AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಟಿ ದಾಳಿ ವೇಳೆ ಸಿಕ್ಕಿರುವ ಕೋಟ್ಯಂತರ ರೂ. ಹಿಂದೆ ಕಾಂಗ್ರೆಸ್​ ಇದೆ -ಶಾಸಕ ಜಿ.ಟಿ.ದೇವೇಗೌಡ

ಐಟಿ ದಾಳಿ ವೇಳೆ ಸಿಕ್ಕಿರುವ ಕೋಟ್ಯಂತರ ರೂ. ಹಿಂದೆ ಕಾಂಗ್ರೆಸ್​ ಇದೆ. ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಕೊಡಲು ಕಾಂಗ್ರೆಸ್ ಪಕ್ಷ ಸಂಗ್ರಹಿಸಿಟ್ಟಿದ್ದ ಹಣವದು. ನಮ್ಮ ರಾಜ್ಯದ ಸಮೃದ್ಧಿಯಾದ ಸಂಪತ್ತನ್ನು ಚುನಾವಣೆ ಮತ್ತು ಹೈಕಮಾಂಡ್ ನಾಯಕರಿಗೆ ಕೊಡಲು ಸಿದ್ಧ ಮಾಡಿದ್ದಾರೆ ಎಂದು ಜಿ.ಟಿ.ದೇವೇಗೌಡ ಆರೋಪಿಸಿದ್ದಾರೆ.

ಐಟಿ ದಾಳಿ ವೇಳೆ ಸಿಕ್ಕಿರುವ ಕೋಟ್ಯಂತರ ರೂ. ಹಿಂದೆ ಕಾಂಗ್ರೆಸ್​ ಇದೆ -ಶಾಸಕ ಜಿ.ಟಿ.ದೇವೇಗೌಡ
ಜಿಟಿ ದೇವೇಗೌಡ
Sunil MH
| Updated By: ಆಯೇಷಾ ಬಾನು|

Updated on: Oct 15, 2023 | 10:14 AM

Share

ಬೆಂಗಳೂರು, ಅ.15: ಪಂಚ ರಾಜ್ಯಗಳ ಚುನಾವಣೆ ಸಮೀಪ ಇರುವಾಗಲೇ ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು (IT Raid) ದಾಳಿ ನಡೆಸಿದ್ದು ಕೋಟಿ ಕೋಟಿ ಹಣ ಪತ್ತೆಯಾಗಿದೆ. ಗುತ್ತಿಗೆದಾರ ಅಂಬಿಕಾಪತಿಗೆ ಸೇರಿದ ಮೂರ್ನಾಲ್ಕು ಕಡೆ ಐಟಿ ಅಧಿಕಾರಿಗಳು ಸುದೀರ್ಘ ದಾಳಿ ನಡೆಸಿ 42 ಕೋಟಿ ಅಧಿಕ ಹಣ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಇನ್ನು ಮತ್ತೊಂದೆಡೆ ಬಿಲ್ಡರ್ ಸಂತೋಷ್​ ನಿವಾಸದ ಮೇಲೆ ಐಟಿ ತಂಡ ದಾಳಿ ನಡೆಸಿ 40 ಕೋಟಿಗೂ ಹೆಚ್ಚು ಹಣವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಈ ಅಕ್ರಮ ಹಣದ ಹಿಂದೆ ಕಾಂಗ್ರೆಸ್​ ಕೈಯಿದೆ (Congress) ಎಂಬ ಮಾತುಗಳು ಕೇಳಿಬರುತ್ತಿದ್ದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ (GT Devegowda) ಅವರು ಕೂಡ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಟಿವಿ9ಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ಐಟಿ ದಾಳಿ ವೇಳೆ ಸಿಕ್ಕಿರುವ ಕೋಟ್ಯಂತರ ರೂ. ಹಿಂದೆ ಕಾಂಗ್ರೆಸ್​ ಇದೆ. ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಕೊಡಲು ಕಾಂಗ್ರೆಸ್ ಪಕ್ಷ ಸಂಗ್ರಹಿಸಿಟ್ಟಿದ್ದ ಹಣವದು ಎಂದು ಜಿ.ಟಿ.ದೇವೇಗೌಡ ಆರೋಪಿಸಿದ್ದಾರೆ.

