ಬೆಂಗಳೂರು: ಅತಿಥಿ ಉಪನ್ಯಾಸಕರ ಬೇಡಿಕೆಗಳ ಅಧ್ಯಯನಕ್ಕೆ ಸಮಿತಿ ರಚನೆ ಮಾಡಲಾಗಿದೆ. ಅಧ್ಯಯನ ನಡೆಸಿ ವಿಸ್ತೃತ ವರದಿ ಸಲ್ಲಿಸಲು ಸಮಿತಿ ರಚಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ ಎಸಿಎಸ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಈ ಬಗ್ಗೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ಆರ್ಥಿಕ ಮತ್ತು ಕಾನೂನು ಇಲಾಖೆಯ ಕಾರ್ಯದರ್ಶಿಗಳು, ಕಾಲೇಜು, ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರ ಸಮಿತಿ ರಚನೆ ಆಗಿದೆ. ನಿಗದಿತ ಕಾಲಮಿತಿಯೊಳಗೆ ಸಮಿತಿ ವರದಿ ಸಲ್ಲಿಸಲಿರುವ ಬಗ್ಗೆ ತಿಳಿಸಲಾಗಿದೆ.
ಅತಿಥಿ ಉಪನ್ಯಾಸಕರ ಬೇಡಿಕೆ ವಿಚಾರವಾಗಿ ಮಂಗಳವಾರ (ಡಿಸೆಂಬರ್ 14) ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ನಡೆಯಲಿದೆ. ಶಿಕ್ಷಕರು, ಪದವೀಧರ ಕ್ಷೇತ್ರದ ಪರಿಷತ್ ಸದಸ್ಯರು ಭಾಗಿ ಆಗಲಿದ್ದಾರೆ.
ತಾಂಡಾಗಳಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿ: ಪ್ರಕಾಶ್ ರಾಥೋಡ್ ವಿಷಯ ಪ್ರಸ್ತಾಪ
ಸೋಮವಾರ ಕೂಡ ವಿಧಾನ ಪರಿಷತ್ನಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆದಿದೆ. ವಿಧಾನ ಪರಿಷತ್ನಲ್ಲಿ ನಿಯಮ 330ರಡಿ ಚರ್ಚೆ ಮಾಡಲಾಗಿದೆ. ಪರಿಷತ್ನಲ್ಲಿ ಪ್ರಕಾಶ್ ರಾಥೋಡ್ ವಿಷಯ ಪ್ರಸ್ತಾಪ ಮಾಡಿದ್ದಾರೆ. ತಾಂಡಾಗಳಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿ. 100 ರೇಷನ್ಕಾರ್ಡ್ ಇರುವ ತಾಂಡಾಗೆ ಮಂಜೂರು ಮಾಡಿ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಸಿಎಂ ಇದ್ದಾಗ ಘೋಷಣೆ ಮಾಡಿದ್ರು. ಯೋಜನೆ ಘೋಷಿಸಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಕೂಡಲೇ ಈ ಬಗ್ಗೆ ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಪರಿಷತ್ನಲ್ಲಿ ಸದಸ್ಯ ಪ್ರಕಾಶ್ ರಾಥೋಡ್ ಒತ್ತಾಯ ಮಾಡಿದ್ದಾರೆ.
ಪ್ರಕಾಶ್ ರಾಥೋಡ್ ಪ್ರಸ್ತಾಪಕ್ಕೆ ಸಚಿವ ಕತ್ತಿ ಉತ್ತರ ನೀಡಿದ್ದಾರೆ. 100 ರೇಷನ್ಕಾರ್ಡ್ ಇರುವ ತಾಂಡಾಗಳಿಗೆ ಒಂದು ನ್ಯಾಯ ಬೆಲೆ ಅಂಗಡಿ ನೀಡಲು ಆದೇಶ ಹೊರಡಿಸಿದೆ. ಈಗಾಗಲೇ ರಾಜ್ಯದಲ್ಲಿ 375 ನ್ಯಾಯಬೆಲೆ ಅಂಗಡಿ ಕೊಟ್ಟಿದ್ದೇವೆ. ಇನ್ನೂ ಅಗತ್ಯ ಇದ್ರೆ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ನ್ಯಾಯಬೆಲೆ ಅಂಗಡಿಗೆ ಬೇಕೆಂದು ಅರ್ಜಿ ಸಲ್ಲಿಸಿದ್ರೆ ಮಂಜೂರು ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪರಿಷತ್ ಚುನಾವಣೆ ಫಲಿತಾಂಶ ಪ್ರಕಟಿಸದಂತೆ ನೀಡಿದ್ದ ತಡೆಯಾಜ್ಞೆ ತೆರವು; ಮಂಗಳವಾರವೇ ಫಲಿತಾಂಶ
ಇದನ್ನೂ ಓದಿ: ಕಬ್ಬು ಬೆಲೆ, ಅತಿವೃಷ್ಟಿಯಿಂದ ಹಾನಿ ಕುರಿತು ವಿಧಾನ ಪರಿಷತ್ನಲ್ಲಿ ಚರ್ಚೆ; ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಒತ್ತಾಯ
Published On - 10:55 pm, Mon, 13 December 21