ನಾವು ಕೊರೊನಾ 3ನೇ ಅಲೆಯ ಅಂತ್ಯಕ್ಕೆ ಬಂದಿದ್ದೇವೆ: ಡಾ.ಸಿ.ಎನ್. ಮಂಜುನಾಥ್ ಹೇಳಿಕೆ
ಚೀನಾದಿಂದ ಕೊರೊನಾ ವೈರಸ್ ಬಂದಿದೆ. ತಿನ್ನಬಾರದ್ದು ತಿಂದರೆ, ಮಾಡಬಾರದ್ದು ಮಾಡಿದ್ರೆ ಈ ರೀತಿ ಆಗುತ್ತೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಬೆಂಗಳೂರಿನಲ್ಲಿ ಡಾ.ಸಿ.ಎನ್. ಮಂಜುನಾಥ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ನಾವು ಕೊರೊನಾ 3ನೇ ಅಲೆಯ ಅಂತ್ಯಕ್ಕೆ ಬಂದಿದ್ದೇವೆ. ಮೊದಲ ಮತ್ತು 2ನೇ ಅಲೆ ಸಾಕಷ್ಟು ಜನರ ಬಲಿ ಪಡೆಯಿತು. ಪ್ರಕೃತಿ ವಿರುದ್ಧವಾಗಿ ಹೋದರೆ ಯಾವ ರೀತಿ ಸಮಸ್ಯೆ ಆಗುತ್ತದೆ ಎಂಬುದಕ್ಕೆ ಕೊವಿಡ್ ಉದಾಹರಣೆ. ಪ್ರತಿ ನೂರು ವರ್ಷಗಳಿಗೊಮ್ಮೆ ರೋಗಗಳು ಬಂದಿವೆ. ಪ್ಲೇಗ್, ಕಾಲರಾ ರೀತಿ ಇಂತಹ ರೋಗಗಳು ಬಂದಿದೆ. ಚೀನಾದಿಂದ ಕೊರೊನಾ ವೈರಸ್ ಬಂದಿದೆ. ತಿನ್ನಬಾರದ್ದು ತಿಂದರೆ, ಮಾಡಬಾರದ್ದು ಮಾಡಿದ್ರೆ ಈ ರೀತಿ ಆಗುತ್ತೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಬೆಂಗಳೂರಿನಲ್ಲಿ ಡಾ.ಸಿ.ಎನ್. ಮಂಜುನಾಥ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ರೋಗಿಯ ಆರ್ಥಿಕ ಪರಿಸ್ಥಿತಿ ನೋಡಿ ಚಿಕಿತ್ಸೆ ಮಾಡಬೇಕು. ರೋಗಿ ಬದುಕುವ ಸಾಧ್ಯತೆ ಇಲ್ಲದಿದ್ದರೆ ಕುಟುಂಬಸ್ಥರಿಗೆ ತಿಳಿಸಬೇಕು. ಸುಮ್ಮನೆ ಚಿಕಿತ್ಸೆ ಹೆಸರಿನಲ್ಲಿ ಲಕ್ಷ ಲಕ್ಷ ಬಿಲ್ ಮಾಡಬಾರದು. ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ಭೂಮಿ, ಸವಲತ್ತು ಪಡೆದಿವೆ. ಖಾಸಗಿ ಆಸ್ಪತ್ರೆಗಳು ಸರ್ಕಾರಿ ದರದಲ್ಲಿ ಚಿಕಿತ್ಸೆ ನೀಡಬೇಕು. ಬಡವರು, ಮಧ್ಯಮ ವರ್ಗದವರಿಗೆ ಸರ್ಕಾರಿ ದರದಲ್ಲಿ ಚಿಕಿತ್ಸೆ ಕೊಡಬೇಕು ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಕೊರೊನಾ ನಿಯಮ ಇನ್ನಷ್ಟು ಸಡಿಲಿಕೆ ಬಗ್ಗೆ ಡಾ. ಸುಧಾಕರ್ ಹೇಳಿಕೆ
ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಭೆ ಮುಕ್ತಾಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆಗಿನ ಸಭೆ ನಂತರ ಡಾ. ಸುಧಾಕರ್ ಮಾತನಾಡಿದ್ದಾರೆ. ಡಿಸೆಂಬರ್ ಕೊನೆ ವಾರದಲ್ಲಿ ಒಮ್ರಿಕಾನ್ ಹೆಚ್ಚಾದ ಹಿನ್ನೆಲೆ ಕೆಲವು ಕ್ರಮಗಳನ್ನ ನಿಯಂತ್ರಣ ಕ್ರಮ ತೆಗೆದುಕೊಳ್ಳಲಾಗಿತ್ತು. ನೈಟ್ ಕರ್ಫ್ಯೂ ಸೇರಿದಂತೆ ಹಲವು ಕ್ರಮ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ಸಡಿಲಿಕೆ ಮಾಡಲು ಜನವರಿ 15 ರಿಂದ ಆರಂಭ ಮಾಡಿದ್ವಿ. ಥಿಯೇಟರ್, ಈಜುಕೊಳ, ಯೋಗಾ, 50:50 ನಿಯಮ ಜಾರಿ ಇತ್ತು.
ಈ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡಿದ್ವಿ. ಚಲನಚಿತ್ರ ರಂಗ ಕೂಡಾ ನಷ್ಟ ಆಗಿತ್ತು. ಶೇಕಡಾ 4 ರಿಂದ 6 ರಷ್ಟು ಆಸ್ಪತ್ರೆ ಸೇರುತ್ತಿದ್ದ ಪ್ರಮಾಣ ಈಗ 2ಕ್ಕೆ ಇಳಿದಿದೆ. ನಾಳೆಯಿಂದ ರಾಜ್ಯದಲ್ಲಿ ಶೇಕಡಾ 100 ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಯೋಗ, ಜೀಮ್, ಈಜುಕೊಳ ಶೇ 100 ರಷ್ಟು ತೆರೆಯಲು ಅವಕಾಶ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನ ಮಾರ್ಗಸೂಚಿ ಬಿಡುಗಡೆ ಮಾಡ್ತೀವಿ. ಸಿನಿಮಾ ವೀಕ್ಷಣೆ ಮಾಡುವರು ಕಡ್ಡಾಯ ಮಾಸ್ಕ್ ಹಾಕಿರಬೇಕು. ಯಾವುದೇ ಒಬ್ಬ ವ್ಯಕ್ತಿ ಪ್ರವೇಶಕ್ಕೆ ಎರಡು ಡೋಸ್ ಕಡ್ಡಾಯವಾಗಿ ಆಗಿರಬೇಕು. ಥಿಯೇಟರ್ ಗಳಲ್ಲಿ ತಿಂಡಿಗಳನ್ನ. ತೆಗೆದುಕೊಂಡು ಹೋಗದಂತೆ ನಿರ್ಬಂಧ ಇರಲಿದೆ. ಕಠಿಣ ನಿಯಮ ಸಡಿಲಿಕೆ ಮಾಡ್ತಾ ಇದ್ದೀವಿ ಅಂದ್ರೆ ಮೈಮರೆಯುವಂತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಹೆಚ್ಚಳ! ಹತ್ತು ದಿನದಲ್ಲಿ 461 ಮಂದಿ ಕೊವಿಡ್ಗೆ ಬಲಿ
ಇದನ್ನೂ ಓದಿ: ಒಮಿಕ್ರಾನ್ನಿಂದ ಭಾರತದಲ್ಲಿ ಶುರುವಾದ ಕೊವಿಡ್ 19 ಮೂರನೇ ಅಲೆ ಹೆಚ್ಚು ಬಾಧಿಸಿದ್ದು ಕಿರಿಯ ವಯಸ್ಸಿನವರಿಗೆ: ಐಸಿಎಂಆರ್ ವರದಿ