AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honey Trap? ಸುಂದರ ಯುವತಿ ಸೋಗಿನಲ್ಲಿ ಪುರುಷರಿಗೆ ವಂಚನೆ; ಬೃಹತ್ ಜಾಲಕ್ಕೆ ಸಹಕರಿಸ್ತಿದ್ದ ಗ್ಯಾಂಗ್ ಬಂಧಿಸಿದ ಸಿಐಡಿ

ಆಗಸ್ಟ್ 22ರಂದು ವಂಚನೆ ಸಂಬಂಧ ದೂರು ದಾಖಲಾಗಿತ್ತು. ಸಿಐಡಿ ಅಧಿಕಾರಿಗಳು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಬಳಿಕ ಹರಿಯಾಣದ ವಿವಿಧ ಕಡೆ ಹುಡುಕಾಟ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

Honey Trap? ಸುಂದರ ಯುವತಿ ಸೋಗಿನಲ್ಲಿ ಪುರುಷರಿಗೆ ವಂಚನೆ; ಬೃಹತ್ ಜಾಲಕ್ಕೆ ಸಹಕರಿಸ್ತಿದ್ದ ಗ್ಯಾಂಗ್ ಬಂಧಿಸಿದ ಸಿಐಡಿ
ಪ್ರಾತಿನಿಧಿಕ ಚಿತ್ರ
TV9 Web
| Updated By: preethi shettigar|

Updated on:Sep 18, 2021 | 11:33 AM

Share

ಬೆಂಗಳೂರು: ಸುಂದರ ಯುವತಿ ಸೋಗಿನಲ್ಲಿ ಪುರುಷರಿಗೆ ವಂಚನೆ ಮಾಡುತ್ತಿದ್ದ ಗುಂಪಿಗೆ ಸಹಕರಿಸುತ್ತಿದ್ದವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಂಚನೆ ಮಾಡುತ್ತಿದ್ದವರಿಗೆ ಸಿಮ್ ಪೂರೈಸುತ್ತಿದ್ದ ಹರಿಯಾಣ ಮೂಲದ ಮೊಹಮ್ಮದ್ ಮುಜಾಹಿದ್, ಆಸೀಫ್ ಮೊಹಮ್ಮದ್, ಇಕ್ಬಾಲ್‌ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 22ರಂದು ವಂಚನೆ ಸಂಬಂಧ ದೂರು ದಾಖಲಾಗಿತ್ತು. ಸಿಐಡಿ ಅಧಿಕಾರಿಗಳು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಬಳಿಕ ಹರಿಯಾಣದ ವಿವಿಧ ಕಡೆ ಹುಡುಕಾಟ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಭಾರತದಾದ್ಯಂತ 3,951 ಪ್ರಕರಣಗಳಲ್ಲಿ ಆರೋಪಿಗಳು ಭಾಗಿರುವುದು ಪತ್ತೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಈ ತಂಡ, ನಕಲಿ‌ ಆಧಾರ್ ಕಾರ್ಡ್​ ತಯಾರಿ, ಬೇರೆಯವರ ಪ್ಯಾನ್ ಕಾರ್ಡ್​ಗಳ ದುರ್ಬಳಕೆ ಮಾಡುತಿದ್ದರು. ಅಕ್ರಮವಾಗಿ ಸಿಮ್ ಕಾರ್ಡ್, ಇ-ವ್ಯಾಲೆಟ್ ಆ್ಯಕ್ಟೀವ್ ಮಾಡುತಿದ್ದ ಆರೋಪಿಗಳು, ಹಣಕ್ಕಾಗಿ ವಂಚಕರಿಗೆ ಮಾರಾಟ ಮಾಡುತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಪ್ಯಾನ್ ಕಾರ್ಡ್ ಮಾಹಿತಿ ಆಧರಿಸಿ ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದ ಆರೋಪಿಗಳು, ಕೃತ್ಯದಲ್ಲಿ ತಮ್ಮದೇ ಆದ ಪಾತ್ರಗಳನ್ನು ಹೊಂದಿದ್ದಾರೆ. ಸದ್ಯ ಬಂಧಿಸಲ್ಪಟ್ಟ ಆರೋಪಿಗಳಲ್ಲಿ ಪ್ರಮುಖನಾದ ಮುಜಾಹಿದ್, ಬರೊಬ್ಬರಿ 5 ಸಾವಿರ ಸಿಮ್​ಗಳ ಇ-ವ್ಯಾಲೆಟ್ ಆ್ಯಕ್ಟೀವ್ ಮಾಡಿದ್ದಾನೆ.

ಸಿಮ್ ಕಾರ್ಡ್ ಪಾಯಿಂಟ್ ಆಫ್ ಸೇಲ್ ಏಜೆನ್ಸಿ ಪಡೆದಿದ್ದ ಮುಜಾಹಿದ್, ಈ ಮೂಲಕ ಈ ಹಿಂದೆ ಇ-ವ್ಯಾಲೆಟ್​ನಲ್ಲಿದ್ದ ನಂಬರ್​ಗಳ ಪಟ್ಟಿ ಮಾಡುತ್ತಿದ್ದ. ಬಳಿಕ ಆ ನಂಬರ್ ಆ್ಯಕ್ಟೀವ್ ಮಾಡಿತಿದ್ದ. ನಂತರ ಅದನ್ನು ವಂಚಕರಿಗೆ ನೀಡುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಆಸಿಫ್ ಸಿಮ್ ಆ್ಯಕ್ಟೀವ್ ಮಾಡುವಲ್ಲಿ‌ ಮುಜಾಹಿದ್​ಗೆ ಎಜೆಂಟ್​ ಆಗಿ ಕೆಲಸ ಮಾಡುತಿದ್ದ. ಈತ ನಕಲಿ ಫೋಟೊ ಹಾಗೂ ದಾಖಲಾತಿ ಪಡೆದು ಸಿಮ್ ಆ್ಯಕ್ಟೀವ್ ಮಾಡುತಿದ್ದ. ಇನ್ನು ನಕಲಿ ಆಧಾರ್ ಕಾರ್ಡ್ ಸೃಷ್ಟಿ ಮಾಡುತಿದ್ದ ಇಕ್ಬಾಲ್, ಮುಜಾಹಿದ್ ನೀಡಿದ ನಕಲಿ ಫೋಟೊಗೆ ಅನುಸಾರವಾಗಿ ಆಧಾರ್ ಕಾರ್ಡ್ ಮಾಡುತ್ತಿದ್ದ. ಕಂಪ್ಯೂಟರ್ ಪ್ರಿಂಟಿಂಗ್ ಮತ್ತು ಜೆರೆಕ್ಸ್ ಅಂಗಡಿ ಹೊಂದಿರುವ ಇಕ್ಬಾಲ್, ಸಿಮ್ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಬಳಸಿಕೊಳ್ಳುತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮಂಡ್ಯದಲ್ಲಿನ ಹಾಲಿಗೆ ನೀರು ಬೆರೆಸಿ ವಂಚನೆ ಪ್ರಕರಣ ಸಿಐಡಿ ತನಿಖೆಗೆ : ಸಿಎಂ ಯಡಿಯೂರಪ್ಪ ಘೋಷಣೆ

ಬೆಳಗಾವಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ; 4.9 ಕೆಜಿ ಚಿನ್ನ ನಾಪತ್ತೆ, ಐಜಿಪಿ ರಾಘವೇಂದ್ರರನ್ನು ವಿಚಾರಣೆ ನಡೆಸಿದ ಸಿಐಡಿ

Published On - 11:27 am, Sat, 18 September 21