ಸೋನಿಯಾ ಗಾಂಧಿಗೆ ಇಡಿ ನೋಟಿಸ್ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ; ಫ್ರೀಡಂಪಾರ್ಕ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇಡಿ ನೋಟಿಸ್ ಖಂಡಿಸಿ ನಾಳೆ (ಜುಲೈ 21) ಕಾಂಗ್ರೆಸ್ ಬೆಂಗಳೂರಿನ ಫ್ರೀಡಂಪಾರ್ಕ್ ಸುತ್ತಮುತ್ತ ಪ್ರತಿಭಟನೆ ಮಾಡುತ್ತಿದ್ದು, ಈ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರಿಗೆ ಇಡಿ (ED) ನೋಟಿಸ್ ಖಂಡಿಸಿ ನಾಳೆ (ಜುಲೈ 21) ಕಾಂಗ್ರೆಸ್ (Congress) ಬೆಂಗಳೂರಿನ (Bengaluru) ಫ್ರೀಡಂಪಾರ್ಕ್ (Freedom Park) ಸುತ್ತಮುತ್ತ ಪ್ರತಿಭಟನೆ ಮಾಡುತ್ತಿದ್ದು, ಈ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಐವರು ಎಸಿಪಿ, 15 ಇನ್ಸ್‌ಪೆಕ್ಟರ್, 30 ಪಿಎಸ್‌ಐ, 600 ಪೊಲೀಸರು ಮತ್ತು ಹೆಚ್ಚುವರಿಯಾಗಿ 5 ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗುತ್ತದೆ.
ನಾಳೆ ಧರಣಿಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಭಾಗಿ ಸಾಧ್ಯತೆ ಇದ್ದು, ಸಂಚಾರ ದಟ್ಟಣೆ ಆಗದಂತೆ ಟ್ರಾಫಿಕ್ ಪೊಲೀಸರು ಕೂಡಾ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಇಬ್ಬರು ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ೬೦ ಟ್ರಾಫಿಕ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಪ್ರತಿಭಟನೆ ವೇಳೆ ಸಾರ್ವಜನಿಕ ವಾಹನಗಳ ರೂಟ್ ಡೈವರ್ಷನ್ ಸದ್ಯಕ್ಕೆ ಇಲ್ಲ. ಪ್ರತಿಭಟನಾ ಸಮಯದ ಸ್ಥಿತಿಗತಿಗಳ ಗಮನಿಸಿಕೊಂಡು ಸಾರ್ವಜನಿಕ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದು
Published On - 10:25 pm, Wed, 20 July 22