ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ: ಸಿಎಜಿ ವರದಿ ಜಾರಿಗೆ 3 ಅಧಿಕಾರಿಗಳ ಸಮಿತಿ ರಚಿಸಲು ಸೂಚನೆ

ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ ಹೊರ ಹಾಕಿದೆ. ಸಿಎಜಿ ವರದಿ ಜಾರಿಗೆ ಬಿಬಿಎಂಪಿ ಕ್ರಮ ತೃಪ್ತಿಕರವಾಗಿಲ್ಲ ಎಂದು ಸಿಎಜಿ ವರದಿ ಜಾರಿಗೆ 3 ಅಧಿಕಾರಿಗಳ ಸಮಿತಿ ರಚಿಸಲು ಸೂಚನೆ ನೀಡಿದೆ.

ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ: ಸಿಎಜಿ ವರದಿ ಜಾರಿಗೆ 3 ಅಧಿಕಾರಿಗಳ ಸಮಿತಿ ರಚಿಸಲು ಸೂಚನೆ
ಕರ್ನಾಟಕ ಉಚ್ಚ ನ್ಯಾಯಾಲಯ
Edited By: ಆಯೇಷಾ ಬಾನು

Updated on: Sep 19, 2022 | 2:08 PM

ಬೆಂಗಳೂರು: ಮಳೆಯಿಂದಾಗಿ ಬೆಂಗಳೂರಿನಲ್ಲಿ ಪ್ರವಾಹ ಸ್ಥಿತಿ ಹಿನ್ನೆಲೆ‌ ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್(High Court) ಅಸಮಾಧಾನ ಹೊರ ಹಾಕಿದೆ. ರಾಜಕಾಲುವೆ ಒತ್ತುವರಿ(Encroachment) ಕುರಿತಾದ ಸಿಎಜಿ ವರದಿ ಜಾರಿಗೊಳಿಸಿ ಬಿಬಿಎಂಪಿಗೆ(BBMP) ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ. 2021ರ ಸೆಪ್ಟೆಂಬರ್​ನಲ್ಲೇ ಸಿಎಜಿ ವರದಿ ನೀಡಿದ್ರೂ ಕ್ರಮ ಕೈಗೊಂಡಿಲ್ಲ. ಸಿಎಜಿ ವರದಿ ಜಾರಿಗೆ ಬಿಬಿಎಂಪಿ ಕ್ರಮ ತೃಪ್ತಿಕರವಾಗಿಲ್ಲ ಎಂದು ಸಿಎಜಿ ವರದಿ ಜಾರಿಗೆ 3 ಅಧಿಕಾರಿಗಳ ಸಮಿತಿ ರಚಿಸಲು ಸೂಚನೆ ನೀಡಿದೆ.

ಈ ಸಮಿತಿ ಸಿಎಜಿ ವರದಿ ಜಾರಿ ಬಗ್ಗೆ ನಿಗಾ ವಹಿಸಬೇಕು. 15 ದಿನಗಳಿಗೊಮ್ಮೆ ಹೈಕೋರ್ಟ್​​ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. 2,626 ರಾಜಕಾಲುವೆ ಒತ್ತುವರಿ ಪೈಕಿ 2,024 ತೆರವುಗೊಳಿಸಲಾಗಿದೆ. 602 ಒತ್ತುವರಿ ತೆರವು ಬಾಕಿಯಿರುವುದಾಗಿ ಬಿಬಿಎಂಪಿ ಹೇಳಿದೆ. ಎಲ್ಲ ಒತ್ತುವರಿ ತೆರವುಗೊಳಿಸಿ 15 ದಿನಕ್ಕೊಮ್ಮೆ ವರದಿ ಸಲ್ಲಿಸಬೇಕು. ಹೈಕೋರ್ಟ್ ಆದೇಶ ಪಾಲಿಸದಿದ್ರೆ ಗಂಭೀರವಾಗಿ ಪರಿಗಣಿಸಲಾಗುವುದು. ಬೇರೆ ಸಂಸ್ಥೆಗಳು ಈ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಸದಂತೆ ಸೂಚನೆ ನೀಡಿ ಹೈಕೋರ್ಟ್ ಆದೇಶಿಸಿದೆ.

