ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್ (Traffic Control) ಕುರಿತು ಸಮನ್ವಯ ಸಮಿತಿ ಸದಸ್ಯರಿಂದ ಪರಿಶೀಲನೆ ನಡೆಯುತ್ತಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದು, ಬೆಸ್ಕಾಂ ಕಂಬ ಬದಲಾಯಿಸುವುದು, ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದ್ದು, ಫುಟ್ಪಾತ್ನಲ್ಲಿರುವ ಅಂಗಡಿಗಳ ತೆರವು ಬಗ್ಗೆಯೂ ಚರ್ಚೆ ಮಾಡಲಾಗುತ್ತಿದೆ. ಈದ್ಗಾ ಮೈದಾನ ಸಂಬಂಧ ಹಲವು ಬಾರಿ ಚರ್ಚೆ ನಡೆದಿದೆ. ನಾವು ಯಾರಿಗೂ ನೋಟಿಸ್ ನೀಡುತ್ತಿಲ್ಲ. ಚಾಮರಾಪೇಟೆ ಮೈದಾನದ ವಿಚಾರ ಬಗ್ಗೆ ಜೆಸಿ ಗಮನಹರಿಸುತ್ತಾರೆ. ಖಾತೆ ಬದಲಾವಣೆ ವಿಚಾರವಾಗಿ ಜೆಸಿ ಗಮನ ಕೊಡುತ್ತಾರೆ. ಬಕ್ರೀದ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇದೆ. ನಮಾಜ್ ಮಾಡಲು ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ. ಹಾಗಾಗಿ ಪ್ರಾರ್ಥನೆ ಮಾಡಲು ಯಾವುದೇ ಅಡ್ಡಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ; Rohit Sharma: ಹಿಟ್ಮ್ಯಾನ್ ಈಸ್ ಬ್ಯಾಕ್: ಇಂಗ್ಲೆಂಡ್ಗೆ ಭಯ ಶುರು..!
ಕುರಿ, ಮೇಕೆ ಮಾರಾಟಕ್ಕೆ ಕೆಲ ಸಂಘಟನೆಗಳು ವಿರೋಧ:
ಈದ್ಗಾ ಮೈದಾನ ವೇಳೆ ರೋಡ್ಗಳಲ್ಲಿ ಪ್ರಾರ್ಥನೆ ವಿಚಾರವಾಗಿ ಮಾತನಾಡಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಜತೆ ಚರ್ಚೆ ಮಾಡಲಾಗುತ್ತದೆ. ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೀಡಾಗಿರುವ ಹಿನ್ನೆಲೆ, ಮೈದಾನದಲ್ಲಿ ಕುರಿ ಮೇಕೆ ಮಾರಾಟ ಮಾಡಿದ್ದಕ್ಕೆ ಕೆಲ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಇದಕ್ಕೂ ಬಿಬಿಎಂಪಿಗೂ ಸಂಬಂಧ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ನುಣಿಚಿಕೊಂಡರು. ಕುರಿ, ಮೇಕೆ ಮಾರಾಟದಿಂದ ಆಗಿರುವ ತ್ಯಾಜ್ಯವನ್ನು ಬಿಬಿಎಂಪಿ ಕ್ಲೀನ್ ಮಾಡೋದಿಲ್ಲ. ವಿವಾದ ಕೋರ್ಟ್ನಲ್ಲಿ ಇರುವುದರಿಂದ ನಾವು ಮೈದಾನದ ವಿಚಾರಕ್ಕೆ ಈಗ ಎಂಟ್ರಿಯಾಗಲ್ಲ. ಹೀಗಾಗಿ ಕುರಿ, ಮೇಕೆ ಸಂತೆಯಿಂದ ಆಗಿರುವ ಗಲೀಜನ್ನು ಪಾಲಿಕೆ ಸ್ವಚ್ಛ ಮಾಡಲ್ಲ. ಜುಲೈ 10ಕ್ಕೆ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆ, ಟ್ರಾಫಿಕ್ ಸಮಸ್ಯೆ ಉಂಟಾಗುವಂತೆ ಹಬ್ಬದ ಪ್ರಾರ್ಥನೆ ಮಾಡುವ ಹಾಗಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ರಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ. ಹಬ್ಬದ ಪ್ರಾರ್ಥನೆಗೆ ರಸ್ತೆ ಕ್ಲೋಸ್ ಮಾಡುವುದು, ಟ್ರಾಫಿಕ್ ಸಿಗ್ನಲ್ನಲ್ಲಿ ಚಾಪೆ ಹಾಸುವುದಕ್ಕೆ ಅವಕಾಶ ಇಲ್ಲ. ಪೊಲೀಸ್ ಇಲಾಖೆಯೊಂದಿಗೆ ಈ ಬಗ್ಗೆ ಮಾತನಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ವ್ಹೀಲಿಂಗ್ ವಿರುದ್ಧ ವಿಶೇಷ ಅಭಿಯಾನ:
ನಗರದಲ್ಲಿ ವ್ಹೀಲಿಂಗ್ ವಿರುದ್ಧ ವಿಶೇಷ ಅಭಿಯಾನ ಮಾಡಲಾಗಿದೆ. ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದು, ಕಳೆದ ವಾರ 14 ವ್ಹೀಲಿಂಗ್ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ದೂರು ಆಧರಿಸಿ 12 ಕೇಸ್ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ 5-10 ಲಕ್ಷದವರೆಗೂ ಬಾಂಡ್ ಬರೆಸಿಕೊಳ್ಳುತ್ತೇವೆ. ವ್ಹೀಲಿಂಗ್ ಮಾಡುವವರ ಪೋಷಕರನ್ನು ಕೌನ್ಸೆಲಿಂಗ್ ಮಾಡುತ್ತಿದ್ದೇವೆ. ಬೆಂಗಳೂರಿನ ಎಲ್ಲ ಕಾಲೇಜು ಆಡಳಿತ ಮಂಡಳಿಗೆ ತಿಳಿ ಹೇಳಲಾಗಿದೆ. ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ದ್ವಿಚಕ್ರ ವಾಹನ ತರುವಂತಿಲ್ಲ. ಯಾಕೆಂದರೆ ಡಿಎಲ್ ಪಡೆಯಲು ಇನ್ನೂ ಅರ್ಹತೆ ಆಗಿರೋದಿಲ್ಲ. ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಸಂಖ್ಯೆಗಳು ಸಿಗುತ್ತಿವೆ. ನಕಲಿ ವಾಹನಗಳ ಮಾಲೀಕರನ್ನ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದೇವೆ. ಜೂನ್ನಲ್ಲಿ 22 ಸವಾರರು ಮದ್ಯಸೇವಿಸಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಯಾರೂ ಕೂಡ ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ಹೇಳಿದರು.
ಇದನ್ನೂ ಓದಿ; Cloudburst: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಹಠಾತ್ ಪ್ರವಾಹ, ಭೂ ಕುಸಿತ
Published On - 1:00 pm, Wed, 6 July 22