ನಮ್ಮ ರಾಜ್ಯದ ಸಮೃದ್ಧಿಯಾದ ಸಂಪತ್ತನ್ನು ಚುನಾವಣೆ ಮತ್ತು ಹೈಕಮಾಂಡ್ ನಾಯಕರಿಗೆ ಕೊಡಲು ಸಿದ್ಧ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎಟಿಎಂ ಸರ್ಕಾರವಾಗಿದೆ. ಒಂದೊಂದು ಕೋಟಿ ಬಾಕ್ಸ್ ಗಳು ಪತ್ತೆ ಆಗಿರುವುದನ್ನು ನೋಡಿದರೆ ಅದು ನಿಜವಾಗಿಯೂ ಚುನಾವಣೆಗೆ ಸಾಗಿಸಲು ಇಟ್ಟಿದ್ದ ಹಣ ಎಂಬುವುದು ಗೊತ್ತಾಗುತ್ತೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವರು ಹಣ ಸಂಗ್ರಹ ಮಾಡಲು ಶುರು ಮಾಡಿದ್ದಾರೆ. ಒಂದೊಂದು ಸಚಿವರಿಗೆ ಇಂತಿಷ್ಟು ಹಣ ಸಂಗ್ರಹಕ್ಕೆ ಟಾರ್ಗೆಟ್ ನೀಡಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ರಾಜ್ಯ ಚುನಾವಣೆ ಮತ್ತು ಲೋಕಸಭಾ ಹಣ ಸಂಗ್ರಹ ಮಾಡುತ್ತಿದೆ. ಹೀಗಾಗಿ ರಾಜ್ಯವನ್ನು ಕತ್ತಲೆಗೆ ದೂಡಿ ಹಣ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಗೆ ಕಾಂಗ್ರೆಸ್ ಬೇಕಾಗಿಲ್ಲ. ಐದು ಗ್ಯಾರೆಂಟಿಗಳನ್ನ ಹೇಳಿ ಮತ ಹಾಕಿಸಿಕೊಂಡು ರಾಜ್ಯವನ್ನು ಕತ್ತಲೆಗೆ ತಳ್ಳಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಐಟಿ ದಾಳಿ; ಬಿಲ್ಡರ್ ಸಂತೋಷ್​ ನಿವಾಸದಲ್ಲಿ 40 ಕೋಟಿ ಪತ್ತೆ, ಮಾಜಿ ಎಂಎಲ್​ಸಿ ಹೆಸರು ತಳುಕು

ಮೆಗಾ ರೇಡ್ ಮುಗಿಸಿ 40 ಕೋಟಿಗೂ ಅಧಿಕ ಹಣದ ಮೂಲಕ್ಕೆ ಶೋಧ

ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲಿನ ಸುದೀರ್ಘ ಐಟಿ ದಾಳಿ 42 ಗಂಟೆಗಳ ಬಳಿಕ ಅಂತ್ಯವಾಗಿದೆ. ಅಂಬಿಕಾಪತಿಗೆ ಸೇರಿದ ಮೂರ್ನಾಲ್ಕು ಕಡೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು 40 ಕೋಟಿಗೂ ಅಧಿಕ ಹಣ ಗಂಟೆಗಳ ಕಾಲ ನಿರಂತರ ಶೋಧ ನಡೆಸಿ ಸುಮಾರು 40 ಕೋಟಿಗೂ ಅಧಿಕ ಹಣವನ್ನ ಪತ್ತೆ ಹಚ್ಚಿದ್ದಾರೆ. ಸುಲ್ತಾನ್ ಪಾಳ್ಯದ ಪ್ಲಾಟ್ ಹಾಗೂ ಸಮೀಪದಲ್ಲೆ ಇದ್ದ ಮನೆಯಲ್ಲಿ ಶೋಧ ಮುಗಿಸಿದ್ದ ಐಟಿ ಅಧಿಕಾರಿಗಳು ಪ್ಲಾಟ್ ನಲ್ಲಿದ್ದ 42 ಕೋಟಿ ಹಣವನ್ನ ಜಪ್ತಿ ಮಾಡಿ ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿದ್ರು.

ಅದ್ರೆ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ಅಂಬಿಕಾಪತಿ ಮನೆಯಲ್ಲಿ ಮಾತ್ರ ಐಟಿ ಆಧಿಕಾರಿಗಳು ದಾಳಿ ಮುಂದುವರೆಸಿದ್ದರು. ಸುದೀರ್ಘ 42 ಗಂಟೆಗಳ ಕಾಲ ಶೋಧ ನಡೆಸಿದ ಐಟಿ ಆಧಿಕಾರಿಗಳು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ದಾಳಿ ಅಂತ್ಯಗೊಳಿಸಿ ವಾಪಸ್ ತೆರಳಿದರು. ಈ ವೇಳೆ ಇದಕ್ಕು ಮುನ್ನ ಮನೆಯಲ್ಲಿ ಪತ್ತೆಯಾದ ದಾಖಲೆಗಳು, ಚಿನ್ನಾಭರಣ, ಆಸ್ತಿಪತ್ರಗಳ ಮೌಲ್ಯ ಮಾಪನ ನಡೆಸಿದ ಆಧಿಕಾರಿಗಳು ಅವುಗಳ ಮಹಜರು ಪ್ರಕ್ರಿಯೆ ನಡೆಸಿದರು. ನಂತರ ಕೆಲವು ಅಗತ್ಯ ದಾಖಲೆಗಳ ಸಮೇತ ಐಟಿ ಅಧಿಕಾರಿಗಳು ಕಚೇರಿಗೆ ವಾಪಸ್ ಆಗಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?