ಕೆರೆ ಒತ್ತುವರಿ ಕುರಿತು ತನಿಖೆ ಮಾಡಲು ಸರ್ಕಾರ ಸಿದ್ಧ

ಇನ್ನು ಮತ್ತೊಂದು ಕಡೆ ಕೆರೆ ಒತ್ತುವರಿ ಕುರಿತು ತನಿಖೆ ಮಾಡಲು ಸರ್ಕಾರ ಸಿದ್ಧ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಒತ್ತುವರಿ ಬಗ್ಗೆ ತನಿಖೆ ಮಾಡಿಯೇ ಮಾಡುತ್ತೇವೆ. ತನಿಖೆಯ ಸ್ವರೂಪದ ಕುರಿತು ಮುಂದೆ ಮಾಹಿತಿ ನೀಡುತ್ತೇನೆ. ಕೆರೆಗಳನ್ನು ಯಾವ ರೀತಿ ಒತ್ತುವರಿ ಮಾಡಲಾಯ್ತು, ಕೆರೆಗಳನ್ನು ಹೇಗೆ ಮುಚ್ಚಲಾಯ್ತು, ಅನುಮತಿ ಕೊಟ್ಟವಱರು? ಈ ಎಲ್ಲದರ ಬಗ್ಗೆಯೂ ಸಹ ತನಿಖೆಯನ್ನು ಮಾಡಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಘೋಷಣೆ ಮಾಡಿದ್ದಾರೆ.

ವಿಧಾನಸಭೆಯ ಕಲಾಪದಲ್ಲಿ ಅತಿವೃಷ್ಟಿ ಕುರಿತು ಕಂದಾಯ ಸಚಿವ ಅಶೋಕ್ ಉತ್ತರ ಕೊಡ್ತಿದ್ರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸರ್ವಜ್ಞ ನಗರ ಶಾಸಕ ಕೆ.ಜೆ. ಜಾರ್ಜ್, ಕೆರೆ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲಾ ಸರಕಾರಗಳದ್ದು. ಆದರೆ ಕೆರೆ ಒತ್ತುವರಿ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದೆ. ದುರುದ್ದೇಶದಿಂದ ಆರೋಪ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ಕಾಲದಲ್ಲಿ ಕೆರೆ ಮುಚ್ಚಿದ್ದರೆ ತನಿಖೆ ಮಾಡಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ರು.

ಆಗ ಸಿಎಂ ಬೊಮ್ಮಾಯಿ, ನಾವು ವೈಯಕ್ತಿಕವಾಗಿ ಯಾರ ಮೇಲೂ ಆರೋಪ ಮಾಡಲ್ಲ. ನೀವು ವೈಯಕ್ತಿಕವಾಗಿ ಈ ವಿಚಾರ ತೆಗೆದುಕೊಳ್ಳಬೇಡಿ. ಆದರೆ ಕೆರೆ ಮುಚ್ಚಿರುವುದು ಮಾತ್ರ ಸತ್ಯ. ಕೆರೆ ಮುಚ್ಚಿರುವ ಕುರಿತು ತನಿಖೆ ಮಾಡಲು ಸರಕಾರ ಸಿದ್ಧ. ತನಿಖೆ ಮಾಡಿಯೇ ಮಾಡುತ್ತೇವೆ. ತನಿಖೆಯ ಸ್ವರೂಪದ ಕುರಿತು ಮುಂದೆ ಹೇಳುತ್ತೇನೆ. ಕೆರೆಗಳನ್ನು ಯಾವ ರೀತಿ ಒತ್ತುವರಿ ಮಾಡಲಾಯ್ತು, ಕೆರೆಗಳನ್ನು ಹೇಗೆ ಮುಚ್ಚಲಾಯ್ತು, ಇದಕ್ಕೆ ಅನುಮತಿ ಕೊಟ್ಟವರು ಯಾರು, ಎಲ್ಲದರ ಬಗ್ಗೆಯೂ ಸಹ ತನಿಖೆ ಮಾಡಿಸುತ್ತೇವೆ ಎಂದು ಘೋಷಿಸಿದರು.

Web contact

TV9 Kannada

Read More
Follow Us