ಕೊರೊನಾ 3ನೇ ಅಲೆಗೂ ಮುನ್ನವೇ ಸಿಲಿಕಾನ್ ಸಿಟಿ ಆಸ್ಪತ್ರೆಗಳಲ್ಲಿ ಬೆಡ್​​ಗಳು ಭರ್ತಿ; ಒಂದು ವಾರದಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಸೋಂಕು

| Updated By: preethi shettigar

Updated on: Sep 18, 2021 | 9:43 AM

ಕೆಸಿ ಜನರಲ್, ವಿಕ್ಟೋರಿಯಾ, ಬೌರಿಂಗ್ ವಾಣಿ ವಿಲಾಸ್ ಸೇರದಂತೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಗೆ ನಿತ್ಯ 140-150 ಮಕ್ಕಳು ದಾಖಲಾಗುತ್ತಿದ್ದಾರೆ.

ಕೊರೊನಾ 3ನೇ ಅಲೆಗೂ ಮುನ್ನವೇ ಸಿಲಿಕಾನ್ ಸಿಟಿ ಆಸ್ಪತ್ರೆಗಳಲ್ಲಿ ಬೆಡ್​​ಗಳು ಭರ್ತಿ; ಒಂದು ವಾರದಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಸೋಂಕು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಮೂರನೇ ಅಲೆಗೂ ಮುನ್ನವೇ ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ಐಸಿಯೂ ಬೆಡ್​ಗಳು ಭರ್ತಿಯಾಗಿವೆ. ಇದಕ್ಕೆ ಕಾರಣ ಕಳೆದ ಒಂದು ವಾರದಿಂದ ಮಕ್ಕಳಲ್ಲಿ ವೈರಲ್ ಸೋಂಕು ಕಾಣಿಸಿಕೊಳ್ಳುತ್ತಿರುವುದೇ ಆಗಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಬೆಡ್​ಗಳು ಬಹುತೇಕ ಭರ್ತಿಯಾಗಿದೆ.

ಕೆಸಿ ಜನರಲ್, ವಿಕ್ಟೋರಿಯಾ, ಬೌರಿಂಗ್ ವಾಣಿ ವಿಲಾಸ್ ಸೇರದಂತೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಗೆ ನಿತ್ಯ 140-150 ಮಕ್ಕಳು ದಾಖಲಾಗುತ್ತಿದ್ದಾರೆ. ಹೀಗಾಗಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 36 ಬೆಡ್​ಗಳನ್ನು ಮೀಸಲು ಇಡಲಾಗಿತ್ತು. ಈ ಪೈಕಿ 36 ಬೆಡ್​ಗಳು ಸಹ ಭರ್ತಿಯಾಗಿದೆ. ಇನ್ನು ಐಸಿಯು 10 ಬೆಡ್​ಗಳಲ್ಲಿ ಆರು ಭರ್ತಿಯಾಗಿದೆ. ಶೇಕಡಾ 50 ರಷ್ಟು ಮಕ್ಕಳಿಗೆ ಉಸಿರಾಟದ ಸಮಸ್ಯೆ ಕಂಡುಬಂದಿದೆ.

ವಾಣಿ ವಿಲಾಸ ಆಸ್ಪತ್ರೆಯಲ್ಲಿಯೂ ಶೇ. 60 ರಷ್ಟು ಮಕ್ಕಳ ಬೆಡ್ ಭರ್ತಿಯಾಗಿದೆ
ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ 110 ಬೆಡ್​ಗಳನ್ನು ಮೀಸಲಿರಸಲಾಗಿತ್ತು. ಇದೀಗ 110 ಬೆಡ್​ಗಳ ಪೈಕಿ 70 ಬೆಡ್​ಗಳು ಭರ್ತಿಯಾಗಿದೆ. ಬೇರೆ ಬೇರೆ ಇನ್ಫಕ್ಷನ್​ಗೆ ಸಂಬಂಧಿಸಿದಂತೆ ಇನ್ನಳಿದ 40 ಬೆಡ್​ಗಳು ಭರ್ತಿಯಾಗಿದೆ. ಇನ್ನು 6 ಐಸಿಯು ಬೆಡ್​ಗಳ ಪೈಕಿ 2 ಮಾತ್ರ ಖಾಲಿ ಇದೆ. ಪ್ರತಿನಿತ್ಯ 80-90 ರಷ್ಟು ಮಕ್ಕಳು ವಾಣಿ ವಿಲಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೂ ಶೇ 60 ಬೆಡ್​ಗಳು ಭರ್ತಿ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 182 ಬೆಡ್ ಮೀಸಲು ( ಕೊವಿಡ್ ಹಾಗು ಹೆರಿಗೆ ) ಇಡಲಾಗಿದೆ. 120 ಬೆಡ್​ಗಳು ವೈರಲ್ ಸೋಂಕು ಸೇರಿದಂತೆ ನಾನಾ ಕಾಯಿಲೆಗೆ ಮೀಸಲಿರಿಸಲಾಗಿದೆ. ಇನ್ನು 120 ಮಕ್ಕಳ ಬೆಡ್​ಗಳ ಪೈಕಿ 80 ಬೆಡ್ ಭರ್ತಿಯಾಗಿದೆ. 8 ಐಸಿಯು ಬೆಡ್​ಗಳ ಪೈಕಿ 5 ಭರ್ತಿಯಾಗಿದೆ. ಪ್ರತಿ ನಿತ್ಯ 60 ರಿಂದ 80 ರಷ್ಟು ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಬೌರಿಂಗ್ ಇಎಸ್ಐ ಹಾಗೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿಯೂ ಶೇ 50 ರಷ್ಟು ಬೆಡ್ ಭರ್ತಿಯಾಗಿದೆ. ಬ್ರಾಂಕೈಟಿಸ್, ಡೆಂಗ್ಯೂ, ನ್ಯೂಮೋನಿಯಾ, ರಕ್ತಹಿನತೆ, ಅಸ್ತಮ ಸೇರಿದಂತೆ ನಾನಾ ಕಾಯಿಲೆಯಿಂದ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ಇದನ್ನೂ ಓದಿ:
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳು ಭರ್ತಿಯಾಗಿವೆ; ಆಸ್ಪತ್ರೆ ಎದುರು ಬೋರ್ಡ್ ಹಾಕಿರುವ ಜಿಲ್ಲಾಡಳಿತ

ಕರ್ನಾಟಕದಲ್ಲಿ ಹೆಚ್ಚಾಯ್ತು ಕೊರೊನಾ ಮೂರನೇ ಅಲೆ ಭೀತಿ! ಗೌರಿ ಗಣೇಶ ಹಬ್ಬದ ಬಳಿಕ ಹೆಚ್ಚಾದ ಸೋಂಕಿತರ ಸಂಖ್ಯೆ

Published On - 9:05 am, Sat, 18 September 21