ಬೆಂಗಳೂರಿನಲ್ಲಿ ಅನುಮತಿ ಇಲ್ಲದೆ ರಸ್ತೆ ಅಗೆಯುತ್ತಿರುವವರ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ: ಬಿಬಿಎಂಪಿ ಆಯುಕ್ತ
ರಸ್ತೆ ಗುಂಡಿಗಳನ್ನು ಅನುಮತಿ ಇಲ್ಲದೆ ತೆಗೆಯುವವರ ಮೇಲೆ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಮನವಿ ಮಾಡಿದ್ದೇವೆ. ಈ ಕುರಿತಾಗಿ ತಮ್ಮ ಅಧಿಕಾರಿಗಳು ಸ್ಪಂದಿಸುವಂತೆ ತಿಳಿಸಿದ್ಧೆವೆ ಎಂದು ಹೇಳಿದ್ದಾರೆ.
ಬೆಂಗಳೂರು: ನಗರದಲ್ಲಿ ಅನುಮತಿ ಇಲ್ಲದೆ ರಸ್ತೆ ಅಗೆಯುತ್ತಿರುವ ವಿಚಾರವಾಗಿ FIR ದಾಖಲಿಸಲು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೇವೆ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಶಾಲಾ ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್ ನೀಡುವ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಶಾಲಾ ಕಾಲೇಜುಗಳು ಆರಂಭವಾಗಿದ್ದರಿಂದ ಸಮಸ್ಯೆ ಇಲ್ಲ. ಶಾಲಾ- ಕಾಲೇಜುಗಳಲ್ಲೂ ಲಸಿಕಾ ಅಭಿಯಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಸ್ತೆ ಗುಂಡಿಗಳನ್ನು ಅನುಮತಿ ಇಲ್ಲದೆ ತೆಗೆಯುವವರ ಮೇಲೆ ಎಫ್ಐಆರ್ ದಾಖಲಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಮನವಿ ಮಾಡಿದ್ದೇವೆ. ಈ ಕುರಿತಾಗಿ ತಮ್ಮ ಅಧಿಕಾರಿಗಳು ಸ್ಪಂದಿಸುವಂತೆ ತಿಳಿಸಿದ್ಧೆವೆ ಎಂದು ಹೇಳಿದ್ದಾರೆ.
ಬಿಬಿಎಂಪಿ ಬಜೆಟ್ ಬಗ್ಗೆ ಇರುವ ಚಟುವಟಿಕೆಗಳನ್ನು ಬರುವ ದಿನಗಳಲ್ಲಿ ಪ್ರಾರಂಭಿಸುತ್ತೇವೆ. ನಮ್ಮಲ್ಲಿ ಇರುವ ಆದಾಯ ಮೂಲಗಳು ಹಾಗೂ ರಾಜ್ಯ ಸರ್ಕಾರದ ಆದಾಯ ಮೂಲಗಳು ಅಂದಾಜಿನಲ್ಲಿ ಏನೆಲ್ಲ ಕಾಮಾಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಯೋಜಿಸುತ್ತೇವೆ ಎಂಬ ಬಗ್ಗೆ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಹೇಳಿದ್ದಾರೆ. ಬಿಬಿಎಂಪಿಯ ದಿನನಿತ್ಯ ಮೆಂಟೇನೆನ್ಸ್ ವೆಚ್ಚಕ್ಕೆ ಎಷ್ಟು ತಗುಲುತ್ತದೆ, ಹೊಸ ಕಾಮಗಾರಿಗಳಿಗೆ ಎಷ್ಟು ಹಣ ತಗಲುತ್ತದೆ ಎನ್ನುವುದನ್ನು ನೋಡಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಸಮಗ್ರ ಪ್ರೊಟೆಕ್ಸ್ಟ್ ರೆಡಿಮಾಡಬೇಕಾಗುತ್ತದೆ. ಹೊಸ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಚರ್ಚೆ ಮಾಡಲಿದ್ದೇವೆ ಎಂದು ಗೌರವ್ ಗುಪ್ತಾ ತಿಳಿಸಿದ್ದಾರೆ.
