ಬೆಂಗಳೂರಲ್ಲಿ ದಂಪತಿಗೆ ಕೊರೊನಾ, 30ಕ್ಕೂ ಹೆಚ್ಚು ಪೊಲೀಸ್ ಠಾಣೆ ಸಿಬ್ಬಂದಿಗೆ ಆತಂಕ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮಿತಿ ಮೀರಿದೆ. ನಿನ್ನೆ ಒಂದೇ ದಿನ ನಗರದಲ್ಲಿ 596 ಕೊರೊನಾ ಕೇಸ್ ಪತ್ತೆಯಾಗಿದೆ. ಈ ಮಧ್ಯೆ ಬಿಟಿಎಂ ಲೇಔಟ್ನ 2ನೇ ಹಂತದಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದ ದಂಪತಿಗೂ ಕೊರೊನಾ ವಕ್ಕರಿಸಿದೆ. BTM 2ನೇ ಹಂತ 29ನೇ ಮೈನ್ 2ನೇ ಕ್ರಾಸ್ನಲ್ಲಿ ದಂಪತಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಬೆಂಗಳೂರು ದಕ್ಷಿಣ ವಿಭಾಗದಲ್ಲಿ 30ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಿಗೆ ಪ್ರಿಂಟಿಂಗ್ ಬುಕ್ಗಳನ್ನು ದಂಪತಿ ಸರಬರಾಜು ಮಾಡುತ್ತಿದ್ದರು. ಹಾಗಾಗಿ ನಗರದ ಹಲವು ಪೊಲೀಸ್ ಠಾಣೆಯ […]

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮಿತಿ ಮೀರಿದೆ. ನಿನ್ನೆ ಒಂದೇ ದಿನ ನಗರದಲ್ಲಿ 596 ಕೊರೊನಾ ಕೇಸ್ ಪತ್ತೆಯಾಗಿದೆ. ಈ ಮಧ್ಯೆ ಬಿಟಿಎಂ ಲೇಔಟ್ನ 2ನೇ ಹಂತದಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದ ದಂಪತಿಗೂ ಕೊರೊನಾ ವಕ್ಕರಿಸಿದೆ.
BTM 2ನೇ ಹಂತ 29ನೇ ಮೈನ್ 2ನೇ ಕ್ರಾಸ್ನಲ್ಲಿ ದಂಪತಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಬೆಂಗಳೂರು ದಕ್ಷಿಣ ವಿಭಾಗದಲ್ಲಿ 30ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಿಗೆ ಪ್ರಿಂಟಿಂಗ್ ಬುಕ್ಗಳನ್ನು ದಂಪತಿ ಸರಬರಾಜು ಮಾಡುತ್ತಿದ್ದರು. ಹಾಗಾಗಿ ನಗರದ ಹಲವು ಪೊಲೀಸ್ ಠಾಣೆಯ ಎಸಿಪಿ, ಡಿಸಿಪಿ ಹಾಗೂ ಸಿಬ್ಬಂದಿಗೂ ಆತಂಕ ಶುರುವಾಗಿದೆ.
ದಂಪತಿಗೆ ಮನೆಯ ಪಕ್ಕದಲ್ಲೇ SSLC ಪರೀಕ್ಷಾ ಕೇಂದ್ರವಿರುವ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಎಕ್ಸಾಂ ಬರೆಯುವ ವಿದ್ಯಾರ್ಥಿಗಳಿಗೂ ಸೋಂಕು ಹರಡುವ ಆತಂಕ ಶುರುವಾಗಿದೆ.
Published On - 4:58 pm, Sun, 28 June 20




