ಮಗನ ಮುಖ ನೋಡಬೇಕೆಂಬ ಹೆತ್ತವರ ಕೋರಿಕೆ ಈಡೇರಿಸಿದಿರಿ- ಪ್ರಧಾನಿ ಮೋದಿಗೆ ಕರೆ ಮಾಡಿ ಧನ್ಯವಾದ ತಿಳಿಸಿದ ಬೊಮ್ಮಾಯಿ

ಇದು ನಿಜಕ್ಕೂ ಅಸಾಧಾರಣ ಕೆಲಸ. ಯುದ್ಧ ಭೂಮಿಯಿಂದ ಮೃತದೇಹ ತರುವುದು ಸುಲಭದ ಮಾತಲ್ಲ. ಆದರೆ ತಮ್ಮ ರಾಜತಾಂತ್ರಿಕತೆಯಿಂದ ಅಸಾಧಾರಣ ಕೆಲಸವನ್ನು ಮಾಡಿ ತೋರಿಸಿದ್ದೀರಿ. ಇದಕ್ಕಾಗಿ ನಾನು ಧನ್ಯವಾದ ತಿಳಿಸಬಯಸುತ್ತೇನೆ ಎಂದು ದೂರವಾಣಿ ಕರೆ ಮೂಲಕ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ.

ಮಗನ ಮುಖ ನೋಡಬೇಕೆಂಬ ಹೆತ್ತವರ ಕೋರಿಕೆ ಈಡೇರಿಸಿದಿರಿ- ಪ್ರಧಾನಿ ಮೋದಿಗೆ ಕರೆ ಮಾಡಿ ಧನ್ಯವಾದ ತಿಳಿಸಿದ ಬೊಮ್ಮಾಯಿ
ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Follow us
TV9 Web
| Updated By: preethi shettigar

Updated on:Mar 21, 2022 | 4:42 PM

ಬೆಂಗಳೂರು: ನವೀನ್ ಗ್ಯಾನಗೌಡರ್ ಮೃತದೇಹ ತಾಯ್ನಾಡಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಧನ್ಯವಾದ ಹೇಳಿದ್ದಾರೆ. ಚಳಗೆರೆಯಿಂದ ಬೆಂಗಳೂರಿಗೆ ವಾಪಸಾದ ಬಳಿಕ ದೂರವಾಣಿ ಕರೆ(Phone call) ಮಾಡಿ ಮೂರು ನಿಮಿಷಗಳ ಕಾಲ ಪ್ರಧಾನಿ(PM Narendra modi) ಜತೆ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ನವೀನ್ ಮೃತದೇಹವನ್ನು ದೇಶಕ್ಕೆ ತರಿಸುವಲ್ಲಿ ತಮ್ಮ ಪಾತ್ರ ಬಹಳ ಮುಖ್ಯವಾಗಿದೆ. ನವೀನ್ ಮುಖ ನೋಡಬೇಕೆಂಬುದು ಅವರ ತಂದೆ- ತಾಯಿ ಆಸೆಯಾಗಿತ್ತು. ಅವರ ಹೆತ್ತವರ ಕನಸನ್ನು ತಾವು ಈಡೇರಿಸಿದ್ದೀರಿ. ಕರ್ನಾಟಕದ ರಾಜ್ಯದ ಪರವಾಗಿ ತಮಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಯುದ್ಧ ಭೂಮಿಯಿಂದ ಮೃತದೇಹ ತರುವುದು ಸುಲಭದ ಮಾತಲ್ಲ; ತಮ್ಮ ರಾಜತಾಂತ್ರಿಕತೆಯಿಂದ ಅಸಾಧಾರಣ ಕೆಲಸ ಮಾಡಿ ತೋರಿಸಿದ್ದೀರಿ – ಧನ್ಯವಾದ್ ಬಳಿಕ ಮಾತನಾಡಿದ ಅವರು, ಇದು ನಿಜಕ್ಕೂ ಅಸಾಧಾರಣ ಕೆಲಸ. ಯುದ್ಧ ಭೂಮಿಯಿಂದ ಮೃತದೇಹ ತರುವುದು ಸುಲಭದ ಮಾತಲ್ಲ. ಆದರೆ ತಮ್ಮ ರಾಜತಾಂತ್ರಿಕತೆಯಿಂದ ಅಸಾಧಾರಣ ಕೆಲಸವನ್ನು ಮಾಡಿ ತೋರಿಸಿದ್ದೀರಿ. ಇದಕ್ಕಾಗಿ ನಾನು ಧನ್ಯವಾದ ತಿಳಿಸಬಯಸುತ್ತೇನೆ ಎಂದು ದೂರವಾಣಿ ಕರೆ ಮೂಲಕ ಪ್ರಧಾನಿಗೆ ಧನ್ಯವಾದ ಹೇಳಿದ್ದಾರೆ.

