿ ದಂಪತಿಗಳು ಕಾರಿನಲ್ಲಿ ಬಂದರು. ಈ ವೇಳೆ ಸಿಗ್ನಲ್ ಜಂಪ್ ಮಾಡಿ ಬಂದಿರುವುದನ್ನು ಪೊಲೀಸರು ಪ್ರಶ್ನಿಸಿ, ಕಾರನ್ನು ಸೈಡಿಗೆ ಹಾಕಿಸಿ ದಂಡ ಹಾಕಿದ್ದರು. ನ್ಯಾಯಾಲಯದಲ್ಲಿ ದಂಡ ಪಾವತಿ ಮಾಡಲು ಚಾಲಕ ಒಪ್ಪಿಗೆ ನೀಡಿದರು. ಆದರೆ ಚಾಲಕನ ಪತ್ನಿ ಅಪೂರ್ವಿ ಡಿಯಾಜ್ ಎಂಬುವವರು ಸಂಚಾರಿ ಪೊಲೀಸ್ ಕಾಲರ್ ಪಟ್ಟಿ ಹಿಡಿದು ಎಳೆದಾಡಿ ರಂಪಾಟ ಮಾಡಿದ್ದರು.
ಕಿರಿಕ್ ಮಾಡಿ ಕಾಲರ್ ಹಿಡಿದು ಎಳೆದಾಡಿದ್ದಾಗಿ ಎಎಸ್ಐ ಬಸಯ್ಯ ಎಂಬುವವರು ಮಹಿಳೆ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿಯ ಅಡಿ ದೂರನ್ನು ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ
ಪತಿ- ಪತ್ನಿ ಜಗಳದಲ್ಲಿ ಪತಿರಾಯನ ಕಿವಿ ಕಟ್: ಬುದ್ಧಿವಾದ ಹೇಳಿದ ಪತಿಗೆ, ಪತ್ನಿ ಕುಟುಂಬದವರಿಂದ ಹಲ್ಲೆ
ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್ ಮೇಲೆ ಫೈರಿಂಗ್, ಬಂಧನ
Published On - 6:58 pm, Sun, 7 March 21