ನಾವು ಕೊರೊನಾ 3ನೇ ಅಲೆಯ ಅಂತ್ಯಕ್ಕೆ ಬಂದಿದ್ದೇವೆ: ಡಾ.ಸಿ.ಎನ್. ಮಂಜುನಾಥ್ ಹೇಳಿಕೆ
ನಾವು ಕೊರೊನಾ 3ನೇ ಅಲೆಯ ಅಂತ್ಯಕ್ಕೆ ಬಂದಿದ್ದೇವೆ. ಮೊದಲ ಮತ್ತು 2ನೇ ಅಲೆ ಸಾಕಷ್ಟು ಜನರ ಬಲಿ ಪಡೆಯಿತು. ಪ್ರಕೃತಿ ವಿರುದ್ಧವಾಗಿ ಹೋದರೆ ಯಾವ ರೀತಿ ಸಮಸ್ಯೆ ಆಗುತ್ತದೆ ಎಂಬುದಕ್ಕೆ ಕೊವಿಡ್ ಉದಾಹರಣೆ. ಪ್ರತಿ ನೂರು ವರ್ಷಗಳಿಗೊಮ್ಮೆ ರೋಗಗಳು ಬಂದಿವೆ. ಪ್ಲೇಗ್, ಕಾಲರಾ ರೀತಿ ಇಂತಹ ರೋಗಗಳು ಬಂದಿದೆ. ಚೀನಾದಿಂದ ಕೊರೊನಾ ವೈರಸ್ ಬಂದಿದೆ. ತಿನ್ನಬಾರದ್ದು ತಿಂದರೆ, ಮಾಡಬಾರದ್ದು ಮಾಡಿದ್ರೆ ಈ ರೀತಿ ಆಗುತ್ತೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಬೆಂಗಳೂರಿನಲ್ಲಿ ಡಾ.ಸಿ.ಎನ್. ಮಂಜುನಾಥ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.
ರೋಗಿಯ ಆರ್ಥಿಕ ಪರಿಸ್ಥಿತಿ ನೋಡಿ ಚಿಕಿತ್ಸೆ ಮಾಡಬೇಕು. ರೋಗಿ ಬದುಕುವ ಸಾಧ್ಯತೆ ಇಲ್ಲದಿದ್ದರೆ ಕುಟುಂಬಸ್ಥರಿಗೆ ತಿಳಿಸಬೇಕು. ಸುಮ್ಮನೆ ಚಿಕಿತ್ಸೆ ಹೆಸರಿನಲ್ಲಿ ಲಕ್ಷ ಲಕ್ಷ ಬಿಲ್ ಮಾಡಬಾರದು. ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ಭೂಮಿ, ಸವಲತ್ತು ಪಡೆದಿವೆ. ಖಾಸಗಿ ಆಸ್ಪತ್ರೆಗಳು ಸರ್ಕಾರಿ ದರದಲ್ಲಿ ಚಿಕಿತ್ಸೆ ನೀಡಬೇಕು. ಬಡವರು, ಮಧ್ಯಮ ವರ್ಗದವರಿಗೆ ಸರ್ಕಾರಿ ದರದಲ್ಲಿ ಚಿಕಿತ್ಸೆ ಕೊಡಬೇಕು ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯ ವಿಜ್ಞಾನಿಗಳಿಂದ ಕೊರೊನಾ ತಡೆಗೆ ತಾಮ್ರ ಆಧಾರಿತ ಆ್ಯಂಟಿವೈರಲ್ ಫೇಸ್ ಮಾಸ್ಕ್ ಅಭಿವೃದ್ಧಿ
ಇದನ್ನೂ ಓದಿ: ಒಮಿಕ್ರಾನ್ನಿಂದ ಭಾರತದಲ್ಲಿ ಶುರುವಾದ ಕೊವಿಡ್ 19 ಮೂರನೇ ಅಲೆ ಹೆಚ್ಚು ಬಾಧಿಸಿದ್ದು ಕಿರಿಯ ವಯಸ್ಸಿನವರಿಗೆ: ಐಸಿಎಂಆರ್ ವರದಿ