ಬೆಂಗಳೂರಿಗೆ ಜಲಕ್ಷಾಮದ ಮಧ್ಯೆ ಕಲುಷಿತ ನೀರಿನ ಸಂಕಷ್ಟ; ಮಣ್ಣು, ತ್ಯಾಜ್ಯಮಿಶ್ರಿತ ನೀರಿನಿಂದ ಶಾಂತಿಲಾಲ್ ಲೇಔಟ್ ಜನರು ಹೈರಾಣು
ರಾಜಧಾನಿ ಬೆಂಗಳೂರಲ್ಲಿ ಒಂದೆಡೆ ನೀರಿನ ಸಮಸ್ಯೆ ತಾಂಡವವಾಡುತ್ತಿದ್ರೆ, ಈ ಊರಿನ ಜನರಿಗೆ ಇರುವ ಬೋರ್ವೆಲ್ ನೀರು ಕೂಡ ವಿಷವಾಗಿ ಪರಿಣಮಿಸಿದೆ. ಬೆಂಗಳೂರಿನ ಸೀಗೆಹಳ್ಳಿಯ ಶಾಂತಿಲಾಲ್ ಲೇಔಟ್ ಜನರು ನೀರಿಲ್ಲದೇ ಪರದಾಡ್ತಿದ್ದಾರೆ. ಇರುವ ಒಂದು ಬೋರ್ವೆಲ್ನಲ್ಲಿ ಕಲುಷಿತ ನೀರು ಬರುತ್ತಿರುವುದು ಜನರನ್ನ ಕಂಗಾಲಾಗಿಸಿದೆ. ಇತ್ತ ಬಿಬಿಎಂಪಿ ಕಸ ಸಂಗ್ರಹ ಘಟಕದಿಂದ ಅಂತರ್ಜಲ ಮಲಿನವಾಗ್ತಿದೆ ಎನ್ನುವ ಆರೋಪ ಕೇಳಿಬರ್ತಿದ್ದು, ಜನರು ಕಂಗಾಲಾಗಿದ್ದಾರೆ.
ಬೆಂಗಳೂರು, ಮಾ.10: ಸಿಲಿಕಾನ್ ಸಿಟಿ ಬೆಂಗಳೂರಿನ(Bengaluru) ಹಲವೆಡೆ ನೀರಿನ ಅಭಾವದಿಂದ ಜನರು ಕಂಗಾಲಾಗಿದ್ದಾರೆ.ಟಿವಿ9 ಕೂಡ ನೀರಿನ ಸಮಸ್ಯೆ(Water Crisis) ಬಗ್ಗೆ ನಿರಂತರ ವರದಿ ಮಾಡ್ತಿದ್ದು, ನೀರಿಲ್ಲ ನೀರಿಲ್ಲ ಅಭಿಯಾನದಲ್ಲಿ ಸೀಗೆಹಳ್ಳಿಯ ಶಾಂತಿಲಾಲ್ ಲೇ ಔಟ್ ಜನರ ಸಂಕಷ್ಟ ಅನಾವರಣಾಗಿದೆ. ಈ ಲೇ ಔಟ್ ನಿವಾಸಿಗಳಿಗೆ ಇರೋ ಒಂದು ಬೋರ್ ವೆಲ್ ನಿಂದ ಆಗೊಮ್ಮೆ ಈಗೊಮ್ಮೆ ನೀರು ಸಫ್ಲೆ ಆಗ್ತಿದೆ, ಆದ್ರೆ ಬರೋ ನೀರಲ್ಲಿ ತ್ಯಾಜ್ಯ ಮಿಕ್ಸ್ ಆಗಿ ಬರ್ತಿದ್ದು ಇದರಿಂದ ಜನರು ಕಂಗಾಲಾಗಿದ್ದಾರೆ
ಇನ್ನು ಈ ಲೇಔಟ್ ಹಿಂಭಾಗದಲ್ಲಿ ಬಿಬಿಎಂಪಿಯ ಕಸ ಸಂಗ್ರಹ ಘಟಕ ಇದೆ. ಈ ಘಟಕದಿಂದ ಅಂತರ್ಜಲ ಕಲುಷಿತವಾಗಿದೆ ಎಂದು ಜನರು ಆರೋಪಿಸುತ್ತಿದ್ದು, ಅಕ್ಕ-ಪಕ್ಕದ ಬೋರ್ವೆಲ್ಗಳ ನೀರಿಗೆ ವಿಷ ಬರುತ್ತಿದೆ ಎಂದು ಜನರು ಕಿಡಿಕಾರುತ್ತಿದ್ದಾರೆ. ಜೊತೆಗೆ ಕಲುಷಿತ ನೀರಿನಿಂದ ಬಹುತೇಕರಲ್ಲಿ ಚರ್ಮ ಸೋಂಕು ಬರುತ್ತಿದೆ. ಸರ್ಕಾರ ಗ್ಯಾರಂಟಿ ಕೊಡೋದು ಬೇಡ, ನಮಗೆ ಶುದ್ಧ ನೀರು ಕೊಡಲಿ ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ:Bengaluru Water Crisis: ನೀರಿನ ಬಿಕ್ಕಟ್ಟು ಎದುರಿಸಲು ಹೇಗಿದೆ ಬೆಂಗಳೂರಿನ ಐಟಿ ಕಂಪನಿಗಳ ಸಿದ್ಧತೆ
ಇತ್ತ ಲೇಔಟ್ ಜನರ ನೀರಿನ ಸಮಸ್ಯೆ ಬೆನ್ನಲ್ಲೆ ಗ್ರಾಮ ಪಂಚಾಯಿತಿಯಿಂದ ಹೊಸ ಬೋರ್ವೆಲ್ ಕೊರೆಸೋಕೆ ಪಾಯಿಂಟ್ ಗುರುತು ಮಾಡಿದ್ದಾರೆ. ಆದ್ರೆ, ಆ ಜಾಗದಲ್ಲೂ ಕಲುಷಿತ ನೀರು ಬರಬಹುದು ಎಂದು ಜನರು ಕಂಗಾಲಾಗಿದ್ದಾರೆ. ಅತ್ತ ಟ್ಯಾಂಕರ್ ನೀರಿಗೂ ದುಬಾರಿ ಕೊಡಬೇಕಾದ ಸ್ಥಿತಿಯಿಂದ ತತ್ತರಿಸಿರುವ ಜನರಿಗೆ, ಈ ಕಲುಷಿತ ನೀರಿನಿಂದ ಅಧಿಕಾರಿಗಳು ಮುಕ್ತಿ ಕೊಡುತ್ತಾರಾ ಎನ್ನುವುದನ್ನ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