ನಿರ್ಮಾಣ ಹಂತದ ರಾಜಕಾಲುವೆ ಸ್ಲ್ಯಾಬ್ ಬಿದ್ದು ನಾಲ್ಕು ಕಾರ್ಮಿಕರಿಗೆ ಗಾಯ | KSRTC ಬಸ್​ನಲ್ಲಿ​​​ ಪ್ರಯಾಣಿಸುತ್ತಿದ್ದ ಮಹಿಳೆ  ಮೇಲೆ ಹಲ್ಲೆ

| Updated By: ವಿವೇಕ ಬಿರಾದಾರ

Updated on: May 24, 2022 | 3:03 PM

ನಿರ್ಮಾಣ ಹಂತದ ರಾಜಕಾಲುವೆ ಮೇಲ್ಭಾಗದ ಸ್ಲ್ಯಾಬ್ ಬಿದ್ದು ನಾಲ್ಕು ಕಾರ್ಮಿಕರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಶ್ರೀನಗರದ ಕಾಳಿದಾಸ ಬಸ್ ನಿಲ್ದಾಣದ ಬಳಿ ನಡೆದಿದೆ. 

ನಿರ್ಮಾಣ ಹಂತದ ರಾಜಕಾಲುವೆ ಸ್ಲ್ಯಾಬ್ ಬಿದ್ದು ನಾಲ್ಕು ಕಾರ್ಮಿಕರಿಗೆ ಗಾಯ | KSRTC ಬಸ್​ನಲ್ಲಿ​​​ ಪ್ರಯಾಣಿಸುತ್ತಿದ್ದ ಮಹಿಳೆ  ಮೇಲೆ ಹಲ್ಲೆ
ನಿರ್ಮಾಣ ಹಂತದಲ್ಲಿರುವ ರಾಜಕಾಲುವೆ ಸ್ಲ್ಯಾಬ್ ಕುಸಿತ
Follow us on

ಬೆಂಗಳೂರು: ನಿರ್ಮಾಣ ಹಂತದ ರಾಜಕಾಲುವೆ (Rjakaluve) ಮೇಲ್ಭಾಗದ ಸ್ಲ್ಯಾಬ್ ಬಿದ್ದು ನಾಲ್ಕು ಕಾರ್ಮಿಕರು ಗಾಯಗೊಂಡಿರುವ ಘಟನೆ ಬೆಂಗಳೂರಿನ (Bengaluru) ಶ್ರೀನಗರದ ಕಾಳಿದಾಸ ಬಸ್ ನಿಲ್ದಾಣದ ಬಳಿ ನಡೆದಿದೆ.  ಓರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಳಗಳಾಗಿವೆ. ಕೋಲ್ಕತ್ತಾ ಮೂಲದ ಕಾರ್ಮಿಕ ಮೀರ್ ಖಾಸಿಂ(24)ಗೆ ಗಂಭೀರ ಗಾಯವಾಗಿದ್ದು, ಆಸಿಬುಲ್(22), ಶಿವಪ್ರಸಾದ್(33), ರೆಹಮಾನ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ.

