ಬೆಂಗಳೂರು, ಏಪ್ರಿಲ್ 09: ಮುಖ್ಯಮಂತ್ರಿ ಸಿದ್ದರಾಮಯ್ಯ (Siddarmaiah) ಅವರಿಗೆ ಮಾಲಾರ್ಪಣೆ ಮಾಡಿದ ಬಂದೂಕುಧಾರಿ ರಿಯಾಜ್ ಸಿದ್ದಾಪುರ ರ್ಯಾಲಿ ಉಸ್ತುವಾರಿ ವಹಿಸಿಕೊಂಡಿದ್ದನು. ಅವನು ತುಂಬಾ ಒಳ್ಳೇ ಹುಡುಗ, ಅವನಿಗೆ ಗನ್ ಲೈಸೆನ್ಸ್ ಇದೆ ಎಂದು ಮಾಜಿ ಶಾಸಕ ಆರ್.ವಿ.ದೇವರಾಜ್ (RV Devaraj) ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೂವಿನ ಹಾರ ತೆಗೆದುಕೊಂಡು ಎಲ್ಲರೂ ನಿಂತಿದ್ದರು. ನಾನೇ ರಿಯಾಜ್ಗೆ ಹೂವಿನ ಹಾರ ಹಾಕಲು ಮೇಲೆ ಕರೆದೆ. ಅದರಂತೆ ರಿಯಾಜ್ ಬಂದು ಹೂವಿನ ಹಾರ ಹಾಕಿದ್ದಾನೆ. ಅದು ಬಿಟ್ಟರೇ ಬೇರೆ ಯಾವುದೇ ಉದ್ದೇಶ ಇರಲಿಲ್ಲ. ಬೇರೆ ಉದ್ದೇಶದಿಂದ ಬಂದಿದ್ದರೆ ಮುಖ್ಯಮಂತ್ರಿಗಳ ರಕ್ಷಣೆಗೆ ನಾವೆ ನಿಲ್ಲುತಿದ್ದವಿ. ಇದು ಆಕಸ್ಮಿಕವಾಗಿ ನಡೆದಿರೋ ಘಟನೆ ಎಂದು ಸ್ಪಷ್ಟಪಡಿಸಿದರು.
ಭದ್ರತಾ ವೈಫಲ್ಯ ಯಾವುದು ಆಗಿಲ್ಲ. ಅವರವರ ರಕ್ಷಣೆಗೆ ಅವರು ಗನ್ ಇಟ್ಟುಕೊಂಡಿರುತ್ತಾರೆ. ನನ್ನ ಜೊತೆನೂ ಗನ್ ಮ್ಯಾನ್ಗಳು ಇದ್ದಾರೆ. ವಿಪಕ್ಷಗಳು ಒಳ್ಳೆಯ ವಿಷಯ ಇದ್ರೆ ಮಾತನಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಇನ್ನು ರಿಯಾಜ್ ಅಹಮದ್ನನ್ನು ಪೊಲೀಸರು ಈಗಾಗಲೆ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ, “ದೇವರಾಜ್ ಸಾಹೇಬರು ನನ್ನನ್ನು ಮೇಲೆ ಕರೆದರು. ಹೀಗಾಗಿ ವಾಹನ ಮೇಲೆ ಹೋಗಿ ಮುಖ್ಯಮಂತ್ರಿಗಳಿಗೆ ಹಾರ ಹಾಕಿದೆ. ಇಲ್ಲದಿದ್ದರೆ ನಾನು ಮುಖ್ಯಮಂತ್ರಿಗಳ ಬಳಿ ಹೋಗುತ್ತಿರಲಿಲ್ಲ. ನನ್ನ ಪಾಡಿಗೆ ನಾನು ರ್ಯಾಲಿಯನ್ನು ಸೈಡಲ್ಲಿ ನಿಂತುಕೊಂಡು ನೋಡುತ್ತಿದ್ದೆ” ಎಂದು ಪೊಲೀಸರ ಮುಂದೆ ಹೇಳಿದ್ದಾನೆ.
ಇದನ್ನೂ ಓದಿ: ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಬೇಕಾದರೆ ಶ್ರೇಯಸ್ ಪಟೇಲ್ರನ್ನು ಗೆಲ್ಲಿಸಬೇಕು: ಕೆಎಂ ಶಿವಲಿಂಗೇಗೌಡ
ನನಗೆ ಜೀವ ಬೆದರಿಕೆ ಇದೆ ಸರ್, ಹೀಗಾಗಿ ಪ್ರತೀದಿನ ಗನ್ ಇಟ್ಟುಕೊಂಡು ಹೊರಗೆ ಬರುತ್ತೇನೆ. ಮುಖ್ಯಮಂತ್ರಿಗಳ ಮುಂದೆ ಗನ್ ಪ್ರದರ್ಶನ ಮಾಡಬೇಕು ಅನ್ನೊ ಉದ್ದೇಶ ನಂಗಿರಲಿಲ್ಲ. ವಾಹನದ ಮೇಲೇರಿದಾಗ ಆಕಸ್ಮಿಕವಾಗಿ ಸೊಂಟದಲ್ಲಿದ್ದ ಗನ್ ಕಂಡಿದೆ. ನಾನು ಗನ್ ತೋರಿಸಿಲ್ಲ ಸಾರ್ ಅಂತ ಹೇಳಿದ್ದಾನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 08 ರಂದು ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಭರ್ಜರಿ ಪ್ರಚಾರ ಮಾಡಿದ್ದರು. ಈ ವೇಳೆ ವ್ಯಕ್ತಿಯೋರ್ವ ಗನ್ ಇಟ್ಟುಕೊಂಡು ಬಂದು ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿ ತೆರಳಿದ್ದನು. ಕ್ಯಾಂಪೇನ್ ವಾಹನ ಏರಿ ಸಿಎಂ ಸಿದ್ದರಾಮಯ್ಯಗೆ ಹಾರ ಹಾಕಿದ್ದರು. ಈ ವೇಳೆ ವ್ಯಕ್ತಿ ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡಿರುವುದು ಕಂಡುಬಂದಿದೆ. ಇದರಿಂದ ಪೊಲೀಸರ ಭದ್ರತಾ ಲೋಪ ಎಸಗಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:26 am, Tue, 9 April 24