ಬುದ್ಧಿಮಾಂದ್ಯ ಮಗುವನ್ನು ಹತ್ಯೆಗೈದು ತಂದೆಯೂ ಆತ್ಮಹತ್ಯೆ; ಬೆಂಗಳೂರಿನಲ್ಲಿ ದಾರುಣ ಘಟನೆ
Crime News: ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ರೈಲ್ವೆ ಹಳಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸುರೇಶ್, ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಎಸ್.ಆರ್. ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಬೆಂಗಳೂರು: ಬುದ್ಧಿಮಾಂದ್ಯ ಮಗುವನ್ನು ಹತ್ಯೆಗೈದು ತಂದೆಯೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನ ಎಸ್.ಆರ್.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗ್ಗೆ 10 ವರ್ಷದ ಮಗನನ್ನು ಸಂಪ್ಗೆ ಎಸೆದಿದ್ದ ಸುರೇಶ್, ಮಗನನ್ನು ಹತ್ಯೆ ಮಾಡಿದ್ದಾನೆ. ಸಂಜೆ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ಸುರೇಶ್ ಶವ ಕೂಡ ಪತ್ತೆ ಆಗಿದೆ. ಮಗ ಬುದ್ಧಿಮಾಂದ್ಯ ಎಂಬ ಹಿನ್ನೆಲೆ ಮನೆಯಲ್ಲಿ ಪತ್ನಿ ಜತೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಮನೆಯಲ್ಲಿ ಆಗಾಗ ಪತ್ನಿ ಜತೆ ಗಲಾಟೆ ಮಾಡ್ತಿದ್ದ ಸುರೇಶ್, ನಿನ್ನೆ ರಾತ್ರಿಯೂ ಪತ್ನಿ ಜೊತೆ ಗಲಾಟೆ ಮಾಡಿದ್ದ ಎಂದು ತಿಳಿದುಬಂದಿದೆ.
ಬಳಿಕ ಮುಂಜಾನೆ 5 ಗಂಟೆಗೆ ಮಗುವನ್ನು ಸಂಪ್ಗೆ ಎಸೆದಿದ್ದ. ಸಂಜೆ ಎಸ್.ಆರ್. ನಗರ ಠಾಣೆಗೆ ಶೇಷಾದ್ರಿಪುರಂ ಠಾಣೆಯಿಂದ ಕರೆ ಬಂದಿತ್ತು. ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕರೆ ಬಂದಿತ್ತು. ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ರೈಲ್ವೆ ಹಳಿ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸುರೇಶ್, ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಎಸ್.ಆರ್. ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಬೆಂಗಳೂರಿನಲ್ಲಿ ಖಾಸಗಿ ಬಸ್ ಡಿಕ್ಕಿ, ಬೈಕ್ ಸವಾರ ಸಾವು ಖಾಸಗಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏರ್ಪೋರ್ಟ್ ರಸ್ತೆಯ ಫ್ಲೈಓವರ್ನಲ್ಲಿ ಅಪಘಾತ ನಡೆದಿದೆ. ಅಪಘಾತದಲ್ಲಿ ಯಲಹಂಕ ನಿವಾಸಿ ನಿಖಿಲ್ (22) ಸಾವನ್ನಪ್ಪಿದ್ದಾನೆ. ಬಸ್ ಡಿವೈಡರ್ಗೆ ಡಿಕ್ಕಿಯಾಗಿ ಎದುರು ಬರುತ್ತಿದ್ದ ಬೈಕ್ಗೆ ಡಿಕ್ಕಿ ಆಗಿದೆ. ಅಪಘಾತದ ಬಳಿಕ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ.
ನೆಲಮಂಗಲ: ಕಾರಿನ ಸಿಲಿಂಡರ್, ಸೈಲೆನ್ಸರ್ ಕಳವು ಕಾರಿನ ಸಿಲಿಂಡರ್, ಸೈಲೆನ್ಸರ್ ಕಳವು ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಅರಿಶಿನಕುಂಟೆಯಲ್ಲಿ ಕಳ್ಳತನ ಆಗಿದೆ. 65 ಸಾವಿರ ರೂಪಾಯಿ ಮೌಲ್ಯದ ಸೈಲೆನ್ಸರ್, ಸಿಲಿಂಡರ್ ಕಳ್ಳತನ ಮಾಡಲಾಗಿದೆ. ನೆಲಮಂಗಲ ಟೌನ್ ಠಾಣೆಗೆ ವಾಹನ ಮಾಲೀಕರು ದೂರು ನೀಡಿದ್ದಾರೆ.
ಈ ಹಿಂದೆಯೂ 8ಕ್ಕೂ ಹೆಚ್ಚು ಕಾರುಗಳಲ್ಲಿ ಕಳವು ಅರೋಪ ಕೇಳಿಬಂದಿದೆ. ಕೆಲವೊಂದು ಕಾರುಗಳ ಪ್ರಕರಣಗಳನ್ನಷ್ಠೆ ಟೌನ್ ಪೊಲೀಸರು ದಾಖಲು ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ನೆಲಮಂಗಲ ಟೌನ್ ಠಾಣೆ ಪೊಲೀಸರ ವಿರುದ್ಧ ವಾಹನ ಮಾಲಿಕರು ಕಿಡಿಕಾರಿದ್ದಾರೆ.
ಇದನ್ನೂ ಓದಿ: Bengaluru Crime: ಕೆಲಸ ಕೊಡಿಸುವ ಆಸೆ ಹುಟ್ಟಿಸಿ ಯುವತಿಯನ್ನು ವೇಶ್ಯಾವಾಟಿಕೆಗೆ ಬಳಕೆ; ಪೊಲೀಸರ ದಾಳಿ ವೇಳೆ ಜಾಲ ಪತ್ತೆ
ಇದನ್ನೂ ಓದಿ: Crime News: ತಾಯಿ ಮಗಳ ಸರ ಕದಿಯಲು ಯತ್ನ; ಸರಗಳ್ಳರನ್ನು ಚೇಸ್ ಮಾಡಿ ಸೆರೆಹಿಡಿದ ಪೊಲೀಸರು!
Published On - 8:59 pm, Mon, 13 December 21