2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಬರೆದಿಟ್ಟುಕೊಳ್ಳಿ; ಹೆಚ್ಡಿಕೆಗೆ ಸವಾಲ್ ಹಾಕಿದ ಡಿಕೆ ಶಿವಕುಮಾರ್
ರಾಮನಗರ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬರೆದಿಟ್ಟುಕೊಳ್ಳಲಿ, ದಾಖಲೆ ಬೇಕಾಗುತ್ತೆ. 2028ಕ್ಕೆ ಇದೇ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರು, ಜುಲೈ.27: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಅಂತಾ ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಈ ವಿಚಾರ ರಾಜಕೀಯ ವಲಯದಲ್ಲಿ ಭಾರಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಅಂತಾ ನಾಮಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದರು. ಸ್ವಲ್ಪ ದಿನ ಖುಷಿಯಾಗಿರಲಿ 2028ಕ್ಕೆ ಮತ್ತೆ ಮರುನಾಮಕರಣ ಮಾಡ್ತೀವಿ ಎಂದಿದ್ದರು. ಸದ್ಯ ಈಗ ಹೆಚ್ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ಬರೆದಿಟ್ಟುಕೊಳ್ಳಲಿ, ದಾಖಲೆ ಬೇಕಾಗುತ್ತೆ. 2028ಕ್ಕೆ ಇದೇ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಎಷ್ಟೇ ಒಳ್ಳೆಯದು ಮಾಡಿದ್ರೂ ನನ್ನ ಸರ್ವನಾಶವನ್ನೇ ಬಯಸುತ್ತಾರೆ. ಕುಮಾರಸ್ವಾಮಿ ನನ್ನ ಸರ್ವನಾಶವನ್ನೇ ಬಯಸಿಕೊಂಡು ಬಂದಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಯವರ ಆಚಾರ, ವಿಚಾರ ಎಲ್ಲವೂ ಗೊತ್ತಿದೆ. ರಾಮನಗರವನ್ನು ನಾವು ಟಚ್ ಮಾಡ್ತಿಲ್ಲ, ಅದು ಅಲ್ಲೇ ಇರಲಿದೆ. ಅವರು ರಾಮನಗರಕ್ಕೆ ಬಂದು ಅಕ್ರಮ ಮಾಡಲು ಪ್ರಯತ್ನ ಮಾಡಿದ್ರು.
ರಾಮನಗರ, ಚನ್ನಪಟ್ಟಣ, ಮಾಗಡಿ ಎಲ್ಲರೂ ನಮ್ಮವರು. ಕೆಂಗಲ್ ಹನುಮಂತಯ್ಯ ಬೆಂಗಳೂರಿಗೆ ಬಂದು ವಿಧಾನಸೌಧ ಕಟ್ಟಿದ್ರು. ದೇವೇಗೌಡರು, ಕುಮಾರಸ್ವಾಮಿ ಕೂಡ ಬೆಂಗಳೂರಿಗೆ ಬಂದರು. ನಮ್ಮ ಹಿರಿಯರು ಇಟ್ಟಿದ್ದ ಹೆಸರು ಇರಬೇಕು. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹೆಸರಿಡಲಾಗಿದೆ. 2028ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುತ್ತೆ. ಬರೆದಿಟ್ಟುಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಹೊರಗಿನವರಾಗಿರುವ ಕುಮಾರಸ್ವಾಮಿ ರಾಮನಗರದಲ್ಲಿ ಕೇವಲ ರಾಜಕಾರಣ ಮಾಡಿದ್ದಾರೆ: ಇಕ್ಬಾಲ್ ಹುಸ್ಸೇನ್
ಹೆಚ್ಡಿಕೆ ಹೇಳಿದ್ದೇನು?
ಭೂಮಿ ಇರೋವರೆಗೂ ರಾಮನಗರ ಹೆಸರು ತೆಗೆಯಲು ಆಗಲ್ಲ. ಭೂಮಿ ಬೆಲೆ ಏರಿಸಿಕೊಳ್ಳೋಕಾ ಇದು ಮಾಡ್ತಿರೋದು. ಸ್ವಲ್ಪ ದಿನ ಖುಷಿಯಾಗಿರಲಿ 2028ಕ್ಕೆ ಮತ್ತೆ ಮರುನಾಮಕರಣ ಮಾಡ್ತೀವಿ ಎಂದಿದ್ದರು.
ಇನ್ನು ರಾಮನಗರ ಎಲ್ಲಿದ್ಯೋ ಅಲ್ಲೇ ಇರುತ್ತೆ. ಜಿಲ್ಲಾಡಳಿತವೂ ರಾಮನಗರ ಪಟ್ಟಣದಲ್ಲೇ ಇರುತ್ತೆ. ಆದ್ರೆ, ಇನ್ಮುಂದೆ ರಾಮನಗರಕ್ಕಿರುವ ಜಿಲ್ಲೆ ಎಂಬ ಬಿರುದು ಕಳಚಿಕೊಳ್ಳಲಿದೆ. ರಾಮನಗರ ಅನ್ನೋ ಬದಲು, ಸರ್ಕಾರಿ ದಾಖಲೆಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಅಂತಾ ನಮೂದಾಗಲಿದೆ. ಉತ್ತರ ಕನ್ನಡಕ್ಕೆ ಹೇಗೆ ಕಾರವಾರ ಇದ್ಯೋ ಅದೇ ರೀತಿ ರಾಮನಗರ ಜಿಲ್ಲಾ ಕೇಂದ್ರವಾಗಷ್ಟೇ ಉಳಿಯಲಿದೆ. ಇದು ಗ್ರೇಟರ್ ಬೆಂಗಳೂರಿಗೆ ಅನುಕೂಲವಾಗಲಿದೆ. ರಾಮನಗರ ಅಭಿವೃದ್ಧಿಯಾಗಲಿದೆ ಅನ್ನೋದು ಕಾಂಗ್ರೆಸ್ ನಾಯಕರ ವಾದ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