ನವೀನ ಉಕ್ರೇನ್​ನಲ್ಲಿ ಓದ್ತಿರೋ ವೇಳೆ ಯುದ್ಧದಲ್ಲಿ ಮರಣವಾಗಿದೆ. ಅಂದಿನಿಂದ ಚಳಗೇರಿ ಮಾತ್ರವಲ್ಲ ಈ ಭಾಗದ ಜನರು ದುಃಖತಪ್ತರಾಗಿದ್ದಾರೆ. ವಿದ್ಯಾರ್ಥಿಗಳನ್ನ ವಾಪಸ್ ತರುವಲ್ಲಿ ಯಶಸ್ವಿ ಆಗಿದ್ದೇವೆ‌. ಉಕ್ರೇನ್​ನಿಂದ ತಮ್ಮ ನಾಗರಿಕರನ್ನ ಕರೆತರುವ ಕೆಲಸವನ್ನ ಯಾರೂ ಮಾಡಿಲ್ಲ. ಅಂಥಾ ದೊಡ್ಡ ಕೆಲಸವನ್ನು ನಮ್ಮ ಪ್ರಧಾನಿಯವರು ಮಾಡಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನ ಕರೆತರಲು ಸಾಧ್ಯವಾಯ್ತು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ನವೀನಗೆ ಶೆಲ್ ನೇರವಾಗಿ ಬಿದ್ದಂತೆ ಕಾಣ್ತಿಲ್ಲ. ಪಕ್ಕದ ಬಿಲ್ಡಿಂಗ್​ ಶೆಲ್ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ. ಪ್ರಧಾನಿಯವರ ಸೂಚನೆ ಮೇರೆಗೆ ದೇಹವನ್ನು ಸೆಕ್ಯೂರ್ ಮಾಡಿ ಎಂಬಾಂಬಿಂಗ್ ಮಾಡಿದ್ದರು. ಇಪ್ಪತ್ತೊಂದು ದಿನಗಳಾದ್ರೂ ನವೀನ ದೇಹ ಡಿಕಂಪೋಸ್ ಆಗಿಲ್ಲ. ಅಷ್ಟೊಂದು ಚೆನ್ನಾಗಿ ಎಂಬಾಂಬಿಂಗ್ ಮಾಡಿದ್ದಾರೆ. ದುಬೈಗೆ ತಂದು ಡಾಕ್ಯುಮೆಂಟ್ ಚೆಕ್ ಮಾಡಿ ರಿಪ್ಯಾಕಿಂಗ್ ಮಾಡಿ ಕಳಿಸಿದ್ದಾರೆ. ಬಹಳ ಅಸಾಧ್ಯವಾದ ಕೆಲಸವನ್ನ ಪ್ರಧಾನಿ ಮಾಡಿದ್ದಾರೆ. ನಿಮ್ಮ ಮಗ ಅಲ್ಲ, ದೇಶದ ಮಗ ಅಂತಾ ಪ್ರಧಾನಿಯವರು ನವೀನ ತಂದೆಗೆ ಮಾತು ಕೊಟ್ಟಿದ್ದರು. ಇದು ವಿಶ್ವದಲ್ಲಿ ಪ್ರಧಾನಿಯವರ ತಾಕತ್ತು ಏನು ಅನ್ನೋದನ್ನ ತೋರಿಸುತ್ತೆ. ನವೀನ ತಾಯಿ ಭಾವನೆಗಳನ್ನ ಪ್ರಧಾನಿಯವರು ಗೌರವಿಸಿದ್ದಾರೆ‌ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಆಭಾರಿ ಆಗಿದ್ದೇನೆ: ವಚನಾನಂದ ಸ್ವಾಮೀಜಿ

21 ದಿನ ನವೀನ್ ಮೃತದೇಹ ಸುರಕ್ಷಿತವಾಗಿ ಇಡಲಾಗಿದೆ. ಭಾರತ ವಿಶ್ವಗುರು ಆಗಿದೆ ಎಂಬುದಕ್ಕೆ ಇದು ನಿದರ್ಶನ. ಅನೇಕ ವಿದ್ಯಾರ್ಥಿಗಳು ಉಟ್ಟ ಬಟ್ಟೆಯಲ್ಲಿ ಬಂದಿದ್ದಾರೆ‌. ನವೀನ್​​ ಮೃತದೇಹ ನಮ್ಮ ಭಾರತ ದೇಶಕ್ಕೆ ಬಂದಿದೆ. ಮಗನನ್ನ ಕಳೆದುಕೊಂಡಿದ್ದು ಹೆತ್ತವರಿಗೆ ದೊಡ್ಡ ನೋವು‌. ಹಾಗಿದ್ದರೂ ಮೆಡಿಕಲ್‌ ಕಾಲೇಜಿಗೆ ಮೃತದೇಹ ದಾನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಆಭಾರಿ ಆಗಿದ್ದೇನೆ ಎಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿಯಲ್ಲಿ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಪ್ರಧಾನಿಯವರು ಪ್ರಯತ್ನ ಮಾಡಿ ಪಾರ್ಥೀವ ಶರೀರ ತರುವಲ್ಲಿ ಯಶಸ್ವಿ ಆಗಿದ್ದಾರೆ: ಶಾಸಕ ಎಂ.ಪಿ.ರೇಣುಕಾಚಾರ್ಯ

ಉಕ್ರೇನ್​ನಲ್ಲಿ ಮೃತಪಟ್ಟ ನವೀನ್ ಕುಟುಂಬಸ್ಥರ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿಗೆ ಅಭಿನಂದನೆ‌ ಸಲ್ಲಿಸುತ್ತೇನೆ. ಮಗನ ಮೃತದೇಹ ತರಬೇಕು ಎಂಬುದು ನವೀನ್​​ ತಾಯಿ, ಕುಟುಂಬದವರ ಆಸೆಯಾಗಿತ್ತು. ಪ್ರಧಾನಿಯವರು ಪ್ರಯತ್ನ ಮಾಡಿ ಮೃತದೇಹ ತರುವಲ್ಲಿ ಯಶಸ್ವಿ ಆಗಿದ್ದಾರೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ವೈದ್ಯಕೀಯ ಶುಲ್ಕ ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು: ಬಸವರಾಜ ಬೊಮ್ಮಾಯಿ

20 ದಿನಗಳ ಬಳಿಕ ಮಗನ ಮುಖ ನೋಡುವ ಅವಕಾಶ ಸಿಕ್ಕಿದೆ: ನವೀನ್ ನೆನೆದು ಭಾವುಕರಾದ ತಾಯಿ ವಿಜಯಲಕ್ಷ್ಮೀ

Published On - 4:22 pm, Mon, 21 March 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್