ಇದನ್ನು ಓದಿ: ಜನರು ದೂರು ಸಲ್ಲಿಸಲು ವಾಟ್ಸಪ್ ನಂಬರ್ ಬಿಡುಗಡೆಗೊಳಿಸಿದ ಬೆವಿಕಂ

ಬೆಂಗಳೂರಿನ ಶ್ರೀನಗರದ ಕಾಳಿದಾಸ ಬಸ್ ಸ್ಟಾಪ್ ಬಳಿ ರಾಜಕಾಲುವೆ ಮೇಲ್ಭಾಗದ ಸ್ಲ್ಯಾಬ್​ನ  ಕಾಂಕ್ರೀಟ್ ಕೆಲಸ ನಡೆಯುತ್ತಿತ್ತು. ಮೇಲೆ ನಿಂತು ಏಳು ಜನ ಕಾರ್ಮಿಕರು ಕಾಂಕ್ರೀಟ್ ಹಾಕುವ ವೇಳೆ ಸ್ಲ್ಯಾಬ್ ಕುಸಿದಿದೆ.  ಈ ವೇಳೆ ಸಿಮೆಂಟ್ ಹಾಗೂ ಕಬ್ಬಿಣದ ಸರಳುಗಳ ಮಧ್ಯೆ  ಕಾರ್ಮಿಕರು ಸಿಲುಕಿದ್ದರು.  ಅವಘಡ ಕಂಡು ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳಿಯರು ಸರಳುಗಳ ಮಧ್ಯೆ ಸಿಲುಕಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದ್ದ, ಮತ್ತೊಬ್ಬನ ಕಾಲು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ. ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ
GT vs RR: ಗೆದ್ದರೆ ಫೈನಲ್​ಗೆ, ಸೋತರೆ ನೋ ಟೆನ್ಶನ್..!
New Book: ಅಚ್ಚಿಗೂ ಮೊದಲು: ಕೆ. ನಲ್ಲತಂಬಿ ಅನುವಾದಿಸಿದ ‘ಮತ್ತೊಂದು ರಾತ್ರಿ’, ‘ಬಾಪೂ ಹೆಜ್ಜೆಗಳಲ್ಲಿ’, ‘ಗುಡಿ ಗಂಟೆ’ ಸದ್ಯದಲ್ಲೇ ಬಿಡುಗಡೆ
Infinix Hot 12 Play: 6000mAh ಬ್ಯಾಟರಿಯ ಹೊಸ ಸ್ಮಾರ್ಟ್​​ಫೋನ್ ಬಿಡುಗಡೆ: ಬೆಲೆ ಕೇವಲ 8,499 ರೂ.
‘ಶೂಟಿಂಗ್ ಮುಗಿದಿದೆ, ಡಬ್ಬಿಂಗ್ ಶುರುವಾಗುತ್ತಿದೆ’; ‘ಕಬ್ಜ’ ಬಗ್ಗೆ ಆರ್​.ಚಂದ್ರು ಮಾತು

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ (MLA Ravi Subramanya) ಭೇಟಿ ನೀಡಿದ್ದಾರೆ. ಆರ್ ಎಂಐ ಇನ್ಫ್ರಾಸ್ಟಷ್ಚರ್ ನಿಂದ, ಕಾಂಟ್ರಾಕ್ಟರ್ ಮಹೇಶ್ ರೆಡ್ಡೆ ರಿಂದ ಕಾಮಗಾರಿ ನಡೆಯುತ್ತಿತ್ತು.

ಇದನ್ನು ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ವಿಚಾರಣೆ ಮೇ 26ಕ್ಕೆ ಮುಂದೂಡಿದ ವಾರಾಣಸಿ ಜಿಲ್ಲಾ ಕೋರ್ಟ್‌

ಬೆಂಗಳೂರು:  ಇಂದು (ಮೇ 24)ರಂದು ನಸುಕಿನ ಜಾವ KSRTC ಬಸ್​ನಲ್ಲಿ​​​ ಪ್ರಯಾಣಿಸುತ್ತಿದ್ದ ಒಂಟಿ ಮಹಿಳೆ  ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಟಿ.ದಾಸರಹಳ್ಳಿ ಬಳಿ  ನಡೆದಿದೆ. KSRTC ರಾಜಹಂಸ ಸ್ಲೀಪರ್ ಕೋಚ್ ಬಸ್‌ ಕಂಡಕ್ಟರ್​​  ರವಿಕುಮಾರ್ ಸಿರಾಜ್ ಉನ್ನಿಸಾ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳೆ ಚಿಕ್ಕಮಗಳೂರಿನ ಕೊಪ್ಪದಿಂದ ದಾಸರಹಳ್ಳಿಗೆ ಬರುತ್ತಿದ್ದಳು. ಟಿ.ದಾಸರಹಳ್ಳಿ ಬಸ್ ನಿಲ್ದಾಣದಲ್ಲಿ ಮಹಿಳೆ ಇಳಿಯಲು ತಡವಾಗಿದ್ದಕ್ಕೆ ಕಂಡೆಕ್ಟರ್ ಹಲ್ಲೆ ಮಾಡಿದ್ದಾನೆ. ಮಹಿಳೆಯ ಮುಖ, ಹೊಟ್ಟೆಗೆ ಶೂ ಕಾಲಿನಿಂದ ಒದ್ದು, ಹಲ್ಲೆ ಮಾಡಿದ್ದಾನೆ. ಅಲ್ಲದೇ ಲಗೇಜ್ ಸಹಿತ ಮಕ್ಕಳನ್ನು ಇಳಿಸಿಕೊಳ್ಳಲು ತಡವಾದ ಹಿನ್ನೆಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆ ಮೇಲೆ ಮಾಡಿದ್ದಾನೆ. ಕಂಡಕ್ಟರ್​​ ರವಿಕುಮಾರ್ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶಿಸ್ತು ತೋರಿದ ಕಂಡಕ್ಟರ್​​​ ರವಿಕುಮಾರ್​ನನ್ನು ಬೆಂಗಳೂರು ಕೇಂದ್ರೀಯ ಸಾರಿಗೆ ವಿಭಾಗ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Published On - 3:03 pm, Tue, 24 May 22