Crime: ಜೆಪಿ‌ ನಗರದಲ್ಲಿ ಪೋಲಿ‌ ಅಲಿಯುತ್ತಿದ್ದವ ಒಬ್ಬನ ತಲೆಯನ್ನೇ ಸೀಳಿದ, ಮೊಬೈಲ್ ರಿಪೇರಿಗೆ ಹಣ ಇಲ್ಲವೆಂದು ಯುವಕ ಆತ್ಮಹತ್ಯೆ

ಬಾಬಾ ವೈನ್ಸ್ ನಲ್ಲಿ ಕುಡಿದು ಮೂರು ಸಾವಿರ ರೂಪಾಯಿ ಬಿಲ್ ಮಾಡಿದ್ದ. ಹಣ ಕೇಳಿದ್ದಕ್ಕೆ ಐದು ನಿಮಿಷ ಬರ್ತಿನಿ ಎಂದು ಪಕ್ಕದ ಗುರು ಬಾರ್ ಹತ್ರ ಬಂದಿದ್ದ. ಅಲ್ಲಿ ಜಾಗ ಬಿಡೊ ವಿಚಾರಕ್ಕೆ ಮತ್ತೋರ್ವ ವ್ಯಕ್ತಿ ಜೊತೆ ಕಿರಿಕ್ ತೆಗೆದಿದ್ದ. ಅದಕ್ಕೆ ಕೋಪಗೊಂಡು ಫರ್ವೇಜ್ ಖಾನ್ ಎಂಬಾತನ ತಲೆಗೆ ಎಣ್ಣೆ ಬಾಟಲಿಯಿಂದ ಹೊಡೆದಿದ್ದಾನೆ ಅನಿಲ.

Crime: ಜೆಪಿ‌ ನಗರದಲ್ಲಿ ಪೋಲಿ‌ ಅಲಿಯುತ್ತಿದ್ದವ ಒಬ್ಬನ ತಲೆಯನ್ನೇ ಸೀಳಿದ, ಮೊಬೈಲ್ ರಿಪೇರಿಗೆ ಹಣ ಇಲ್ಲವೆಂದು ಯುವಕ ಆತ್ಮಹತ್ಯೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 06, 2022 | 1:58 PM

ಬೆಂಗಳೂರು: ಬೆಂಗಳೂರು ಜನ ಗಾಬರಿಗೆ ಬೀಳುವಂತೆ ಅಲ್ಲಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಜೆಪಿ‌ ನಗರ ಏರಿಯಾದಲ್ಲಿ ಪೋಲಿ‌ ಅಲಿಯುತ್ತಿದ್ದ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ತಲೆಯನ್ನೇ ಸೀಳಿರುವ ಘಟನೆ ನಡೆದಿದೆ. ಜೆಪಿ‌ ನಗರ ಸಿದ್ದೇಶ್ವರ ಚಿತ್ರ ಮಂದಿರದ ಬಳಿಯರುವ ಗುರು ಬಾರ್ ನಲ್ಲಿ ಈ ಘಟನೆ ನಡೆದಿದೆ. ಕುಡಿದು ಏರಿಯಾದಲ್ಲೆಲ್ಲ ಕಿರಿಕ್ ಮಾಡಿಕೊಳ್ತಿದ್ದ ಅನಿಲ್ ಎಂಬ ಆಸಾಮಿ ಬಾರ್ ನಲ್ಲಿ ಹುಡುಗರ ಗುಂಪು ಕಟ್ಟಿಕೊಂಡು ಕುಡಿದು ಹಣ ಕೊಡದೇ ಎಸ್ಕೇಪ್ ಆಗಿಬಿಡ್ತಿದ್ದ. ಬಾರ್ ನವ್ರು ಹಣ ಕೇಳಿದ್ರೆ ಐದು ನಿಮಿಷಕ್ಕೆ ಬರ್ತಿನಿ‌ ಎಂದು ಯಾಮಾರಿಸುತ್ತಿದ್ದ. ಕ್ರೆಡಿಟ್​ ಕಾರ್ಡ್ ಕೊಡ್ತೀನಿ ಇರ್ರಿ ಎಂದೂ ಬಿಲ್ಡಪ್ ಕೊಡ್ತಿದ್ದ ಅನಿಲ್​.

ಲೇಟೆಸ್ಟ್ ಪ್ರಕರಣದಲ್ಲಿ… ಬಾಬಾ ವೈನ್ಸ್ ನಲ್ಲಿ ಕುಡಿದು ಮೂರು ಸಾವಿರ ರೂಪಾಯಿ ಬಿಲ್ ಮಾಡಿದ್ದ. ಹಣ ಕೇಳಿದ್ದಕ್ಕೆ ಐದು ನಿಮಿಷ ಬರ್ತಿನಿ ಎಂದು ಪಕ್ಕದ ಗುರು ಬಾರ್ ಹತ್ರ ಬಂದಿದ್ದ. ಅಲ್ಲಿ ಜಾಗ ಬಿಡೊ ವಿಚಾರಕ್ಕೆ ಮತ್ತೋರ್ವ ವ್ಯಕ್ತಿ ಜೊತೆ ಕಿರಿಕ್ ತೆಗೆದಿದ್ದ. ಅದಕ್ಕೆ ಕೋಪಗೊಂಡು ಫರ್ವೇಜ್ ಖಾನ್ ಎಂಬಾತನ ತಲೆಗೆ ಎಣ್ಣೆ ಬಾಟಲಿಯಿಂದ ಹೊಡೆದಿದ್ದಾನೆ ಅನಿಲ. ಆರೋಪಿ ಅನಿಲನನ್ನು ಬಂಧಿಸಿ, ಪುಟ್ಟೇನಹಳ್ಳಿ ಪೊಲೀಸರು ಜೈಲಿಗೆ ಕಳಿಸಿಕೊಟ್ಟಿದ್ದಾರೆ.

ನೀರಿಗೆ ಬಿದ್ದು ಕೆಟ್ಟುಹೋದ ಮೊಬೈಲ್, ರಿಪೇರಿಗೆ ಹಣ ಇಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ!

ಮೈಸೂರು: ನೀರಿಗೆ ಬಿದ್ದು ಕೆಟ್ಟುಹೋದ ಮೊಬೈಲ್ ಮತ್ತು ಅದರ ರಿಪೇರಿಗೆ ಹಣ ಇಲ್ಲವೆಂದು ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ಯರಗನಹಳ್ಳಿಯ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಮಹೇಂದ್ರ( 22) ಮೃತ ದುರ್ದೈವಿ ಯುವಕ. ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರನ ಮೊಬೈಲ್ ನೀರಿನಲ್ಲಿ ಬಿದ್ದು ಕೆಟ್ಟುಹೋಗಿತ್ತು. ಆದರೆ ಆರ್ಥಿಕ ಸಮಸ್ಯೆಯಲ್ಲಿದ್ದ ಮಹೇಂದ್ರನಿಗೆ ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಮಾನಸಿಕವಾಗಿ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 1:48 pm, Thu, 6 January 22

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